ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈರಪ್ಪೇನ್ ಪೈನಾನ್ಸ್ ಮಿನಿಷ್ಟ್ರೇ

By * ಕುಮಾರ ಗುರು, ಬೆಂಗ್ಳೂರು
|
Google Oneindia Kannada News

SL Bhyrappa source:www.slbhyrappa.com/
ಎಸ್ ಎಲ್ ಭೈರಪ್ಪ ಅವರ ಹೊಸ ಕಾದಂಬರಿ ಕವಲು ಹೇಗಿದೆ ಎಂಬುದರ ಕುರಿತು ಕನ್ನಡಿಗರ ಖಾನೆಗಳಲ್ಲಿ ಶಾನೆಶಾನೆ ಚರ್ಚೆಗಳು ನಡೆಯುತ್ತಿವೆ. ಕನ್ನಡ ಸಾಹಿತ್ಯ ಸದನದಲ್ಲಂತೂ ಈ ಪುಸ್ತಕದ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧಪಕ್ಷದವರು ಒಂದೇಸಮನೆ ಕಚ್ಚಾಡ್ತವ್ರೆ. ವಿಪರೀತಕ್ಕೆ ಹೋಗಿರುವ ಈ ದಾಯಾದಿ ಕಲಹದ ಬಗ್ಗೆ ವಿಧಾನವೀದಿಯಿಂದ ಒಂದು ಸಾಕ್ಷಾತ್ ವರದಿ, ದಟ್ಸ್ ಕನ್ನಡ ಪ್ರೇಷಿತ ಪ್ರತಿನಿಧಿಯಿಂದ.-ಸಂಪಾದಕ

ಈ ಪ್ರಸ್ನೆ ಯಾಕಪ್ಪಾಂತಂದ್ರೆ ಆವಯ್ಯ ಬರ್ದಿರೋ ವಸಾ ಕಾದಂಬ್ರಿ ಬಗ್ಗೆ ಬರ್ತಾಇರೋ ಇಮರ್ಸೆ ನೋಡಿ ಇಂಗನ್ನುಸ್ತು. ವರ್ಸ್ ವರ್ಸಾನೂವೆ ನಮ್ ಪೈನಾನ್ಸ್ ಮಿನಿಷ್ಟ್ರುಗೋಳು ಬಜೆಟ್ ಮಂಡ್ಸುವಾಗ ಒಂಥರಾ ಸಸ್ಪೆನ್ಸ್ ಇರಾಕಿಲ್ವಾ ಅಂಗೇ ಈ ವಯ್ಯ ಕಾದಂಬ್ರಿ ಬಿಡ್ಗಡೆ ಆಯ್ತದೆ ಅಂದ್ರೆ ಅದೇ ಸಸ್ಪೆನ್ಸ್! ಆಯ್ತು ಆಮ್ಯಾಕೆ ತಗಳಿ ಬಜೆಟ್ ಮ್ಯಾಲೆ ಯಂಗೆ ಆಡಳಿತ ಪಕ್ಸುದೋರು, ಇರೋದ್ ಪಕ್ಸುದೋರು ಪಾರ್ಟೀ ಲೈನ್ ಇಡ್ಕಂಡೇ ಕಾಮೆಂಟ್ ಮಾಡ್ತಾರೋ ಅಂಗೆ ಈ ಕಾದಂಬ್ರಿ ಇಮರ್ಸೆನೂ ಬತ್ತದೆ. ಲಂಕೇ ಶಪ್ಪನ ಮಠದೋರು ಒಂಥರಾ ಬರೀತಾರೆ, ಬೇರೇ ಬೇರೆ ಇಚಾರ್ವಾದಿಗ್ಳೂ ಸೆಕ್ಯುಲರ್ ವಾದಿಗ್ಳೂ, ಪ್ರಗತಿ ಪರರು (ಬುರ್ಕಾ ಸಪೋರ್ಟರ್ಸ್) ಒಂಥರಾ ಬರೀತಾರೆ, ಕಮ್ಲುದ್ ಪಾರ್ಟಿಯೋರು ಇನ್ನೊಂಥರಾ ಬರೀತಾರೆ. ಕಾದಂಬ್ರೀ ಓದ್ದೇ ಇರೋವ್ರೂ ಓದಾಕ್ ಬರ್ದೇ ಇರೋವ್ರೂ ಬರೀತಾರೆ ಬರೀತಾರೆ ಇಮರ್ಸೆನಾ!

ಈ ಕಿತಾ ಮೂರ್ತಿ ಮಠದೋರು ಇಮರ್ಸೆ ಬರಿಯಾಕಿಲ್ವಂತೆ ಯಾಕೆಂದ್ರೆ ಆ ಬೈರಪ್ಪ ಕಾದಂಬ್ರಿಕಾರ ಅಲ್ಲಾಂತ ಪಟ್ವಾ ವಲ್ಡ್ಸಿರಾದ್ರಿಂದ ಅವಯ್ಯನ್ ಕಾದಂಬ್ರೀ ಓದಾದಾಗ್ಲೀ ಇಮರ್ಸೆ ಬರಿಯಾದಾಗ್ಲೀ ಆಗ್ದೂಂತ ಮೂರ್ತಿ ಮಠದೋರು ಗುಮ್ಮ್ನೆ ಕುಂತವ್ರಂತೆ. ಮೂರ್ತಪ್ನೂ ಕದ್ ಕದ್ ಓದ್ತಾನೇಂತಾರಪ್ಪ? ಅಷ್ಟಕ್ಕೂ ಗುಟ್ ಗುಟ್ ಆಗಿ ಓದ್ಕಳಾಕೆ ಕಾದಂಬ್ರಿಯಾಗೆ ಏನೈತೆ ಅಂಥದ್ದೇನೈತೆ ಅಂತ ಕೇಳ್ಬೇಡ್ರಪ್ಪೋ. ಎಣ್ಮಕ್ಕಳು ಕೆಟ್ಟೋದ್ರೆ ಮನೆ ಎಕ್ಕುಟ್ಟು ಹೋಯ್ತದೆ ಕಣಣ್ಣಾ ಅಂತ ಪುಸ್ತಕದಾಗೆ ಏಳವ್ರೇ ಅಷ್ಟೇಯಾ.

ಇನ್ನೋದು ಗುಟ್ಟಿನ್ ಸಂಗ್ತಿ ಏನಪ್ಪಾಂದ್ರೆ ಆ ಲಂಕೇಶಪ್ಪ ಎಂಥಾ ಪ್ರತಿಭಾವಂತಾಂದ್ರೆ, ಈ ಬೈರಪ್ಪ ಮುಂದೆ ಬರಿಯೋ ಎಲ್ಲಾ ಕಾದಂಬ್ರೀಗೂ ಇಮರ್ಸೆ ಬರ್ದ್ ಮಡಗವ್ನಂತೆ. ಅವ್ನ ಎಣ್ಣೈಕ್ಳು ಕೊಳ್ಳೇಗಾಲದ ವೆಂಕಟಾ ಸುಬ್ಬಾಶಾಸ್ತ್ರಿಗಳ ಮಕ್ಳು ಪಂಚಾಂಗ ಪ್ರಿಂಟ್ ಆಕ್ದಂಗೆ ಇಮರ್ಸೆ ಪ್ರಿಂಟ್ ಆಕ್ತಾವಂತೆ. ಅಲಲಲ ! ಅಷ್ಟೆ ಅಲ್ಲ ಕಾದಂಬ್ರಿ ಓದ್ಲೇ ಬ್ಯಾಡಿ ನನ್ ಇಮರ್ಸೆ ಓದಿದ್ರೇ ಸಾಕೂ ಕಾದಂಬ್ರಿ ಕೊಡೋ ದುಡ್ನಾಗೆ ಮಟನ್ ಬಿರಿಯಾನಿ ತಿನ್ನಿ ಅಂತಾವಂತೆ.

ಆಮ್ಯಾಕೆ ನೋಡಿ ಈ ವಯ್ಯನ ಯಾವ್ದಾನಾ ಕಾದಂಬ್ರಿ ಇಮರ್ಸೆ ಓದಿ ಪ್ರತಿಗಾಮಿ, ಸ್ರ್ತೀ ಇರೋಧಿ, ಮನುವಾದಿ, ಮೂಲಭೂತವಾದಿ, ಸೆಕ್ಸು, ಪುರೋಇತಸಾಯಿ, ಚಡ್ಡಿ ಧೋರ್ಣೆ, ಅಳಸಲು ಇಚಾರ, ಜಾತಿವಾದಿ, ಈ ಪದಗಳು ಇರಾಕೇ ಬೇಕು. ಈ ಕಾದಂಬ್ರೀಲಿರೋ ಇಂಥಾ ಪಾತ್ರನ ನಾನ್ನೋಡಿದಿನಿ ಖುದ್ದಾಗಿ ಅಂತ ಏಳೋವ್ರೂ ಮಸ್ತಾಗವ್ರೆ. ಮೆಚ್ಗಳಾರು ಶಾನೆ ಜನ ಅವ್ರೆ. ಒಟ್ನಲ್ಲಿ ಒಂದ್ ಕಾದಂಬ್ರೀಗೆ ಎಸ್ರಿನ್ ಮ್ಯಾಲೇ ಪುಸ್ತ್ಕ ಕರ್ಚಾಗದೂ ಎಸರಿನ್ ಮ್ಯಾಲೇ ಇಮರ್ಸೇ ಬರಿಯಾದೂ ಅಂದ್ರೆ ಈ ವಯ್ಯನ್ ಮಾತ್ಮೆನೇ ಮಾತ್ಮೆ.

ಇನ್ನೋದ್ ಜಾತಿ ಇಮರ್ಸ್ಕರು ಅವ್ರೆ, ಇವ್ರು ಪೋಲೀಸ್ ನೊರ್ ಇದ್ದಂಗೆ, ಪೋಲೀಸ್ ನೋರು ದಿನ್ಕ್ಕೋ ತಿಂಗ್ಳಿಗೋ ಇಶ್ಟ್ ಕೇಸೂಂತ ಇಡ್ಕೊಡ್ಬೇಕಂತೆ ಅವ್ರಿಗೆ ಅಷ್ಟ್ ಕೇಸ್ ಸಿಕ್ಕಿದ್ಮ್ಯಾಕೆ ತೆಪ್ ಮಾಡ್ದೋರ್ನೂ ಇಡಿಯಲ್ವಂತೆ. ಈ ಜಾತಿ ಇಮರ್ಸಕುರು ಎಂಗೇಂದ್ರೆ ಅವ್ಸ್ರ್ ಅವ್ಸ್ರುದಾಗೆ ಸರ ಸರೆ ಪುಟ ತಿರುಗುಸ್ತಾರೆ ಅದ್ರಾಗೆ ತಾವೂ ಈಗಾಗ್ಲೇ ಕಾಂದಬ್ರಿ ಓದಾಕ್ ಮುಂಚೆನೇ ಬರ್ದಿಕ್ಕಿರೋ ಇಮರ್ಸೆಗೆ ಒಂದ್ಕೆ ಆಗಂತವೇಲ್ಡೋ ನಾಕೋ ಪ್ಯಾರ ಸಿಕ್ಬುಟ್ರೆ ಕುಸಿಯೋ ಕುಸಿ. ಇಂದೆ ಮುಂದೇ ಏನದೆ ಅಂತ ಓದಾಕ್ ಓಗದೇ ಇಲ್ಲ. ಈ ವಯ್ಯುನ್ ಬಯ್ಯಾಕೇಂತ್ಲೇ ಪೇಪರ್ಗೋಳ್ ಅವೆ, ಎಬ್ ಸೈಟ್ ಐತೆ, ಆದ್ರು ಜನ ಓದೇ ಓದ್ತಾರೆ, ಮೆಚಕಂತಾರೆ, ವಟ್ಟೆ ಉರ್ಕಳಾರು ಉರ್ಕಳ್ಳಿ ಬುಡಿ.

ಅಂದಂಗೆ ಈ ಕಾದಂಬ್ರಿ ಬರೀವಾಗ ಬೈರಪ್ಪುಂಗೆ ಅರ್ಥ ಆಗಿರ್ಬೇಕು ಸಾಬ್ರು ಯಾಕೆ ತಮ್ಮ ಎಂಗುಸ್ರುನ್ನ ಬುರ್ಕಾದೋಳ್ಗೆ ಮಡುಗ್ತಾರೇಂತ. ಸರಿಯಾದ ಇಮರ್ಸೆ ಬತ್ತಾಇಲ್ಲ, ಮಾಜನ್ಗೋಳು ಕಾದಂಬ್ರೀ ಓದಾದ್ ಎಂಗೆ ಅಂತ ಮದ್ಲು ಕಲ್ತ್ಗಳಿ ಅಂತ ಆವಯ್ಯ ಬಾಸ್ಣದಾಗೆ ಯೋಳ್ತಾನೇ ಇರ್ತಾನೆ. ಶಾನೆ ಜನ ಕೇಳುಸ್ಗಳಾದೆ ಇಲ್ಲ. ಇಮರ್ಸೆ ಬರಿಯಾದು ತಮ್ಮ ಆಜನ್ಮ ಸಿದ್ಧ ಅಕ್ಕು ಅಂತ ತಿಳ್ಕಂಡವೆ. ಎಸ್ಟೇ ಆಗ್ಲಿ ನಾವು ಕುರಿತೋದದೆಯುಂ ಇಮರ್ಸೆ ಪ್ರಯೋಗ ಪರಿಣಿತ ಮತಿಗಳ್ ಅಲ್ವೇ. ಊಕನೇಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X