ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಕಂಪನಿಗೆ ಸುಧಾ ಬರೆದ ಪತ್ರ

By * ಸುಧಾಮೂರ್ತಿ ; ಕನ್ನಡಕ್ಕೆ: ವಿಶ್ವನಾಥ ಹುಲಿಕಲ್
|
Google Oneindia Kannada News

JRD Tata
ಅವರು ಟಾಟಾ ವಂಶಸ್ಥರಲ್ಲೇ ಯಾರಾದರೊಬ್ಬರು ಆಗಿರಬೇಕೆಂದು ಊಹೆ ಮಾಡಿದೆ. ಟಾಟಾ ಕಂಪೆನಿಗಳ ಸಮುಚ್ಚಯದ ಮುಖ್ಯಸ್ಥರು JRD ಟಾಟಾ ಎಂಬುದು ನನಗೆ ತಿಳಿದಿತ್ತು. ಅವರ ಭಾವಚಿತ್ರವನ್ನು ವಾರ್ತಾ ಪತ್ರಿಕೆಗಳಲ್ಲಿ ನೋಡಿದೆ. (ಸುಮಂತ್ ಮಾಳಗಾಂವಕರ್ ಎನ್ನುವವರು ಆಗ ಕಂಪನಿಯ ಅಧ್ಯಕ್ಷರಾಗಿದ್ದರು) ಹೀಗಾಗಿ ಪತ್ರವನ್ನು ಜೆಆರ್ ಡಿ ಟಾಟಾ ಅವರನ್ನುದ್ದೇಶಿಸಿ ಬರೆಯಲಾರಂಭಿಸಿದೆ. ಇಂದಿಗೂ ಸಹ ಆ ಪತ್ರದಲ್ಲಿ ಬರೆದದ್ದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ.

"ವಿಖ್ಯಾತ ಟಾಟಾರವರು ಯಾವಾಗಲೂ ಮುಂಚೂಣಿಯಲ್ಲಿ ಇರುವಂತವರು. ಭಾರತದಲ್ಲಿ ಮೂಲಭೂತ ಉದ್ದಿಮೆಗಳಾದ ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ವಸ್ತುಗಳು, ಉಡುಪು ಮತ್ತು ವಾಹನಗಳು- ಇಂತವುಗಳನ್ನು ಮೊಟ್ಟಮೊದಲು ಸ್ಥಾಪಿಸಿದವರೇ ಅವರು. 1900ರಿಂದ ಭಾರತದಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದವರು. ಅಷ್ಟೇ ಅಲ್ಲ, ಭಾರತೀಯ ವಿಜ್ಞಾನ ಮಂದಿರವನ್ನು ಸ್ಥಾಪಿಸಿದ ಹೆಗ್ಗಳಿಕೆ ಟಾಟಾರವರಿಗೇ ಸಲ್ಲಬೇಕು. ಇಂತಹ ವಿದ್ಯಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯವೇ ಸರಿ! ಹೀಗಾಗಿ ಟೆಲ್ಕೋ ಅಂತಹ ಕಂಪೆನಿಯಲ್ಲಿ ಲಿಂಗ ಸಂಬಂಧೀ ತಾರತಮ್ಯ ನಡೆಸುತ್ತಿರುವುದು ನನಗೆ ಆಶ್ಚರ್ಯ ಹಾಗೂ ಕಳವಳಕ್ಕೆ ಕಾರಣವಾಗಿದೆ".

ಆ ಕಾಗದವನ್ನು ಪೋಸ್ಟ್ ಮಾಡಿದ ನಂತರ, ಆ ವಿಷಯವನ್ನು ಮರೆತುಬಿಟ್ಟೆ. ಇದಾದ ಹತ್ತು ದಿನಗಳೊಳಗೆ ಟೆಲ್ಕೋ ಕಂಪನಿ ಪುಣೆ ಶಾಖೆಯಿಂದ ಅವರ ಖರ್ಚಿನಲ್ಲಿ ನನ್ನನ್ನು ಸಂದರ್ಶನಕ್ಕೆ ಆಹ್ವಾನಿಸಿದ ಟೆಲಿಗ್ರಾಂ ಬಂದಿತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ರೂಮ್ ಮೇಟ್, ಆ ಸದವಕಾಶವನ್ನು ಉಪಯೋಗಿಸಿಕೊಂಡು ಪುಣೆಗೆ ಸಂದರ್ಶನದ ನೆಪದಿಂದ ಉಚಿತವಾಗಿ ಹೋಗಿ, ಆಕೆಗೊಂದು ಪ್ರಸಿದ್ಧವಾದ ಪುಣೆ ಸೀರೆಯನ್ನು (ಕಡಿಮೆ ಬೆಲೆಯಲ್ಲಿ) ತಂದುಕೊಡಬೇಕೆಂದು ಸಲಹೆಯಿತ್ತಳು. ಯಾರು ಯಾರಿಗೆಲ್ಲ ಸೀರೆ ಬೇಕೋ, ಅವರೆಲ್ಲರಿಂದಲೂ ನಾನು ತಲಾ 300 ರೂಪಾಯಿಗಳನ್ನು ತೆಗೆದುಕೊಂಡೆ. ಅದನ್ನು ನೆನಪಿಸಿಕೊಂಡರೆ ನನಗೆ ಈಗ ನಗು ಬರುತ್ತದೆ. ಆದರೆ ಆಗ ಮುಫತ್ತಾಗಿ ಪುಣೆಗೆ ಹೋಗಿ ಬರುವ ಅವಕಾಶ ನನಗೆ ಸಾಕಾಗಿತ್ತು. ಅದು ಪುಣೆಗೆ ನನ್ನ ಮೊಟ್ಟಮೊದಲ ಭೇಟಿಯಾಗಿತ್ತು. ಮೊದಲ ನೋಟದಲ್ಲೇ ನಾನು ಆ ನಗರಕ್ಕೆ ಮಾರುಹೋಗಿದ್ದೆ.

ಇವತ್ತಿನವರೆಗೂ ಪುಣೆ ನನಗೆ ತುಂಬಾ ಪ್ರೀತಿಪಾತ್ರವಾಗಿದೆ. ನಾನು ಹುಟ್ಟಿದ ಊರು ಹುಬ್ಬಳ್ಳಿಯಲ್ಲಿ ಎಷ್ಟು ಆರಾಮವಾಗಿರುತ್ತೇನೆಯೋ, ಪುಣೆಯಲ್ಲಿಯೂ ಅದೇ ಬಗೆಯ ಆನಂದವನ್ನು ನಾನು ಅನುಭವಿಸುತ್ತೇನೆ. ಆ ನಗರ ಎಷ್ಟೊಂದು ಬಗೆಯಲ್ಲಿ ನನ್ನ ಜೀವನವನ್ನು ಬದಲಾಯಿಸಿತು! ನಾನು ಸಂದರ್ಶನಕ್ಕೆ ಪಿಂಪ್ರಿ ಬಡಾವಣೆಯಲ್ಲಿದ್ದ ಟೆಲ್ಕೋ ಆಫೀಸಿಗೆ ಹೋದೆ.

English summary
Here is an inspirational article written by Infosys foundation chairman Sudha Murthy on her association with JRD Tata in Lasting Legacies (Tata Review- Special Commemorative Issue 2004). Translation by Vishvanath Hulikal, North Califoania, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X