ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿ ಹುಟ್ಟುಹಬ್ಬ ಪ್ರಯುಕ್ತ ಟ್ರೆಕ್ಕಿಂಗ್, ನಾಟಕ

By * ಮಲೆನಾಡಿಗ
|
Google Oneindia Kannada News

KP Poornachandra Tejaswi Birth Anniversary
ಕನ್ನಡದ ವಿಶಿಷ್ಟ ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಹಾಗೂ ಚಿಂತನೆಗಳ ಸಕಾರಕ್ಕಾಗಿ ಸ್ಥಾಪನೆಯಾದ ಮೂಡಿಗೆರೆಯ ವಿಸ್ಮಯ ಪ್ರತಿಷ್ಠಾನ ತೇಜಸ್ವಿ ಅವರ 73 ನೇ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಜಾಗೃತಿ ಹಾಗೂ ಚಾರಣ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಮಂಗಳವಾರ ಮೂಡಿಗೆರೆಯ ಗಣೇಶ್ ಕಲಾ ಕುಂಜದಲ್ಲಿ ತೇಜಸ್ವಿ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಪದವಿಪೂರ್ವ ಬಾಲಕಿಯರ ಶಾಲಾ ವಿದ್ಯಾರ್ಥಿನಿಯರಿಗಾಗಿ 'ಕನ್ನಡ ಜಾಗೃತಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ನಾ.ಡಿಸೋಜ, ರಂಗಕರ್ಮಿಗಳಾದ ಮುಕುಂದರಾಜ್ ಹಾಗೂ ಕೆವಿ ನಾಗರಾಜಮೂರ್ತಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿಗಳ ಬಗ್ಗೆ ಪ್ರಸ್ತಾಪಿಸಿ, ಕನ್ನಡ ಸಾಹಿತ್ಯ ಮಿಕ್ಕೆಲ್ಲಾ ಭಾಷೆಗಳಿಗಿಂತ ಹೇಗೆ ವಿಭಿನ್ನ ಹಾಗೂ ಶ್ರೀಮಂತವಾಗಿ ಎಂದು ನಿರೂಪಿಸಲಾಯಿತು. ನಮ್ಮ ಪರಿಸರದಲ್ಲಿರುವ ಜನಸಾಮಾನ್ಯರ ನುಡಿಗಳೇಅನೇಕಾನಕ ಮೇರುಕೃತಿಗಳಿಗೆ ಆಕರ ವಸ್ತುಗಳಾಗಿವೆ. ಪಂಪನ ಬಗ್ಗೆ ತಿಳಿಯುವುದು ಎಷ್ಟೋ ಮುಖ್ಯವೋ ತಮ್ಮ ಸಮಕಾಲೀನ ಲೇಖಕ/ಕಿಯರ ಜೀವನದ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಮುಖ್ಯ.

ಜನ ಸಾಮಾನ್ಯರಿಂದ ಹುಟ್ಟಿ ಬೆಳೆದ ಸಾಹಿತ್ಯ ನಮ್ಮದು. ಕನ್ನಡಭಾಷೆ ಜಾತ್ಯಾತೀತವಾದದ್ದು ಎಂದು ಒಕ್ಕೊರಲಿನ ನಿರ್ಣಯಕ್ಕೆ ಬರಲಾಯಿತು. ಕನ್ನಡಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜಿವಿ ಆತ್ರಿ ಸ್ಥಾಪಿತ ಚಿಕ್ಕಮಗಳೂರಿನ ಸಂಗೀತಾ ಗಂಗಾ ತಂಡದವರ ಸಂಗೀತ ಕಾರ್ಯಕ್ರಮ ಮೆರಗು ತಂದಿತು.

ಟ್ರೆಕ್ಕಿಂಗ್ ಕಾರ್ಯಕ್ರಮ : 'ಗ್ರೀನ್ ಟ್ರಯಾಂಗಲ್ 'ಹೆಸರಿನಲ್ಲಿ ದತ್ತಪೀಠ-ಮಾಣಿಕ್ಯಧಾರಾ-ಗಾಳಿಕೆರೆ ಪ್ರದೇಶದಲ್ಲಿ ಚಾರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮ ವಿವರ:
ದಿನಾಂಕ /ದಿನ: 12/09/2010, ಭಾನುವಾರ
ವಿಸ್ಮಯ ಪ್ರತಿಷ್ಠಾನ ಕಚೇರಿಯಿಂದ ದತ್ತ ಪೀಠಕ್ಕೆ ಬೆಳಗ್ಗೆ 7.30 ಕ್ಕೆ ಪಯಣ.ಬೆಳಗ್ಗೆ 9.30ರಿಂದ ಟ್ರೆಕ್ಕಿಂಗ್ ಆರಂಭ.
ಊಟ, ಮೂಡಿಗೆರೆಯಿಂದ ಟ್ರೆಕ್ಕಿಂಗ್ ಸ್ಥಳಕ್ಕೆ ವಾಹನ ವ್ಯವಸ್ಥೆಯಿರುತ್ತದೆ. ಟ್ರೆಕ್ಕಿಂಗ್ ಶುಲ್ಕ 250 ರು ಗಳು.
ಆಸಕ್ತರು ಸೆ.10 ಸಂಜೆ ಆರು ಗಂಟೆಯೊಳಗೆ ತಮ್ಮ ಹೆಸರನ್ನು ನಮೂದಿಸಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ -577132
ಚಿಕ್ಕಮಗಳೂರು ಜಿಲ್ಲೆ
ಗಣೇಶ ಮಗ್ಗಲಮಕ್ಕಿ : 94483 05990/94832 26999
ಕಚೇರಿ ದೂರವಾಣಿ ಸಂಖ್ಯೆ: 08263-222 288

ಮಾಯಾಮೃಗ ನಾಟಕ: ತೇಜಸ್ವಿ ಅವರ ಸಣ್ಣಕಥೆ ಆಧಾರಿತ 'ಮಾಯಾಮೃಗ' ನಾಟಕ ಪ್ರದರ್ಶನ ಬೆಂಗಳೂರಿನ ರಂಗಶಂಕರದಲ್ಲಿ ಇಂದು 7.30ಕ್ಕೆ ಆಯೋಜಿಸಲಾಗಿದೆ. ವಟಿಕುಟೀರ ತಂಡ, ಅವಿರತ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ ಈ ನಾಟಕವನ್ನು ಪೃಥ್ವಿ ಆರಾಧ್ಯ ನಿರ್ದೇಶಿಸಿದ್ದಾರೆ. ಟಿಕೆಟ್ ಗಳಿಗಾಗಿ ಸಂಪರ್ಕಿಸಿ: 98806 95659.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X