• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲಾಗಿಗರಿಗೆ ಬ್ಲಾಗೋದುಗನ ಬಿನ್ನಹ

By Staff
|

ಕಳೆದ ಆರು ತಿಂಗಳ ಹಿಂದೆ ಕನ್ನಡ ಬ್ಲಾಗು ಪ್ರಪಂಚದಲ್ಲಿ ಇದ್ದ ಉತ್ಸಾಹ ಈಗ ಕಂಡುಬರುತ್ತಿಲ್ಲ. ಅನೇಕ ಬ್ಲಾಗುಗಳು ಹೊಸ ಹೊಸ ಪದಾರ್ಥಗಳನ್ನು ಕಾಣದೆ ಸೊರಗಿದ ಗೋಣಿಚೀಲಗಳಂತಾಗಿವೆ. ಯಾಕೆ ಹೀಗಾಗಿದೆ ? ಜಾಗತಿಕ ಅರ್ಥ ವ್ಯವಸ್ಥೆ ದಿವಾಳಿ ಆಗಿದ್ದಕ್ಕಾ ಅಥವಾ ಸೆನ್ಸೆಕ್ಸ್ ಅಂಕಗಳು ದಢಾರನೆ ಕುಸಿದು ಬಿದ್ದದ್ದು ಕಾರಣವಾ ? ಪ್ರತಿಭೆಯ ಬ್ಯಾಂಕ್ ಬ್ಯಾಲೆನ್ಸ್ ಕರಗಿಯೇಹೋಯಿತಾ? ಪ್ರೀತಿಯ ಬೆನ್ನೇರಿ ಕವನ ಹೊಸೆಯುತ್ತಿದ್ದ ಯುವ ಕವಿಗಳಿಗೆ ಕಂಕಣ ಬಲವೇನಾದರೂ ಕೂಡಿಬಂತಾ ? ಆ ಭಗವಂತನಿಗೇ ಗೊತ್ತು. ಕಾರಣಗಳು ಕಾರಣಗಳಷ್ಟೆ.

ಸಮಯ ಆಸಕ್ತಿ ಮತ್ತು ಪ್ರತಿಭೆಯ ತ್ರಿವೇಣಿ ಸಂಗಮಕ್ಕೆ ಪ್ರತೀಕವಾಗಿ ನಿಲ್ಲುವ ಬ್ಲಾಗು ಸಾಹಿತ್ಯಕ್ಕೆ ಈ ಚಳಿಗಾಲ ಜಡತ್ವ ತಂದಿರುವುದಂತೂ ಸತ್ಯ. ಬ್ಲಾಗು ಸಾಹಿತ್ಯ ಓದುವಿಕೆಯ ಚಟ ಅಂಟಿಸಿಕೊಂಡ ಒಂದು ಗದ್ಯದ ಮನಸ್ಸು ಈ ನೀರವತೆಯನ್ನು ಕಂಡು ಖಿನ್ನವಾಗಿ ಪದ್ಯಕ್ಕೆ ಶರಣಾಗಿರುವುದು ಅಷ್ಟೇ ಸತ್ಯ. ಬನ್ನಿ. ಗದ್ಯ ಹೃದ್ಯಂ ಎಂದು ಸದಾ ಹಾಡುವ ನಿಮ್ಮಬ್ಲಾಗು ಓದುಗನೊಬ್ಬ ಇವತ್ತು ಅಣಕುವಾಡನ್ನು ಹಾಡುತ್ತಿದ್ದಾನೆ. ಆಲಿಸಿರಿ -ಸಂಪಾದಕ

*ಬ್ಲಾಗೋದುಗ, ಊರು ಬೇಡ.

ಎಲ್ಲಿ ಹೋಗುವಿರಿ ನಿಲ್ಲಿ ಬ್ಲಾಗಿಗರೆ

ನಾಲ್ಕು ಸಾಲು ಗೀಚಿ!

ಅಪ್‌ಡೇಟು ಮಾಡಿ ದಿನವೆಷ್ಟು ಆಯ್ತು

ಬರಲಿಲ್ವೆ ಏನು ತೋಚಿ?

ಪ್ರತಿಯೊಂದು ಪೋಸ್ಟಿಗೂ ಫೀಡ್‌ಬ್ಯಾಕು ಬರೆದರೂ

ಬರಲಿಲ್ಲ ನಿಮಗೆ ಕರುಣ

ನನ್ನ ಬ್ರೌಸರಲಿ ನೋವು ಮಿಡಿಯುತಿದೆ

ನಾನು ನಿಮಗೆ ಶರಣ

ಜಡವಾದ ನಿಮ್ಮ ಕೀಬೋರ್ಡುಮೌಸುಗಳ

ಧೂಳು ಕೊಡವಿರಿನ್ನು

ನೀಲಗಗನದಲಿ ತೇಲಿಬಿಡಿರಿಂದು

ಅಕ್ಷರದ ಧಾರೆಯನ್ನು

ಬ್ಲಾಗುಂಟು ನಿಮಗೆ ಬರೀಬೇಕು ನೀವು

ಪಿಸುಮಾತು ನುಡಿಗಳನ್ನು

ನೀವು ಬರೆಯುವುದ ಓದಿ ಕಟ್ಟುವೆನು

ಕಲ್ಪನೆಯ ಗುಡಿಗಳನ್ನು

ಓ ಬನ್ನಿ ಬನ್ನಿ ಓ ತನ್ನಿ ತನ್ನಿ

ಹೊಸದೊಂದು ಪೋಸ್ಟು ತನ್ನಿ

ನಿಂತ ನೀರಿನೊಲು ಮೌನವಾಗಿರುವ

ಬ್ಲಾಗು ಬೆಳಗ ಬನ್ನಿ

=================

(ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೂಲ ರಚನೆ)

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

ನಾಲ್ಕು ಹನಿಯ ಚೆಲ್ಲಿ

ದಿನದಿನವು ಕಾದು ಬಾಯಾರಿ ಬೆಂದೆ

ಬೆಂಗದಿರ ತಾಪದಲ್ಲಿ

ನನ್ನೆದೆಯ ಹಸಿರ ಉಸಿರು ಕುಗ್ಗಿದರು

ಬರಲಿಲ್ಲ ನಿಮಗೆ ಕರುಣ

ನನ್ನ ಹೃದಯದಲಿ ನೋವು ಮಿಡಿಯುತಿದೆ

ನಾನು ನಿಮಗೆ ಶರಣ

ಬಡವಾದ ನನ್ನ ಒಡಲುರಿಯ ಬೇಗೆ

ನಿಮಗರಿವು ಆಗಲಹುದೆ?

ನೀಲ ಗಗನದಲಿ ತೇಲಿ ಹೋಗುತಿಹ

ನಿಮ್ಮನೆಳೆಯಬಹುದೆ ?

ಬಾಯುಂಟು ನನಗೆ ಕೂಗ ಬಲ್ಲೆ ನಾ

ನಿಮ್ಮೆದೆಯ ಪ್ರೇಮವನ್ನು

ನೀವು ಕರುಣಿಸಲು ನನ್ನ ಹಸಿರೆದೆಯು

ಉಸಿರುವುದು ತೋಷವನ್ನು

ಓ ಬನ್ನಿ ಬನ್ನಿ ಓ ಬನ್ನಿ ಬನ್ನಿ

ನನ್ನೆದೆಗೆ ತಂಪ ತನ್ನಿ

ನೊಂದ ಜೀವರಿಗೆ ತಂಪನೀಯುವುದೇ

ಪರಮ ಪೂಜೆಯೆನ್ನಿ

=====================

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more