ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರಿನಲ್ಲಿ ಕನ್ನಡ ಬರೆಯುವುದಕ್ಕೆ ಮಾರ್ಗದರ್ಶಿ

By Mahesh
|
Google Oneindia Kannada News

Type in Kannada Google Transliteration tool
ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಗೆ ಅನೇಕ ವಿಧಾನಗಳಿದ್ದರೂ, ಗೂಗಲ್ ಸಾಧನಗಳು ತಮ್ಮ ಸರಳತೆಯಿಂದ ಜನಮೆಚ್ಚುಗೆ ಪಡೆದಿವೆ. ಇಂಗ್ಲೀಷ್ ಭಾಷೆ ಅರಿವಿದ್ದರೆ ಸಾಕು ಸುಲಭವಾಗಿ ಕನ್ನಡ ಅಕ್ಷರಗಳನ್ನು ಹಿಂಪಡೆಯಬಹುದು. ಹೌದು, ಗೂಗಲ್ ಟ್ರಾನ್ಸ್ ಲಿಟರೇಷನ್ ಸಾಧನ ದಿನೇ ದಿನೇ ಜನಪ್ರಿಯತೆ ಗಳಿಸುತ್ತಿದೆ. ಕನ್ನಡದಲ್ಲೇ ಇಮೇಲ್, ಚಾಟ್ ಮಾಡಲು ಬಯಸುವವರು, ಟ್ರಾನ್ ಲಿಟರೇಷನ್ ಬಳಸುತ್ತಿದ್ದಾರೆ.

ಗೂಗಲ್ ಟ್ರಾನ್ಸ್ ಲಿಟರೇಷನ್ ಜನಪ್ರಿಯತೆಗೆ ಕಾರಣವೂ ಇದೆ. ಸರಳತೆ ಹಾಗೂ ಸ್ಪಷ್ಟ ಮಾಹಿತಿ ನೀಡಿಕೆ ಇದರ ಹೆಗ್ಗುರುತು. ಇಂಗ್ಲೀಷ್ ನಲ್ಲಿ ಟೈಪ್ ಮಾಡೋಕೆ ಬರುವವರು ಗೂಗಲ್ ಟ್ರಾನ್ಸ್ ಲಿಟರೇಷನ್ (ಲಿಪ್ಯಂತರ) ಕಿಂಡಿಯನ್ನು ತೆರೆದುಕೊಂಡು ಸುಲಭವಾಗಿ ಟೈಪ್ ಮಾಡಿ ಒಂದು ಪದದ ನಂತರ ಸ್ಪೇಸ್ ಬಾರ್ ಒತ್ತಿದರೆ ಸಾಕು. ನಿಮಗೆ ಬೇಕಾದ ಕನ್ನಡ ಪದ ತೆರೆಯ ಮೇಲೆ ಕಾಣುತ್ತದೆ.

ಉದಾ: http://www.google.co.in/transliterate/indic/Kannada ದಲ್ಲಿ kannada sundara bhashe ಎಂದು ಟೈಪ್ ಮಾಡಿದರೆ ಕನ್ನಡ ಸುಂದರ ಭಾಷೆ ಎಂದು ಪಡೆಯಬಹುದು. ಕನ್ನಡದಿಂದ ಇಂಗ್ಲೀಷ್ ಗೆ ಅಥವಾ ಇಂಗ್ಲೀಷ್ ನಿಂದ ಕನ್ನಡಕ್ಕೆ ಬದಲಾಯಿಸಿಕೊಳ್ಳಲು Ctrl+g ಕೀಲಿ ಒತ್ತಬಹುದು. ಇಷ್ಟೇ ಅಲ್ಲದೆ, ಇಲ್ಲಿ ಟೈಪ್ ಆಗುವ ಬರಹವನ್ನು ತಿದ್ದಲು, ಸಂಕಲನ ಮಾಡಲು, ವೆಬ್ ಲಿಂಕ್ ಸೇರಿಸಲು ಬೇಕಾಗುವ ಟೂಲ್ ಗಳನ್ನು ಸಹ ಒದಗಿಸಲಾಗಿದೆ. ನೀವು ಬರೆದ ಬರಹವನ್ನು ಇದೇ ವೆಬ್ ಕಿಂಡಿಯಿಂದ ನೇರವಾಗಿ ಪ್ರಿಂಟ್ ತೆಗೆದುಕೊಳ್ಳುವ ವ್ಯವಸ್ಥೆ ಕೂಡ ಲಭ್ಯವಿದೆ. ಆದರೆ, ನೀವು ಬರೆದ ಪದಗಳು ಸರಿಯಿದೆಯೇ ಇಲ್ಲವೇ ಎಂದು ಸಂದೇಹವೇ ಇದಕ್ಕಾಗಿ ಪದಗಳ ಚೆಕ್ ಮಾಡಲು ಪದಕೋಶ ಲಭ್ಯವಿದೆ. ಅಲ್ಲದೆ ಡ್ರಾಪ್ ಡೌನ್ ಮೂಲಕ ನಿಮಗೆ ಸೂಕ್ತ ಪದದ ಸಲಹೆ ಸಿಗುತ್ತದೆ. ಪದ ಆಯ್ಕೆ ಅವಾಂತರವಾದರೆ ಕಷ್ಟ. ಇದಕ್ಕಾಗಿ ಪದಕೋಶದ ನೆರವು ಪಡೆಯಬಹುದು.

ಉದಾ: ಮೇಲಿನ ಉದಾಹರಣೆಯಲ್ಲಿ ಸುಂದರ ಎಂಬ ಪದ ಮೇಲೆ ಮೌಸ್ ಕರ್ಸರ್ ಇಟ್ಟರೆ ಡ್ರಾಪ್ ಡೌನ್ ನಲ್ಲಿ ಸುಂದರ, ಸುನ್ದರ, ಸುಂದರಾ, ಸುನದರ.. ಹೀಗೆ ಪದಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ಆಯ್ಕೆ ಮಾಡಬಹುದು.

ಇಂಗ್ಲೀಷ್-ಕನ್ನಡ ಸರಳ ಪದಕೋಶ: ಇಲ್ಲಿ ನೀಡಿರುವ ಪದಕೋಶ ಬಳಸಿ ಆಂಗ್ಲಪದಗಳಿಗೆ ಕನ್ನಡದಲ್ಲಿ ಸರಳ ಅರ್ಥವನ್ನು ಪಡೆಯಬಹುದು. ಹಾಗೂ ಕನ್ನಡದಿಂದ ಆಂಗ್ಲ ಪದಕ್ಕೆ ತರ್ಜುಮೆ ಮಾಡಿ ಬಳಸಬಹುದು. ಗೂಗಲ್ ಟ್ರಾನ್ಸ್ ಲಿಟರೇಷನ್ ಸಾಧನವು ಬ್ಲಾಗ್, ಜೀಮೆಲ್, ಕ್ಲೋನ್, ಆರ್ಕುಟ್ ಗಳಲ್ಲಿ ಲಭ್ಯವಿದೆ. ಅಲ್ಲದೆ, ನಿಮ್ಮದೇ ವೆಬ್ ತಾಣದಲ್ಲೂ ಗೂಗಲ್ ಟ್ರಾನ್ಸ್ ಲಿಟರೇಷನ್ ಸಾಧನದ API ಅಳವಡಿಸಿಕೊಳ್ಳಬಹುದು. ಕನ್ನಡ ಸೇರಿದಂತೆ ಸುಮಾರು 22ಕ್ಕೂ ಅಧಿಕ ಭಾಷೆಗಳಲ್ಲಿ ಈ ಸಾಧನವು ಲಭ್ಯವಿದೆ.

ತಪ್ಪದೇ ಓದಿ: ಗೂಗಲ್ಲಿಗೆ ಕನ್ನಡ ಸುದ್ದಿ ಅಸ್ಪೃಶ್ಯವಾಯಿತೆ? || ಗೂಗಲ್ ಯಂತ್ರವನ್ನು ಓಲೈಸುವುದು ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X