ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ವಿರುದ್ಧ ಮಹಿಳಾ ಹೋರಾಟಕ್ಕೆ ಜೈಹೋ

By * ವಿನಾಯಕ ಪಟಗಾರ, ಕಾರವಾರ
|
Google Oneindia Kannada News

Hats off to women fighting against HIV and AIDS
ಮಹಿಳೆ ಎಂದಾಕ್ಷಣ ನೆನಪಿಗೆ ಬರುವುದು ಶೋಷಣೆ, ದೌರ್ಜನ್ಯ, ಅತ್ಯಾಚಾರ, ಹಿಂಸೆ, ಮೊದಲಾದ ನಕರಾತ್ಮಕ ಪದಗಳೇ ಜಾಸ್ತಿ. ಇವತ್ತಿನ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಮಾತನಾಡುವಾಗ ಈ ನಕರಾತ್ಮಕ ಅಂಶಗಳೇ ಜಾಸ್ತಿ ಚರ್ಚೆಯಾಗುತ್ತದೆಯೇ ಹೊರತು ಅವರ ಬಗೆಗಿನ ಸಕರಾತ್ಮಕ ಅಂಶಗಳ ಬಗ್ಗೆ ಹೆಚ್ಚಿನ ಗಮನ ಯಾರೂ ಕೊಡುತ್ತಿಲ್ಲ. ಇದು ಮಹಿಳೆಯರನ್ನು ಇನ್ನಷ್ಟು ಕುಗ್ಗಿಸುವ ಪ್ರಯತ್ನ ಎಂದೇ ಹೇಳಬೇಕಾಗುತ್ತದೆ. ಸಂಕಷ್ಟದ ಸಮಯದಲ್ಲಿ ಮಹಿಳೆಯರು ಹೇಗೆ ಅದೆಲ್ಲವನ್ನು ಎದುರಿಸಿ ಜೀವನ ನಿರ್ವಹಿಸುತ್ತಾರೆ, ಮತ್ತು ಪುರುಷರಿಗಿಂತ ಹೇಗೇ ಉತ್ತಮವಾಗಿ ಬದುಕುತ್ತಾರೆ ಎನ್ನುವದಕ್ಕೆ ಎಚ್ಐವಿ/ಏಡ್ಸ್ ನೊಂದಿಗೆ ಜೀವಿಸುತ್ತಿರುವ ಮಹಿಳೆಯರ ಬದುಕಿನ ಬಗ್ಗೆ ತಿಳಿದುಕೊಂಡರೆ ಅವರ ಬಗ್ಗೆ ಅಭಿಮಾನ ಮೂಡದೆ ಇರದು.

ಇಂದು ಜಗತ್ತಿನ್ಯಾದಂತ ಎಚ್ಐವಿ/ಏಡ್ಸ್ ಉಂಟುಮಾಡುತ್ತಿರುವ ಪರಿಣಾಮಗಳು ಎಲ್ಲರಿಗೂ ಗೊತ್ತಿರುವಂತಹದೇ. ಇದರ ಪರಿಣಾಮ ಹೆಚ್ಚು ಮಹಿಳೆಯರ ಮೇಲೆ ಆಗಿದೆ. ಲೈಂಗಿಕತೆ ವಿಚಾರದಲ್ಲಿ ಆಯ್ಕೆ ಸ್ವಾತಂತ್ರ್ಯ ಮಹಿಳೆಯರಿಗಿಂತ ಪುರುಷರಿಗೆ ಜಾಸ್ತಿ. ಭಾರತದಲ್ಲಂತೂ ಈ ವಿಚಾರದಲ್ಲಿ ಮಹಿಳೆಯರನ್ನು ನಗಣ್ಯ ಎಂದು ಪರಿಗಣಿಸಲಾಗಿದೆ ಎಂದರೂ ತಪ್ಪಾಗಲ್ಲಿಕ್ಕಿಲ್ಲ. ಕಾರಣ ತಮ್ಮದಲ್ಲದ ತಪ್ಪಿಗೆ ಸಾಕಷ್ಟು ಮಹಿಳೆಯರು ಎಚ್ಐವಿ/ಏಡ್ಸ್ ನೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಭಾರತದಲ್ಲಿ ಎಲ್ಲ ಸರಿಯಾಗಿರುವ ಮಹಿಳೆಯರಿಗೆ ಸಮಾಜದಲ್ಲಿ ಬದುಕಲು ಸಾಕಷ್ಟು ತೊಂದರೆಗಳಿರುವಾಗ ಇನ್ನು ಎಚ್ಐವಿ/ಏಡ್ಸ್ ನೊಂದಿಗೆ ಬದುಕುತ್ತಿರುವ ಮಹಿಳೆಯರ ಪರಿಸ್ಥತಿ ಏನಾಗಿರಬೇಡ ನೀವೇ ಹೇಳಿ? ಇಷ್ಟೆಲ್ಲಾ ಇದ್ದಾಗಿಯೂ ಸೋಂಕಿತ ಪುರುಷರಿಗಿಂತ ಮಹಿಳೆಯರೇ ಉತ್ತಮ ಜೀವನ ಹೋರಾಟದ ಜೀವನ ನಡೆಸುತ್ತಿರುವುದು ನಿಜಕ್ಕೂ ಅನುಕರಣಿಯ.

ನೆನಪಿರಲಿ, ಇವತ್ತು ಎಚ್ಐವಿ/ಏಡ್ಸ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಸಮಾಜದಿಂದ ನಿರ್ಲಕ್ಷಿಸಿಸಲ್ಪಟ್ಟ ಮಹಿಳಾ ಗುಂಪುಗಳು ಸಹ ಇಂದು ಎಚ್ಐವಿ/ಏಡ್ಸ್ ವಿರುದ್ಧ ಜಾಗ್ರತಿ ಆಂದೋಲನದಲ್ಲಿ ಮುಂಚುಣಿಯಲ್ಲಿದ್ದಾರೆ. ಎಚ್ಐವಿ/ಏಡ್ಸ ಇದೆ ಎಂದು ಗೊತ್ತಾದಾಗ ತಮ್ಮ ಜೀವನ ಮುಗಿಯಿತು ಎಂದುಕೊಂಡ ಎಷ್ಟೋ ಮಹಿಳೆಯರು ಇಂದು ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಂಡು ಉಳಿದ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ಸುಮಾರು ಏಳೆಂಟು ವರ್ಷಗಳ ಹಿಂದೆ ಕರ್ನಾಟಕ ಎಚ್ಐವಿ ಸೋಂಕಿತರ ಸಂಘಟನೆ (Karnataka Network for Positive living with HIV/AIDS)ಯನ್ನು ಕಟ್ಟಿದವಳು ಆಶಾ ರಾಮಾಯ್ಯ ಎನ್ನುವ ಹೆಣ್ಣುಮಗಳು. ಎಚ್ಐವಿ/ಏಡ್ಸ್ ಎಂದರೇನೆ ಭಯಬೀಳುತ್ತಿದ್ದ ಆಗಿನ ದಿನಗಳಲ್ಲಿ ಸಮಾಜದಲ್ಲಿ ಮುಂದೆ ಬಂದು ಸೊಂಕಿತರನ್ನು ಸಂಘಟಿಸಿ ಕಳಂಕ ತಾರತಮ್ಯ ಹೊಗಲಾಡಿಸಲು ಅವರ ಹೋರಾಟ ನಿಜಕ್ಕೂ ಮನನೀಯ.ಇವತ್ತಿಗೂ ಈ ಸಂಸ್ಥೆಯ ಅಧ್ಯಕ್ಷಳಾಗಿ ಮುನ್ನಡೆಸುತ್ತಿರುವಳು ಸರೋಜಾ ಎನ್ನುವ ಹೆಣ್ಣುಮಗಳು. ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸೋಂಕಿತರಿಗೆ ಆಶಾದೀಪವಾಗಿ ಸ್ಪೂರ್ತಿಯಾಗಿ ಬದುಕಿದ ವೀಣಾಧರಿ ಬಗ್ಗೆ ಎಲ್ಲರಿಗೂ ಗೊತ್ತು. ಈ ಕ್ಷೇತ್ರದಲ್ಲಿ ನನ್ನ ನಾಲ್ಕು ವರ್ಷಗಳ ಅನುಭವದಲ್ಲಿ ಹೇಳುವದಾದರೆ, ಎಚ್ಐವಿ/ಏಡ್ಸ್ ಇದೆ ಎಂದು ಗೊತ್ತಾದಾಗ ಅದರ ಆಘಾತದಿಂದ ಪುರುಷರಿಗಿಂತ ಮಹಿಳೆಯರೇ ಬೇಗನೇ ಚೇತರಿಸಿಕೊಂಡು ಮುಂದಿನ ಬದುಕಿನ ಬಗ್ಗೆ ಅನುವಾಗುವುದನ್ನು ನೋಡಿ ನನಗೆ ಈಗಲೂ ಅಚ್ಚರಿಯಾಗುತ್ತಿದೆ.

ಎಚ್ಐವಿ/ಏಡ್ಸ್ ಸೋಂಕಿತರ ಜೀವನಮಟ್ಟ ಸುಧಾರಿಸುವ ಏ.ಆರ್.ಟಿ ಔಷಧಿಯನ್ನು ಸರಿಯಾಗಿ ಕ್ರಮಬದ್ದವಾಗಿ ತೆಗೆದುಕೊಳ್ಳುವುದರಲ್ಲಿ ಮಹಿಳೆಯರೇ ಮುಂಚುಣಿಯಲ್ಲಿದ್ದು ತಮ್ಮ ಜೀವನದ ಅವಧಿಯನ್ನು ಹೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಸೋಂಕಿತ ಪುರುಷರೇ ಸರಿಯಾಗಿ ಕ್ರಮಬದ್ಧವಾಗಿ ಔಷಧಿ ತೆಗೆದುಕೊಳ್ಳದೇ ಬೇಗನೇ ಸಾವನ್ನಪ್ಪುತ್ತಿರುವುದನ್ನು ನೋಡಿದ್ದೇನೆ. ದೇಹದಲ್ಲಿ ಸಾವಿನ ವೈರಸ್ಸೆ ತುಂಬಿರುವುದು ಗೊತ್ತಿದ್ದರೂ ಬದುಕಿಗಾಗಿ ಅವರು ನಡೆಸುವ ಹೋರಾಟ ಇದೆಯಲ್ಲಾ ಅದು ನಿಜಕ್ಕೂ ಪ್ರಶಂಸನೀಯ, ಮೆಚ್ಚಬೇಕಾದ ವಿಷಯ. ಇವತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇರುವ ಎಚ್ಐವಿ ಸೋಂಕಿತರ ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೊಗುತ್ತಿರುವವರು ಸೋಂಕಿತ ಮಹಿಳೆಯರೇ.

ಹಿಂದೆ ಆಗಿ ಹೋದ ಮೋಸ, ಶೋಷಣೆ, ಲೈಂಗಿಕ ದೌರ್ಜನ್ಯಗಳ ಬಗ್ಗೆ ಕೊರಗುತ್ತ ಕೂಡದೇ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಕೊಳ್ಳಲು ಬದುಕಿಗಾಗಿ ಸಾಮನ್ಯ ಮಹಿಳೆಯರು ನಡೆಸುವ ಹೋರಾಟ ಇದೆಯಲ್ಲಾ ಅದು ನಿಜಕ್ಕೂ ಗ್ರೇಟ್ ಯಾವದೇ ರೀತಿಯ ಪ್ರಚಾರದ ಹೋರಾಟ ಮಾಡದೇ, ಸಾವಿನ ವಿರುದ್ಧ ನೀವು ಮಾಡುತ್ತಿರುವ ಬದುಕಿನ ಹೋರಾಟಕ್ಕೆ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನನ್ನದೊಂದು ಜೈಹೋ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X