ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ

By Staff
|
Google Oneindia Kannada News

Long lasting Bignonia flower
ಹೇಮಂತ ಮುಗಿದು ಶಿಶಿರ ಋತು ಕಾಲಿಡುತ್ತಿದ್ದಂತೆ ಮಲೆನಾಡಿನ ಕಾಡಿನಲ್ಲಿ ಹಳೆತನ ಅಳಿದು ಹೊಸತನ ಪಡೆಯುವ ಸಂಭ್ರಮ. ಸಾವಿರಾರು ಪ್ರಭೇದಗಳ ಹೂಗಳು ನನಗಿಂತ ಚೆಲುವೆಯರು ಯಾರಲ್ಲಿ? ಎಂದು ಬೀಗಲು ಪ್ರಾರಂಭಿಸುತ್ತವೆ. ಅವುಗಳ ಆಯುಷ್ಯ ಮಾತ್ರ ಒಂದೇ ದಿನ. ಆದರೆ, ಬಿಗ್ನೋನೇಸಿಯೇ (Bignoniaceae) ಕುಟುಂಬಕ್ಕೆ ಸೇರಿದ ಬಿಗ್ನೋನಿಯಾ ಹೂ ಮಾತ್ರ ಭರ್ತಿ ಎರಡು ತಿಂಗಳುಗಳ ಕಾಲ ದೀರ್ಘ ಬಾಳುತ್ತದೆ.

* ರಾಘವೇಂದ್ರ ಶರ್ಮಾ, ತಲವಾಟ, ಸಾಗರ

ಹೂವುಗಳು ಮನುಷ್ಯನ ಮನಸ್ಸಿಗೆ ಮುದಕೊಡುವ ವಿಷಯಗಳಲ್ಲಿ ಒಂದು. ಸಾವಿರಾರು ಜಾತಿ ಪ್ರಭೇದಗಳಿರುವ ಹೂಗಳಲ್ಲಿ ಬಹುಪಾಲು ಒಂದೇ ದಿನದಲ್ಲಿ ಅರಳಿ ಮುದುಡುವಂತಹದ್ದು. ಆದರೆ ಈ ಬಿಗ್ನೋನಿಯಾ ಮಾತ್ರ ನಿರಂತರ 2 ತಿಂಗಳುಗಳ ಕಾಲ ಬಾಡದೆ ಉಳಿದಿರುತ್ತದೆ. ಕಹಳೆಯಾಕಾರದ ಈ ಹೂ ಪ್ಲಾಸ್ಟಿಕ್ ಹಾಳೆಗಳನ್ನು ಕತ್ತರಿಸಿ ಮಾಡಲಾಗಿದೆಯೇನೋ ಎಂಬಂತಿರುತ್ತದೆ. ಫೆಬ್ರವರಿಯಿಂದ ಹೂ ಅರಳಲಾರಂಬಿಸಿದರೆ ಏಪ್ರಿಲ್ ಅಂತ್ಯದವರೆಗೂ ನಿರಂತರ ಹೂ ಬಿಡುತ್ತಲೆ ಇರುತ್ತದೆ.

ಮಲೆನಾಡಿನಲ್ಲಿನ ಬಂಗಾರದ ಬೆಳೆ ಎಂದು ಹೆಸರಾಗಿದ್ದ ವೆನಿಲಾಕ್ಕೂ ಇದಕ್ಕೂ ಬಹಳ ಸಾಮ್ಯತೆ ಇದೆ. ವೆನಿಲಾ ಕೂಡ ಇದೇ ಸಮಯದಲ್ಲಿ ಹೂವು ಬಿಡುತ್ತದೆ. ಬಿಗ್ನೋನಿಯಾ ಬಳ್ಳಿಯ ಮೂಲ ದಕ್ಷಿಣ ಅಮೆರಿಕ. ಆ ನಾಡಿನಿಂದ ಮಲೆನಾಡಿಗೆ ಬಂದದ್ದು ಹೇಗೆ ಎನ್ನುವ ಮಾಹಿತಿ ತಿಳಿದಿಲ್ಲ.

ಇದು ಫಿಗ್ ವರ್ಟ್ ಫ್ಯಾಮಿಲಿಗೆ ಸೇರಿದೆ. ಉಷ್ಣ ವಲಯದ ಕಾಡುಗಳಲ್ಲಿ ಕಲಾಬಾಷ್ ಮರಗಳಿಗೆ ಹಬ್ಬುವ ಬಿಗ್ನೋನಿಯ ಆ ಮರಗಳಿಗೆ ಸೌಂದರ್ಯ ತರಿಸುತ್ತದೆ. ಇದರ ಹೂ ಮಕರಂದವನ್ನು ಹೊಂದಿದ್ದು ತುಡುವೆ ಜೇನನ್ನು ಆಕರ್ಶಿಸುತ್ತದೆಯಾದರೂ ಫಲಿತಗೊಂಡು ಕಾಯಿ ನಮ್ಮ ಮಲೆನಾಡಿನಲ್ಲಿ ಬಿಡುವುದಿಲ್ಲ. ಗೆಲ್ಲುಗಳಿಂದ ತಳಿ ಅಭಿವೃದ್ದಿಯಾಗುತ್ತದೆ. ಮನೆಯ ಬಳಿ ನೆಟ್ಟರೆ ಮನೆಗೆಲ್ಲಾ ಹಬ್ಬಿ ಕಣ್ಮನ ತಣಿಸುವುದು ನಿಶ್ಚಿತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X