ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪ್ರದಾಯ ಧಿಕ್ಕರಿಸುವ ಕೇಶಮುಂಡನ ಎಷ್ಟು ಸರಿ?

By Staff
|
Google Oneindia Kannada News

Does hinduism allow haircut for women?
ಯಾಹೂನ ಒಂದು ಇಮೇಲ್ ಗ್ರೂಪ್ನೊಳಗೆ ಇತ್ತೀಚೆಗೆ ಒಂದು ಚರ್ಚೆ ನಡೆಯಿತು. ಯಾರೋ ಒಬ್ಬ ಮಹಾಶಯರಿಗೆ ಇದ್ದಕ್ಕಿದ್ದಂತೆ ಒಂದು ಜಿಜ್ಞಾಸೆ ತಲೆದೋರಿತು. ಅದೇನೆಂದರೆ, ಅವರ ಆರು ವರ್ಷದ ಮಗಳಿಗೆ ಕೆಲವು ಕಾರಣಗಳಿಂದಾಗಿ ಕೇಶಮುಂಡನ ಮಾಡಿಸಬೇಕಾದ ಪರಿಸ್ಥಿತಿ ಉಂಟಾಯಿತು. ಆದರೆ, ಹೆಣ್ಣುಮಕ್ಕಳ ಕೇಶ ಕತ್ತರಿಸುವುದಕ್ಕೆ ನಮ್ಮ ಹಿಂದೂ ಸಂಪ್ರದಾಯ ಒಪ್ಪುತ್ತದೋ ಬಿಡುತ್ತದೋ ಎಂಬ ಸಂದೇಹ ಅವರನ್ನು ಕಾಡಿತು.

ತಲತಲಾಂತರಗಳಿಂದ ಅವರ ಮನೆತನದಲ್ಲಿ ಕೆಲವು ಸಂಪ್ರದಾಯಗಳನ್ನು ಚಾಚೂತಪ್ಪದೆ ಪರಿಪಾಲಿಸಿಕೊಂಡು ಬರುತ್ತಿರುವಾಗ ಇಂಥ ಪರಿಸ್ಥಿತಿ ಉದ್ಭವವಾದುದು ಅವರನ್ನು ಕೊಂಚ ಗಲಿಬಿಲಿಗೆ ಈಡುಮಾಡಿತು. ಅದಕ್ಕೆ ಅವರು ಜತೆಗಾರರ ಸಲಹೆ ಸೂಚನೆಗಳನ್ನು ಕೋರಿ ಯಾಹೂ ಜಗಲಿ ಕಟ್ಟೆಗೆ ಒಂದು ಪತ್ರ ಹಾಕಿದರು. ಅದರ ಸಾರಾಂಶ ಹೀಗಿದೆ:

1) ನನ್ನ ಆರು ವರ್ಷದ ಮಗಳು ನೀನೀ ನೀಳಕೇಶಿ. ಅವಳಿಗೆ ಕೂದಲು ತುಂಬಾ ಉದ್ದ ಬೆಳೆಯುತ್ತದೆ. ಈ ಕಾರಣದಿಂದಾಗಿ ಕೆಲವೊಮ್ಮೆ ತಲೆತುರಿಕೆ ಬರುತ್ತದೆ. ಬಹಳ ಕಿರಿಕಿರಿ ಆಗುತ್ತದೆ ಎನ್ನುತ್ತಾಳೆ. ಅವಳನ್ನು ಸೆಲೂನ್ ಗೆ ಕರೆದುಕೊಂಡು ಹೋಗಿ ಹೇರ್ ಕಟಿಂಗ್ ಮಾಡಿಸುವುದು ಸರಿಯೇ? ಅದರಲ್ಲೂ ಭಾದ್ರಪದ ಕೃಷ್ಣ (ಪಕ್ಷಮಾಸ)ದಲ್ಲಿ ಚೌರದ ಅಂಗಡಿಗೆ ಹೋಗಿ ಹೇರ್ ಡ್ರೆಸ್ಸಿಂಗ್ ಮಾಡಿಸುವುದು ಎಷ್ಟರಮಟ್ಟಿಗೆ ಸಮಂಜಸ?

2) ಹೆಣ್ಣು ಮಕ್ಕಳ ಕೂದಲು ಕತ್ತರಿಸುವುದು ತಪ್ಪಾದರೆ, ನನ್ನ ಮಗಳ ಸಮಸ್ಯೆಗೆ ಪರಿಹಾರ ಏನು? ಏನೋ ಒಂದು ನೆಪವೊಡ್ಡಿ ಸಂಪ್ರದಾಯವನ್ನು ಮುರಿಯುವ ಇಚ್ಛೆ ನನಗಿಲ್ಲ. ಇದು ಮಕ್ಕಳಿಗೂ ಅನ್ವಯಿಸುತ್ತದೆ ಹಾಗೂ ಸುಮಂಗಲಿಯರಿಗೂ ಸಲ್ಲುತ್ತದೆ.

3) ಒಂದು ವೇಳೆ ಮಗಳ ಕೂದಲನ್ನು ಕತ್ತರಿಸಿ, ಪ್ರಾಯಶ್ಚಿತ್ತಕ್ಕೋಸ್ಕರ ಆ ಕೂದಲನ್ನು ತಿರುಪತಿಯಲ್ಲಿ ಕಾಣಿಕೆಯಾಗಿ ಕೊಡಬಹುದಾ? ನಾನು ತೆರೆದ ಮನಸ್ಸಿನವನು. ನಿಮ್ಮ ಸಲಹೆ, ಚಿಂತನೆಗಳಿಗಾಗಿ ಎದುರುನೋಡುತ್ತಿದ್ದೇನೆ.

ಸಂದೇಹ ನಿವಾರಣೆಗೆ ಅನೇಕರು ಅನೇಕ ಬಗೆಯ ಸಲಹೆಗಳನ್ನು ಕೊಟ್ಟರು. ಮೂಲ ಪತ್ರಗಾರರ ಸಂದೇಹ ನಿವಾರಣೆ ಆದಹಾಗೆ ಕಾಣುತ್ತಿಲ್ಲ. ನಿಮ್ಮ ಸಲಹೆಗಳು ಎಂತಿವೆಯೋ?

ಯಾಹೂ ಗ್ರೂಪ್ ನಲ್ಲಿರುವ ಅನೇಕರು ದಟ್ಸ್ ಕನ್ನಡ ವಾಚಕ ಬಂಧುಗಳಾಗಿರುವುದರಿಂದ ಚರ್ಚೆಯ ಅಂಗಳವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಈ ವಿಷಯವನ್ನು ಇಲ್ಲಿ ಪ್ರಸ್ತಾಸಿಸಲಾಗಿದೆ- ಸಂಪಾದಕ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X