• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರವಿ ಬೆಳೆಗೆರೆ ಎಂಬ ಐವತ್ತರ ಹರೆಯದ ಹುಡುಗ

By Staff
|

Ravi belagere turns 50ಖ್ಯಾತ ಬರಹಗಾರ, ದಟ್ಸ್ ಕನ್ನಡ.ಕಾಂ ಅಂಕಣಗಾರ ರವಿಬೆಳಗೆರೆ ಅವರು ಶನಿವಾರದಂದು ತಮ್ಮ ಐವತ್ತನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

'ಹಾಯ್ ಬೆಂಗಳೂರ್ 'ಎಂಬ ಕಪ್ಪು ಸುಂದರಿಯನ್ನು ಕಟ್ಟಿಕೊಂಡು ಕನ್ನಡ ನಿಯತಕಾಲಿಕ(tabloids) ಲೋಕಕ್ಕೆ ಹೊಸ ಭಾಷ್ಯ ಬರೆದ ಬಳ್ಳಾರಿ ಮೂಲದ ರವಿ ಬೆಳಗೆರೆ ಇವತ್ತಿಗೂ ಅದೇ ಉತ್ಸಾಹದಿಂದ ದುಡಿಯುತ್ತಿದ್ದಾರೆ. ಪತ್ರಕರ್ತ, ಸಾಹಿತಿ, ನಟ, ನಿರ್ಮಾಪಕ, ಆರ್ ಜೆ, ನಿರೂಪಕ, ಸಂಗೀತ ಪ್ರೇಮಿಯಾಗಿ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ರವಿ ಅವರನ್ನು ಹೊಗಳುವವರ ಸಂಖ್ಯೆಯಂತೆ ತೆಗೆಳುವವರ, ಅಸಹ್ಯಪಡುವವರ ಸಂಖ್ಯೆಯೂ ಅಧಿಕ.

ಆದರೆ ತಾನು ಬೆಳೆದು ಬಂದ ಕಷ್ಟದ ಹಾದಿಯನ್ನು ಮರೆಯದ ಬೆಳಗೆರೆ ಅವರು ಹುಟ್ಟು ಹಬ್ಬದ ಸಂದರ್ಭ ಹೇಳಿದಿಷ್ಟು:

"ಈ ಐವತ್ತು ವರ್ಷಗಳಲ್ಲಿ ನಾನು ಸಾಕಷ್ಟು ಕಂಡಿದ್ದೇನೆ. ಚಿಕ್ಕಂದಿನಲ್ಲಿ ನನ್ನ ತಾಯಿಯ ಒತ್ತಾಯಕ್ಕೆ ಕಟ್ಟು ಬಿದ್ದು ನಾನು ಓದಿದೆ. ಪತ್ರಿಕೋದ್ಯಮ ಸೇರುವ ಮುನ್ನ ನನಗೆ ಸರಿಯಾದ ಐಡೆಂಟಿಟಿ ಇರಲಿಲ್ಲ. ಈ ಕ್ಷೇತ್ರ ನನಗೆ ಎಲ್ಲವನ್ನು ಕೊಟ್ಟಿದೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಕಡೆ ಹೇಳಿದ್ದೇನೆ. ಕಾರ್ಗಿಲ್ ಯೋಧರ ಜತೆ ಒಡನಾಟ, ವೀಣಾಕ್ಕ ಅವರ ಆತ್ಮಸ್ಥೈರ್ಯದ ಬದುಕು,ಪ್ರಾರ್ಥನಾ ಶಾಲೆ ಆರಂಭ, ಹಾಯ್ ಬೆಂಗಳೂರು ಸೇರಿದಂತೆ ನನ್ನ ಸಮಸ್ತ ಬರಹಗಳನ್ನು ಮೆಚ್ಚಿ, ಹೊಗಳಿ, ಬೈಯ್ದು ನನ್ನನ್ನು ಸಹಿಸಿಕೊಂಡಿರುವ ಜನರ ಅಭಿಮಾನವನ್ನು ನಾನೆಂದು ಮರೆಯುವುದಿಲ್ಲ"

"ನೋಡಿ, ಅದು ಯಾವುದೇ ಕ್ಷೇತ್ರ ಅಗಿರಬಹುದು. ಅಲ್ಲಿ ನೀವು ದುಡ್ಡು ಮಾಡಬೇಕು ಅಂಥಾ ಕಾಲಿಟ್ಟರೆ, ಬರೀ ದುಡ್ಡು ಮಾಡುತ್ತೀರಾ. ಹೆಸರು ಗಳಿಸಬೇಕು ಅಂಥ ಬಂದರೆ ಬರೀ ಹೆಸರು ಗಳಿಸಬಹುದು. ಆದರೆ ನೀವು ಕೆಲಸ ಮಾಡುತ್ತೇನೆ ಎಂದು ಶ್ರದ್ಧೆಯಿಂದ ಸಂಕಲ್ಪ ಮಾಡಿಕೊಂಡರೆ ನಿಮ್ಮ ಬಳಿಗೆ ಹಣ, ಕೀರ್ತಿ ಎಲ್ಲವೂ ಓಡೋಡಿ ಬರುವುದು ಖಂಡಿತಾ"

"ಸುಮಧರವಾದ ಸಂಗೀತ ಕೇಳೋದು ನನಗೆ ತುಂಬಾ ಇಷ್ಟ. ಬಹುಶಃ ಫೋನ್ ಕಾಲ್ ಅಟೆಂಡ್ ಮಾಡೋಕ್ಕಿಂತ ನನ್ನ ಮೊಬೈಲ್ನಲ್ಲಿ ಹಾಡು ಕೇಳೋದೆ ಹೆಚ್ಚು ಅನ್ನಿಸುತ್ತದೆ. ನಾನು ನನ್ನ ಸುತ್ತಮುತ್ತಲಿನ ಪ್ರಕೃತಿನ ತುಂಬಾ ಪ್ರೀತಿಸುತ್ತೀನಿ. ಭಾವುಕ ಜೀವಿ ಕೂಡ. ನನ್ನ ಸಂಸಾರ ಹಾಗೂ ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯೋಕೆ ಆಗಿಲ್ಲ ಅನ್ನೋ ಕೊರಗು ಇದ್ದೇ ಇದೆ. ಮನುಷ್ಯ ಹೊಸ ಹೊಸ ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡುತ್ತಿರಬೇಕು. ಪರಿಪಕ್ವತೆ ಅನ್ನೊದು ಒಂದು ಕಡೆ ಕೂತು ಸಾಧಿಸುವಂತದ್ದಲ್ಲ "

"ನನ್ನ ಯುವ ಮಿತ್ರರಿಗೆ ನಾನು ಹೇಳೋದು ಇಷ್ಟೇ ನಿಮ್ಮ ಭವಿಷ್ಯ ನಿಮ್ಮ ಕೈಲಿದೆ. ನಿಮಗೆ ಮಾರ್ಗದರ್ಶನ ನೀಡೋದಷ್ಟೆ ನಮ್ಮ ಕೆಲಸ. ಆದರೆ ಪ್ರಯತ್ನಪಡದೇ ಯಾವುದೇ ಕೆಲಸ ಸಾಧ್ಯವಿಲ್ಲ. ಸೋಲೋದು ಗೆಲ್ಲೋದು ಬೇರೆ ಮಾತು. ಆದರೆ ಪ್ರಯತ್ನ ಮುಖ್ಯ. ಮರ ಹತ್ತಿ ಹಣ್ಣು ಕಿತ್ತು ತಿಂದಾಗ ಸಿಗೋ ಆನಂದ ಬೇರೆ. ಕೆಳಗಡೆ ನಿಂತು ಕೈಗೆಟಕುತ್ತಿಲ್ಲ. ಅದು ಚೆನ್ನಾಗಿಲ್ಲ ಎಂದು ಹೇಳೋದು ಬೇರೆ."

(ದಟ್ಸ್ ಕನ್ನಡ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more