ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿ ಗಾರುಡಿಗ ಲಂಕೇಶ್ 75

By Shami
|
Google Oneindia Kannada News

P Lankesh 75
ಸಾಹಿತ್ಯ ಅಕಾಡೆಮಿ ಮತ್ತು ಲಂಕೇಶ್ ವಾರಪತ್ರಿಕೆ ಸಹಯೋಗದಲ್ಲಿ ಎರಡು ದಿನಗಳ ಲಂಕೇಶ್ 75 ವಿಚಾರ ಸಂಕಿರಣ ಬೆಂಗಳೂರಿನಲ್ಲಿ ನಡೆಯಲಿದೆ. ನುಡಿ ಗಾರುಡಿಗ ಲಂಕೇಶ್ ಅವರನ್ನು ಬಲ್ಲವರು, ಅವರ ಬರವಣಿಗೆಗಳನ್ನು ಓದಿಕೊಂಡವರು ಮತ್ತು ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೃಷಿ ಮಾಡಿದವರು ಈ ಸಂಕಿರಣದಲ್ಲಿ ಭಾಗವಹಿಸುತ್ತಿದ್ದಾರೆ.

ಮಾರ್ಚ್ 6ರ ಶನಿವಾರ ಮತ್ತು 7 ಭಾನುವಾರ ಬೆಳಗಿನಿಂದ ಬೈಗಿನವರೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ಜರುಗುವ ವಿಚಾರ ಸಂಕಿರಣದಲ್ಲಿ ಒಟ್ಟು ಆರು ಗೋಷ್ಠಿಗಳಿವೆ. ಲಂಕೇಶ್ ಅವರ ಬಹುಮುಖೀ ವ್ಯಕ್ತಿತ್ವ ಮತ್ತು ಲೇಖನ ಕೃಷಿಯ ಮೇಲೆ ಈ ಗೋಷ್ಠಿಗಳು ಇನ್ನಷ್ಟು ಬೆಳಕು ಚೆಲ್ಲಲಿದ್ದು ಲಂಕೇಶ್ ಅಭಿಮಾನಿಗಳು ಹಾಗೂ ಸಾರಸ್ವತ ಲೋಕದಲ್ಲಿ ಅಭಿರುಚಿಯುಳ್ಳವರು ಸಂಕಿರಣದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ.

ವಿವರಗಳು ಇಂತಿವೆ :

ಮಾರ್ಚ್ 6, ಶನಿವಾರ ಉದ್ಘಾಟನಾ ಸಮಾರಂಭ : ಸ್ವಾಗತ ಭಾಷಣ; ಎಸ್. ಗುಣಸೇಕರನ್, ಪ್ರಾದೇಶಿಕ ಕಾರ್ಯದರ್ಶಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸಾಹಿತ್ಯ ಅಕಾಡೆಮಿ. ಪ್ರಾಸ್ತಾವಿಕ ಭಾಷಣ; ಗೌರಿ ಲಂಕೇಶ್. ಉದ್ಘಾಟನೆ : ವೈದೇಹಿ ; ಅಧ್ಯಕ್ಷತೆ ; ಕಿ.ರಂ. ನಾಗರಾಜ.

ಗೋಷ್ಠಿ 1 : 12 ಗಂಟೆಗೆ : ಲಂಕೇಶ್ ಮತ್ತು ಕನ್ನಡ ಸಾಹಿತ್ಯ ಪರಂಪರೆ 1

ಲಂಕೇಶ್ ಮತ್ತು ಕಾವ್ಯ : ಬಂಜಗೆರೆ ಜಯಪ್ರಕಾಶ
ಲಂಕೇಶ್ ಮತ್ತು ವಿಮರ್ಶೆ : ರಹಮತ್ ತರೀಕೆರೆ
ಲಂಕೇಶ್ ಮತ್ತು ಸಣ್ಣಕತೆ : ಆಶಾದೇವಿ
ಅಧ್ಯಕ್ಷತೆ : ಕೆ. ಮರುಳಸಿದ್ದಪ್ಪ

ಗೋಷ್ಠಿ 2: 2.20ಕ್ಕೆ: ಲಂಕೇಶ್ ಮತ್ತು ಕನ್ನಡ ಸಾಹಿತ್ಯ ಪರಂಪರೆ 2

ಲಂಕೇಶ್ ಮತ್ತು ಕಾದಂಬರಿ :ವಿ.ಎಸ್. ಶ್ರೀಧರ
ಲಂಕೇಶ್ ಮತ್ತು ನಾಟಕ : ರಘುನಂದನ
ಲಂಕೇಶ್ ಅವರ ಸಾಹಿತ್ಯಕ ಬರಹಗಳು : ಪಟ್ಟಾಭಿರಾಮ ಸೋಮಯಾಜಿ
ಅಧ್ಯಕ್ಷತೆ : ಫಕೀರ್ ಮೊಹಮ್ಮದ್ ಕಟ್ಪಾಡಿ

ಗೋಷ್ಠಿ 3 : 4.30 ಗಂಟೆಗೆ : ಲಂಕೇಶ್ ಮತ್ತು ನಾನು

ಬಿ. ಚಂದ್ರೇಗೌಡ
ಕೆ. ಅಕ್ಷತಾ
ಸರ್ಜಾ ಶಂಕರ್
ಅಧ್ಯಕ್ಷತೆ: ಕೋಟಿಗಾನಹಳ್ಳಿ ರಾಮಯ್ಯ

ಮಾರ್ಚ್ 7 ಭಾನುವಾರ: 10 ಗಂಟೆಗೆ ಸಂಕಿರಣ ಆರಂಭ

ಗೋಷ್ಠಿ 4 : ಲಂಕೇಶ್ ಬಗ್ಗೆ ಕೆಲವು ಅನಿಸಿಕೆಗಳು:

ಪಾರ್ವತೀಶ
ಸುಬ್ಬು ಹೊಲೆಯಾರ್
ಗುರುಶಾಂತ್
ಅಧ್ಯಕ್ಷತೆ : ಜಿ. ರಾಜಶೇಖರ

ಗೋಷ್ಠಿ 5 : ಮಧ್ಯಾಹ್ನ 12 ಗಂಟೆಗೆ : ಲಂಕೇಶ್ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳು

ವಿರೋಧ ಪಕ್ಷವಾಗಿ ಲಂಕೇಶ್ : ದಿನೇಶ್ ಅಮೀನ್‌ಮಟ್ಟು
ಲಂಕೇಶ್ ಅವರ ರಾಜಕೀಯ ಚಿಂತನೆ : ಕೆ. ಫನಿಕಾಜ್
ದಮನಿತರ ದನಿಯಾಗಿ ಲಂಕೇಶ್ : ಬಿ.ಎಂ. ಬಷೀರ್
ಅಧ್ಯಕ್ಷತೆ : ಎಚ್.ಎಲ್. ಕೇಶವಮೂರ್ತಿ

ಗೋಷ್ಠಿ 6 : 2.30ಕ್ಕೆ : ಲಂಕೇಶ್ ಮತ್ತು ಸಮಕಾಲೀನ ಸವಾಲುಗಳು

ಪ್ರಸ್ತುತ ರಾಜಕೀಯ : ಎ.ಕೆ. ಸುಬ್ಬಯ್ಯ
ಪ್ರಸ್ತುತ ಚಳವಳಿಗಳು : ಡಾ. ವಾಸು
ಕೋಮುವಾದ ಮತ್ತು ಜಾಗತೀಕರಣ : ಬಿ.ಎಂ. ಪುಟ್ಟಯ್ಯ
ಅಧ್ಯಕ್ಷತೆ : ಜಿ. ರಾಮಕೃಷ್ಣ

ಸಮಾರೋಪ ಸಮಾರಂಭ 4 ಗಂಟೆಗೆ

ಗೌರಿ ಲಂಕೇಶ್
ಪಾರ್ವತೀಶ
ಬಿರಾದಾರ್
ಅಧ್ಯಕ್ಷತೆ : ದೇವನೂರು ಮಹಾದೇವ

ಲಂಕೇಶ್ 75 : ಕವಿಗೋಷ್ಠಿ : ಕವನಗಳನ್ನು ವಾಚಿಸುವವರು:

ವಿನಯ, ಬಾಗೇಶ್ರೀ, ಅಕ್ಷತಾ, ಬಿ. ಶ್ರೀನಿವಾಸ್, ಸುಬ್ಬು ಹೊಲೆಯಾರ್, ಎಸ್. ಮಂಜುನಾಥ್, ರಂಗನಾಥ್, ಟಿ.ಎನ್. ಸೀತಾರಾಮ್, ಕಿ.ರಂ. ನಾಗರಾಜ, ವೈದೇಹಿ, ಜ್ಯೋತಿ ಗುರುಪ್ರಸಾದ್, ವೀರಣ್ಣ ಮಡಿವಾಳರ, ರಮೇಶ್ ಅರವಿಂದ್, ಕೈದಾಲ್ ಕೃಷ್ಣಮೂರ್ತಿ, ಅರೀಫ್ ರಾಜಾ, ಕೆ. ಶರೀಫಾ, ಶಿವಸುಂದರ್, ಕೀರ್ ಭಾಷಾ

ಅಧ್ಯಕ್ಷತೆ: ಚಂಪಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X