• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುವೆಂಪು ತಂತ್ರಾಂಶ ಹೊಸ ಆವೃತ್ತಿ ಬಿಡುಗಡೆ

By Mahesh
|

ಬೆಂಗಳೂರು, ಫೆ.1: ಹಂಪಿ ಕನ್ನಡ ವಿವಿ ಸಿದ್ಧಗೊಳಿಸಿರುವ ಕುವೆಂಪು ಕನ್ನಡ ತಂತ್ರಾಂಶದ ಹೊಸ ಆವೃತ್ತಿ ಫೆ.2ರಂದು ಬಿಡುಗಡೆಯಾಗಲಿದೆ. ವಿಶಿಷ್ಟ ವಿನ್ಯಾಸದ ಬದಲಾವಣೆಗಳೊಂದಿಗೆ ಸುಧಾರಿತ ಆವೃತ್ತಿ 2.0 ತಂತ್ರಾಂಶ ವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಡಾ. ಎ. ಮುರಿಗೆಪ್ಪ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

2ನೇ ಆವೃತ್ತಿಯ ತಂತ್ರಾಂಶದಲ್ಲಿ ಮೊದಲ ಆವೃತ್ತಿಯ ಎಲ್ಲಾ ಅಂಶಗಳ ಜತೆಗೆ ನೂತನವಾಗಿ 3 ಬಗೆಯ ಪರಿವರ್ತಕಗಳು ಮತ್ತು 1 ಬಗೆಯ ಕೀಲಿಮಣೆ ವಿನ್ಯಾಸ, ಸೋನಾಟಾ ಸಾಫ್ಟ್ ವೇರ್ ಕಂಪೆನಿ ಸಹಕಾರದಿಂದ ಪ್ರಕಾಶಕ್ ತಂತ್ರಾಂಶದ ಪ್ರಜಾ ಅಕ್ಷರ ವಿನ್ಯಾಸಗಳಲ್ಲಿ ಆಯ್ದ 4 ಮಾದರಿಗಳನ್ನು ಅಳವಡಿಸಲಾಗಿದೆ.

ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1: ಅನು, ಎಸ್ ಆರ್ ಜಿ ಹಾಗೂ ಶ್ರೀಲಿಪಿ ಫಾಂಟ್ ಗಳನ್ನು ಬೆಂಬಿಲಿಸುವುದರ ಜೊತೆಗೆ ನಾಲ್ಕು ಬಗೆ ಕೀಲಿಮಣೆ ವಿನ್ಯಾಸ ಹಾಗೂ ನಾಲ್ಕು ಟೆಕ್ಸ್ ಪರಿವರ್ತಕಗಳನ್ನು ಹೊಂದಿದೆ. ANSI ಮಾದರಿ ಫಾಂಟ್ ಮಾತ್ರ ಬಳಕೆಯಾಗುತ್ತಿದ್ದು, ಪತ್ರಿಕಾ ವಿನ್ಯಾಸಗಾರರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಶೈಲಿಯ ಫಾಂಟ್ ಗಳನ್ನು ರೂಪಿಸಲಾಗಿದೆ. ಆದರೆ, ಇದು ಹೆಚ್ಚು ಕಡೆ ಇನ್ನೂ ಬಳಕೆಯಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯರಾಗಿದ್ದ ಚಂದ್ರಶೇಖರ ಕಂಬಾರರು ತಂತ್ರಾಂಶ ಯೋಜನೆಗೆ 6 ಲಕ್ಷ ರೂ. ಬಿಡುಗಡೆ ಮಾಡಿದ್ದರು. ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅನುಭವ, ಆಶಯದೊಂದಿಗೆ ತಂತ್ರಾಂಶ ರಚಿಸಲಾಗಿತ್ತು.

ಯಾರಿಗೆ ಉಪಯೋಗ: ಕನ್ನಡ ಬೆರಳಚ್ಚುಗಾರರು, ಡಿಟಿಪಿ ಆಪರೇಟರ್ ಗಳು, ವಿನ್ಯಾಸಗಾರರು, ಸರ್ಕಾರಿ ಕಚೇರಿಗಳಲ್ಲಿ ಬಳಸಬಹುದು. ಸದ್ಯದಲ್ಲೇ ಕುವೆಂಪು ತಂತ್ರಾಂಶದ ಯೂನಿಕೋಡ್ ಆವೃತ್ತಿ ಹೊರ ಬೀಳಲಿದ್ದು ಅಂತರ್ಜಾಲದಲ್ಲಿ ವಿಹರಿಸುವವರು, ಚಾಟ್ ಮಾಡುವವರು, ಪತ್ರ ಬರೆಯುವವರು ಎಲ್ಲರಿಗೂ ಅನುಕೂಲವಾಗಲಿದೆ.

ಮಾಹಿತಿ ಕಣಜವಾಗಲಿದೆ: ತಂತ್ರಾಂಶದೊಂದಿಗೆ ಕನ್ನಡ ಕಾರ್ಪಸ್ ನಿರ್ಮಾಣ ಯೋಜನೆ ಮಾಡಲಾಗುವುದು. ಇದರಿಂದ ಕನ್ನಡ ಇ-ನಿಘಂಟು(ಸುಮಾರು 1 ಕೋಟಿ ಪದ ಸಂಗ್ರಹ), ಸಮಗ್ರ ಕನ್ನಡ ವ್ಯಾಕರಣ ರಚನೆ ಇತ್ಯಾದಿಗಳನ್ನು ನಿರ್ಮಿಸಲಾಗುವುದು. ಆನ್‌ಲೈನ್ ಡಿಕ್ಷ್‌ನರಿ, ಕನ್ನಡ ಒಸಿಆರ್ ತಂತ್ರಾಂಶ, ಸಂಭಾಷಣೆಯನ್ನು ಶಬ್ದರೂಪದಲ್ಲಿ ಪರಿವರ್ತಿಸುವ ತಂತ್ರಾಂಶ, ಸ್ಪೆಲ್ಲಿಂಗ್ ಚೆಕ್ ಭಾಷಾಂತರ ದತ್ತ ಕಣಜ, ಸಂಶೋಧನಾ ಕರ್ನಾಟಕ, ವಿದ್ಯಾರ್ಥಿ ಗಳಿಗೆ ಬೋಧನೆ ಮತ್ತು ತರಬೇತಿ, ವೆಬ್‌ಸೈಟ್ ಮರುವಿನ್ಯಾಸ, ಡಿಜಿಟಲ್ ಸ್ಟುಡಿಯೊ, ಲೈಬ್ರರಿ, ಲ್ಯಾಂಗ್ವೇಜ್ ಲರ್ನರ್, ಆಡಿಯೊ-ವೀಡಿಯೊ ರೆಕಾರ್ಡಿಂಗ್ ಲ್ಯಾಬ್ ಸೇರಿದಂತೆ ಹಲವು ಯೋಜನೆ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮುರಿಗೆಪ್ಪ ಹೇಳಿದರು.

ಈ ತಂತ್ರಾಂಶ ಉಚಿತವೇ: ಹೌದು, ಹಂಪಿ ವಿಶ್ವವಿದ್ಯಾಲಯ ಹೊರ ತರುತ್ತಿರುವ ಈ ತಂತ್ರಾಂಶ ವಿಶ್ವವಿದ್ಯಾಲಯದ ವೆಬ್ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ. ಆದರೆ, ಈ ತಂತ್ರಾಂಶವನ್ನು ಓಪನ್ ಸೋರ್ಸ್ ಆಗಿ ನೀಡುತ್ತಾರೆಯೇ? ಅಥವಾ ಈ ಹಿಂದಿನಂತೆ source on demand ಎಂದು ಹೇಳುತ್ತಾರೋ ಎಂದು ಕಾದು ನೋಡಬೇಕಿದೆ.

English summary
Hampi University is launching upgraded version of Kuvempu Kannada Thantramsha a Kannada Software on Feb.2. Software is a vision of KP Poornachandra Tejaswi. Kuvempu Software version 2 consists many features including unicode support, new keyboard structures, fonts, spell checker and data base of kannada words over 1 Cr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X