ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಟಣೆ ಹೆಚ್ಚಿಸುತ್ತಿರುವ ರಸ್ತೆ ವಿಭಜಕಗಳು

|
Google Oneindia Kannada News

Mathur Raghu
ಈಗ್ಗೆ ಕೆಲ ತಿಂಗಳುಗಳ ಹಿಂದಿನ ತನಕ ಬನಶಂಕರಿ ಎರಡನೇ ಹಂತದ ಒಂದು ಮುಖ್ಯವಾದ ರಸ್ತೆಯಲ್ಲಿ ಸುಮಾರು ಮುಕ್ಕಾಲು ಅಡಿಯ ರಸ್ತೆ ವಿಭಜಕಗಳಿದ್ದವು. ಅವು ಅತ್ಯಂತ ಸರಳವಾಗಿದ್ದವು ಹಾಗೂ ಅಷ್ಟೇ ಪರಿಣಾಮಕಾರಿಯಾಗಿಯೂ ಇದ್ದವು. ಎಂದೂ ವಾಹನ ದಟ್ಟಣೆಗಾಗಲೀ ಅಥವಾ ಇನ್ಯಾವುದೇ ಅಹಿತಕರ ಘಟನೆಗಳಿಗಾಗಲೀ ಆಸ್ಪದವಿರಲಿಲ್ಲ. ಆದರೆ, ನಂತರ ಕೆಲ ಆ ಎಲ್ಲವನ್ನೂ ಕಿತ್ತು ಹಾಕಿ ಮೂರರಿಂದ ನಾಲ್ಕು ಅಡಿ ಅಗಲದ ಹಾಗೂ 2 ಅಡಿ ಎತ್ತರದ, ಚಪ್ಪಡಿ ಕಲ್ಲಿನಿಂದ ಕೂಡಿದ ರಸ್ತೆ ವಿಭಜಕಗಳನ್ನು ಹಾಕಿದರು.

ಇಪ್ಪತ್ತು ಅಡಿ ರಸ್ತೆಯಲ್ಲಿ ನಾಲ್ಕು ಅಡಿ ರಸ್ತೆ ವಿಭಜಕ, ವಾರೆ ವ್ಹಾ...! ರಸ್ತೆಗಿಂತ ಹೆಚ್ಚಾಗಿ ರಸ್ತೆ ವಿಭಜಕಗಳೇ ದೊಡ್ಡದಾಗಿ ಕಾಣುತ್ತವೆ..!

ಪ್ರಸ್ತುತ, ಆ ಬೃಹತ್ ರಸ್ತೆವಿಭಜಕ ಅದರ ಜತೆಗೆ ಸೇರಿದ ಸಂಚಾರ ದಟ್ಟಣಾ ಸೂಚಕಗಳು ಯಾವ ಮಟ್ಟದ ವಾಹನ ದಟ್ಟಣೆಗೆ ಕಾರಣವಾಗಿದೆ ಎಂದರೆ ರಸ್ತೆಯಲ್ಲಿ ಓಡಾಡುವವರೆಲ್ಲರೂ ಪಾಲಿಕೆಯ ಕೋಟಿಪತಿಗಳ ಕುರಿತು ಕಾಂಟ್ರ್ಯಾಕ್ಟ್‌ನ ಲಂಚಕ್ಕೋಸ್ಕರ ಸರಿಯಿದ್ದ ರಸ್ತೆಯನ್ನು ಯಕ್ಕುಟ್ಟಿಸಿದರು ಎಂದು ಬಾಯಿತುಂಬ ಹೊಗಳಿ(?) ಹೋಗುತ್ತಾರೆ.

ಹೀಗೆಯೇ ನಗರದಲ್ಲಿ ಹಲವು ಅಸಮರ್ಪಕ ರಸ್ತೆ ವಿಭಜಕಗಳು ಹಾಗೂ ಸಂಚಾರ ದಟ್ಟಣಾ ಸೂಚಕಗಳು ಅಯೋಗ್ಯ ರೀತಿಯಲ್ಲಿದೆ.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಎಲ್ಲ ಬದಲಾವಣೆಗಳೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸರಿಯಿರುವ ವ್ಯವಸ್ಥೆಯ ಸ್ಥಳದಲ್ಲಿ ಹೊಸ ವ್ಯವಸ್ಥೆಯನ್ನು ತರುವುದರ ಬದಲು, ಅವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವುದೇ ಉತ್ತಮ ಹಾಗು ನಿಜವಾದ ಅಭಿವೃದ್ಧಿ. ಯಾವುದೇ ಕಾರ್ಯಾಚರಣೆಯ ಹಿಂದೆ ಕಿಂಚಿತ್ ವಿವೇಕವಿರಲಿ ಎಂಬುದೇ ನಮ್ಮ ಕೋರಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X