ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಹಬ್ಬಕ್ಕೆ ರಾಜ್ಯೋತ್ಸವ ವರದಿ ಕಳಿಸಿ

By Staff
|
Google Oneindia Kannada News

Naadahabba blog invites Kannada rajyotsava reports
ಕನ್ನಡ ರಾಜ್ಯೋತವ ಆಚರಣೆ ಎಲ್ಲೆಡೆ ನಡೆಯುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ, ಅಟ್ಲಾಂಟದಿಂದ ಝೈರೆವರೆಗೆ ಕನ್ನಡಿಗರು ಕಲೆತು ಕನ್ನಡದಹಬ್ಬ ಮಾಡ್ತಾಯಿದಾರೆ. ನವೆಂಬರ್ ತಿಂಗಳು ಕನ್ನಡಿಗರಿಗೆ ರಾಜ್ಯೋತ್ಸವದ ಉತ್ಸಾಹ ಮಾತ್ರವಲ್ಲ, ನಾವಾಡುವ ನುಡಿಯ ಯುಗಾದಿ ಕೂಡ. ಎಲ್ಲೆಲ್ಲಿ ಕನ್ನಡ ಹಬ್ಬ ನಡೆಯತ್ತೋ ಆ ಸುದ್ದಿ ಸಂಭ್ರಮಗಳನ್ನೆಲ್ಲ ಕಲೆಹಾಕಿ ಎಲ್ಲಾ ಒಂದೇ ಕಡೆ ಸಿಗುವಂತೆ ಮಾಡಿದರೆ ಚೆನ್ನಾಗಿರತ್ತೆ.

ಕನ್ನಡ ಚಟುವಟಿಕೆಗಳು ಹರಿದು ಹಂಚಿಹೋಗಬಾರದು. ಪರಸ್ಪರ ಹಂಚಿಕೊಳ್ಳುವಂತಿರಬೇಕು. ಈ ಚಿಂತನೆಯಿಂದಲೇ ಒಂದು ಬ್ಲಾಗು ತೆರೆಯಲಾಗಿದೆ. ಅದರ ಹೆಸರು ನಾಡಹಬ್ಬ ಡಾಟ್ ಬ್ಲಾಗ್ ಸ್ಪಾಟ್ ಡಾಟ್ ಕಾಂ (naadahabba.blogspot.com).

ನಾಡಹಬ್ಬ ಆಚರಣೆಯ ಇಂಥ ಗ್ರಂಥಾಲಯವನ್ನು ಅಂತರ್ಜಾಲದಲ್ಲಿ ಮಾತ್ರ ಆರಂಭಿಸಲು ಸಾಧ್ಯ. ಸಾಧ್ಯಮಾಡಿದ ನಾಡಹಬ್ಬ ಬ್ಲಾಗ್ ತಂಡಕ್ಕೆ ದಟ್ಸ್ ಕನ್ನಡದ ಶುಭಾಶಯ ತಲುಪಿಸುತ್ತಾ ತಂಡದಿಂದ ಬಂದ ಒಂದು ಮನವಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರ ಕೋರಿಕೆಯನ್ನು ಮನ್ನಿಸಿ ವಿವರಗಳನ್ನು ಅವರ ವಿಳಾಸಕ್ಕೆ ಕಳಿಸಿಕೊಡಿ; ಶಾಮ್, ಸಂಪಾದಕ.

ನಲ್ಮೆಯ ಗೆಳೆಯರೇ,

ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ನಿಮ್ಮ ಸಂಸ್ಥೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ನಡೆದಿದೆ, ನಡೆಯುತ್ತಾ ಇದೆ. ನಿಮ್ಮ ಸಂಸ್ಥೆಯಲ್ಲಿ ನಡೆದ ಸಂಭ್ರಮ, ಸಂತೋಷವನ್ನು ಎಲ್ಲ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಶುರುವಾದ ವೇದಿಕೆಯೇ ನಾಡ ಹಬ್ಬ ಬ್ಲಾಗ್ (naadahabba.blogspot.com). ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ಸಂಸ್ಥೆಯಲ್ಲಿ ನಡೆದ ರಾಜ್ಯೋತ್ಸವದ ವರದಿಯನ್ನು ಫೋಟೋಸ್ ಸಮೇತ [email protected]ಗೆ ಕಳಿಸಿ ಕೊಡಬೇಕಾಗಿ ನಿಮ್ಮಲ್ಲಿ ಕೋರುವ,

ನಾಡ ಹಬ್ಬ ಬ್ಲಾಗ್ ತಂಡ, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X