ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಕೆಲವರಿಗೆ ಸಂತಸ, ಹಲವರಿಗೆ ಸಂಕಟ

By * ರೂಪ ಎಸ್., ಬೆಂಗಳೂರು
|
Google Oneindia Kannada News

Roopa S
ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತಲ್ಲವೇ? ಮಳೆ ಜೀವನಾಧಾರವಾದುದು, ಪ್ರಕೃತಿಯ ಉಳುವಿನ ಸಂಕೇತ, ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ!

ರೈತರಿಗೆ ಬಿತ್ತನೆಗೆ ಭೂಮಿ ಹದವಾಯಿತು, ಮೃದುವಾಯಿತೆಂಬ ಖುಷಿ, ಪುಟ್ಟ ಮಕ್ಕಳಿಗೆ ಮನೆ ಮುಂದೆ ನಿಂತ ನೀರಲ್ಲ ಕಾಗದದ ದೋಣಿ ಬಿಡುವ ಸಂಭ್ರಮ, ಸುರಿದ ಮಳೆಯಿಂದ ಹುಟ್ಟಿದ ಚಳಿಗೆ ಬೆಚ್ಚಗೆ ಹೊದ್ದುವ ಮಲಗುವ, ಬಿಸಿಬಿಸಿ ಪಕೋಡ ಬೋಂಡ ತಿನ್ನುವ ಉಮೇದು ಹಲವರಿಗೆ. ಕಾದು ಬೆಂಡಾಗಿದ್ದ ಧರಿತ್ರಿ ತಂಪಾದಳಲ್ಲಾ! ಧಗೆ ಅಡಗಿತಲ್ಲಾ ಎಂಬ ಸಮಾಧಾನ ಮೊದಲ ಮಳೆಯ ಮಣ್ಣಿನ ವಾಸನೆ ಅನುಭವಿಸುವ ರಸಿಕತೆ ಕೆಲವರಿಗೆ ಸುರಿದ ಮಳೆಯಿಂದ ಸಿಕ್ಕ ಅನಿರೀಕ್ಷಿತ ಬಿಡುವಿನಿಂದ ಬಹಳ ದಿನಗಳಿಂದ ಉಳಿದ ಬಿಟ್ಟಿದ್ದ ಕೆಲಸಗಳನ್ನು ಪೂರೈಸುವ ಉತ್ಸಾಹ ಮತ್ತೆ ಕೆಲವರಿಗೆ...

ಮತ್ತೆ ಅದೆಷ್ಟು ಜನರಿಗೆ ಅದಿನ್ನಿನ್ಯಾವ ಬಗೆಯ ಸಂತಸವೋ ಉಣಿಸಲಾಗದಂತಹುದು! ಸಂತಸ ಒಂದು ಬದಿಯಾದರೆ, ಮಳೆ ಅನೇಕರಿಗೆ ಅನೇಕ ಬಗೆಯ ತೊಂದರೆಗಳನ್ನು ತೇಲಿಸಿಕೊಂಡು ಬಂದಿರುತ್ತದೆ. ಒಂದೆರಡು ದೃಶ್ಯಗಳು ಹೀಗಿರಬಹುದೆ...

ಬಿಡ ಬಿಡದೇ ಮೂರು ದಿವಸಗಳಿಂದ ಸುರಿಯುತ್ತಿರುವ ಬಿರು ಮಳೆಯಿಂದ ಇವನಂತೂ ಕಂಗಾಲಾಗಿದ್ದಾನೆ, ಒಂದು ದಿನ ಸಾಲ ತಂದು ಹೊಟ್ಟೆ ತುಂಬಿಸಿದ್ದಾಗಿದೆ, ಮತ್ತೆರಡು ದಿನದಿಂದ ಉಪವಾಸ ಜೊತೆಗೆ ಮನೆಯಿಡೀ ಸೋರಿ ಕರೆಯಂತಾಗಿದೆ. ಮೂಲೆಯಲ್ಲೆಲ್ಲೋ ಇವನ ಹೆಂಡತಿ, ಮೂವರು ಹಸಿದ ಮಕ್ಕಳು ಇವನತ್ತಲೇ ತಮ್ಮ ಕಣ್ಣು ಹರಿಸಿ ಕುಳಿತಿದ್ದಾರೆ. ಇವನಿಗೆ ಅವರನ್ನು ನೋಡುವ ಧೈರ್ಯವಿಲ್ಲ. ಅತ್ತ ನೋಡಿದೊಡನೆ ಅಪ್ಪ ಹಸಿವು ಎಂದು ಮಗುವೊಂದು ನುಡಿದುಬಿಟ್ಟರೆ ಇವನೇನು ಮಾಡಬೇಕು? ಸುರಿವ ಮಳೆಗೆ ಶಾಪ ಹಾಕಿ ಸಾಕಾಗಿದ್ದಾನೆ.

ಬೀದಿಯಲ್ಲಿ ತನ್ನ ದಿನವಿಡೀ ಸಣ್ಣ ಪುಟ್ಟ ಸಾಮಾನುಗಳನ್ನು ಹರಿವಿ ಕುಳಿತು ವ್ಯಾಪಾರ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಫುಟ್ ಪಾತ್ ವ್ಯಾಪಾರಿ, ಮಾರಾಟವಾಗದ ದಿನ ಇವನ ಸಂಸಾರಕ್ಕೆ ಉಪವಾಸವೇ ಗತಿ. ಇವನೊಬ್ಬನದೇ ಸಮಸ್ಯೆಯಲ್ಲ ದಿನಗೂಲಿಯನ್ನು ನಂಬಿ ನೂರಾರು ಜನ ಬದುಕುತ್ತಿದ್ದಾರೆ. ಮಳೆಗಾಲದಲ್ಲಂತೂ ಉಪವಾಸ ಅನಿವಾರ್ಯ, ಕೆಲವೊಮ್ಮೆ ಒಂದು, ಎರಡು ದಿನ ಮತ್ತೆ ಹಲವಾರು ದಿನ ದೀರ್ಘ ಮಳೆ ಬಿಡದೆ ಹುಯ್ಯವ ದಿನಗಳಲ್ಲಿ ಅವರಿಗೊಂದೇ ಯೋಚನೆ, ಹೇಗೆ ತನ್ನ ಸಂಸಾರದ ಹೊಟ್ಟೆ ತುಂಬುವುದು?

ಇವರಿಗೆ ಗೊತ್ತಿರುವುದು, ಪುಟ್ ಪಾತ್ ವ್ಯಾಪಾರವೊಂದೇ! ಬೇರೆ ದಾರಿ ಹಿಡಿದು ನಂಬಿದವರ ಹೊಟ್ಟೆ ತುಂಬಿಸಲು ಮನಸು ಬಾರದು. ಧೋ ಎಂದು ಸುರಿವ ಮಳೆಗೆ ಮನ ಪೂರ್ತಿ ಬೈದು ಹಗುರವಾಗಬೇಕೆಂದು ಕತ್ತನ್ನು ಆಕಾಶದೆಡೆಗೆ ಎತ್ತಿದ್ದಾನೆ, ಅವನಿಗೆ ಅರಿವಿಲ್ಲದೇ ಅವನ ಕಣ್ಣಿಂದ ಧಾರಕಾರ ನೀರು! ಎಷ್ಟೆಲ್ಲಾ ಜನರಿಗೆ ಸಂತಸ ನೀಡುವ ಮಳೆಯೇ ನನ್ನಂತಹ ಕೆಲವೇ ಕೆಲವರಿಗೆ ತೊಂದರೆಯಾದರೂ ಏಕೆ ಸುರಿಸಬೇಕು, ಎಂದು ಎದೆ ತುಂಬಿ ಪ್ರಾಥಿಸುತ್ತೇನೆ.

ಈಗ ಮಳೆ ನಿಂತಿದೆ, ಮತ್ತೆ ಅವನ ವ್ಯಾಪಾರ ಭರದಿಂದ ಪ್ರಾರಂಭವಾಗಿದೆ.

English summary
Monsoon rains happiness for few and sorrow for many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X