ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಗೋ ಗ್ರೀನ್...

By Staff
|
Google Oneindia Kannada News

Photo courtesy : Jayaprakash Srinivasan, PR officer, Oracle volunteers club
ರಸ್ತೆ ಅಗಲೀಕರಣ, ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ, ಮೆಟ್ರೋ ರೈಲು ಯೋಜನೆಗಳ ನೆವ ಒಡ್ಡಿಕೊಂಡು ಮತ್ತು ವಿನಾಕಾರಣ ಬೆಂಗಳೂರಿನ ಅಂದ ಹೆಚ್ಚಿಸಿದ್ದ ಸಾವಿರಾರು ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿಹಾಕಲಾಗಿದೆ. ಒಂದಾನೊಂದು ಕಾಲದಲ್ಲಿ ಹಸಿರು ಹೊದಿಕೆ ಹೊದ್ದಿದ್ದ ಬೆಂಗಳೂರು ಉದ್ಯಾನ ನಗರಿಯ ಪಟ್ಟ ಎಂದೋ ಕಳೆದುಕೊಂಡಿದೆ. ರಸ್ತೆ ಅಗಲೀಕರಣದ ನಂತರವೂ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟಿದ್ದು ಅಪರೂಪವೆ. ಆದಾಗ್ಯೂ ಇಕೋ ವಾಚ್ ನಂಥ ಸಂಸ್ಥೆ ಬೆಂಗಳೂರಿನ ಉಸಿರಾಗಿರುವ ಹಸಿರನ್ನು ಮರಳಿತರಲು ಕಾರ್ಯತತ್ಪರವಾಗಿದೆ. ಇಂಥ ಯೋಜನೆಗೆ ಒರಾಕಲ್ ನಂಥ ಸಾಫ್ಟ್ ವೇರ್ ಸಂಸ್ಥೆ ಕೈಜೋಡಿಸಿದ್ದು ಸ್ತುತ್ಯರ್ಹ. ಸಾರ್ವಜನಿಕರೂ ಈ ಯೋಜನೆಗೆ ಕೈಜೋಡಿಸಲಿ, ಬೆಂಗಳೂರು ಮೊದಲಿನ ಸೌಂದರ್ಯವನ್ನು ಮರಳಿ ಪಡೆಯಲಿ.

* ಅರ್ಚನಾ ಹೆಬ್ಬಾರ್, ಬೆಂಗಳೂರು

ಪರಿಸರ ದಿನಾಚರಣೆಯ ಮುಂದುವರಿದ ಕಾರ್ಯಕ್ರಮವಾಗಿ ಒರಾಕಲ್ ಸಂಸ್ಥೆಯ ಪರಿಸರ ಪ್ರೇಮಿ ಉದ್ಯೋಗಿಗಳು 'ಇಕೋ ವಾಚ್' ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 600 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಆವಲಹಳ್ಳಿ ಕೆರೆಯಲ್ಲಿ ಜೂನ್ 15ರ ನಂತರದ ವಾರಾಂತ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರನ್ನು ಹಸಿರಾಗಿಸಲು ಇದೊಂದು ಪುಟ್ಟ ಹೆಜ್ಜೆ. ಇಕೋ ವಾಚ್ ಸಂಸ್ಥೆ 'ಗೋ ಗ್ರೀನ್' ಯೋಜನೆಯ ಅಂಗವಾಗಿ ಮೊದಲ ಹಂತದ ಗಿಡ ನೆಡುವ ಕಾರ್ಯಕ್ರಮವನ್ನು ಜೂನ್ 6ರಂದು ಹಮ್ಮಿಕೊಂಡಿದ್ದರು. ಕಳೆದ ಶನಿವಾರ ಆಲ್ ಇಂಡಿಯಾ ರೇಡಿಯೋದ 'ಇಕೋ ಎಜ್ಯುಕೇಶನ್ ಸೆಂಟರಿನಲ್ಲಿ ಸುಮಾರು 100 ಗಿಡಗಳನ್ನು ನೆಡುವ ಮೂಲಕ 'ಗೋ ಗ್ರೀನ್' ಯೋಜನೆಗೆ ಚಾಲನೆ ನೀಡಲಾಯಿತು. ಈ ಗಿಡನೆಡುವ ಕಾರ್ಯಕ್ರಮದಲ್ಲಿ ಒರಾಕಲ್ ಕಂಪನಿಯ 40ಕ್ಕೂ ಹೆಚ್ಚಿನ ಉದ್ಯೋಗಿಗಳು ಸಂಸಾರ ಸಮೇತರಾಗಿ ಭಾಗವಹಿಸಿದ್ದರು. ಮುಂಬರುವ ವಾರಾಂತ್ಯಗಳಲ್ಲಿ ಮತ್ತಷ್ಟು ಗಿಡಗಳನ್ನು ನೆಡುವ ಉದ್ದೇಶ ಇಕೋ ವಾಚ್ ಸಂಸ್ಥೆ ಹೊಂದಿದೆ.

ಶನಿವಾರದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಕೋ ವಾಚ್ ಮುಖ್ಯಸ್ಥರಾಗಿರುವ ಚಿತ್ರನಟ ಮತ್ತು ಪರಿಸರವಾದಿ ಸುರೇಶ ಹೆಬ್ಳೀಕರ್ ಅವರು "ಬಹಳಷ್ಟು ಸಂಸ್ಥೆಗಳು ಪರಿಸರ ಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿವೆ. ಪರಿಸರ ರಕ್ಷಣೆಗೆ ಇದು ಅತ್ಯಗತ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರದ ಅವಶ್ಯಕತೆಯಿದೆ. ಪರಿಸರದಲ್ಲಿ ನಾವು ಬಹು ಮುಖ್ಯವಾಗಿ ಕಾಯ್ದುಕೊಂಡು ಬರಬೇಕಾದ್ದು ನೀರು ಮತ್ತು ಜೀವ ವೈವಿಧ್ಯ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಸುತ್ತಮುತ್ತ ಒಂದು ಮಿಲಿಯನ್ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ" ಎಂದು ನುಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X