ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ ತಂಪಾಗಿಸುವ ಮೆಂತೆ ತಂಬುಳಿ

By * ಅರ್ಚನಾ ಹೆಬ್ಬಾರ್
|
Google Oneindia Kannada News

Mente tambuli, summer special recipe
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ತಯಾರಿಸುವ ಒಂದು ಬಗೆಯ ಮೇಲೋಗರಕ್ಕೆ "ತಂಬುಳಿ" ಎಂದು ಹೆಸರು. ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ! ತಂಬುಳಿಯ ಮೂಲವಸ್ತು : ತೆಂಗಿನಕಾಯಿ ತುರಿ ಮತ್ತು ಮಜ್ಜಿಗೆ. ಮತ್ತೆ ಒಗ್ಗರಣೆ. ಮೆಂತೆ ತಂಬುಳಿ, ಒಂದೆಲಗದ ತಂಬುಳಿ, ಶುಂಠಿ ತಂಬುಳಿ, ದೊಡ್ಡ ಪತ್ರೆ ತಂಬುಳಿ, ಮಾವಿನ ಮಿಡಿ ತಂಬುಳಿ..ಒಂದೇ ಎರಡೇ..ಹಲವಾರು ವಿಧದ ತಂಬುಳಿಗಳು ಜನಪ್ರಿಯವಾಗಿವೆ.

ಇಲ್ಲಿ ಮೆಂತೆ ತಂಬುಳಿ ಮಾಡುವ ವಿಧಾನವನ್ನು ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು

ಮೆಂತೆ : ಅರ್ಧ ಚಮಚ
ಜೀರಿಗೆ : ಒಂದು ಚಮಚ
ಕಾಳು ಮೆಣಸು : 6
ಮಜ್ಜಿಗೆ : ಎರಡು ಲೋಟ
ತೆಂಗಿನ ಕಾಯಿ ತುರಿ : ಅರ್ಧ ಲೋಟ
ಉಪ್ಪು : ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಎಣ್ಣೆ : ಒಂದು ಚಮಚ
ಬೇವಿನೆಲೆ : 6 ಎಸಳು
ಜೀರಿಗೆ : ಅರ್ಧ ಚಮಚ
ಸಾಸಿವೆ : ಅರ್ಧ ಚಮಚ

ತಂಬುಳಿ ತಯಾರಿಸುವ ವಿಧಾನ

* ಮೆಂತೆ, ಜೀರಿಗೆ, ಕಾಳು ಮೆಣಸು ಇವುಗಳನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
* ಈ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಹಾಕಿ ಕಲಸಿ.
* ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ, ಸಾಸಿವೆ, ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ, ಬೇವಿನ ಎಸಳು ಹಾಕಿ
* ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ ಕಲಸಿ.
* ಇದೇ ತಂಬುಳಿ. ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ.

English summary
Archana Hebbar from Hosamatha, Putturu Taluk, Dakshina Kannada has cooked mente tambuli in her column in Citizen journalism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X