ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂವಾರ: 108 ಶಿವನ ಅಭೂತಪೂರ್ವ ವರ್ಣ ಚಿತ್ರಗಳು

By Staff
|
Google Oneindia Kannada News

ಗಂವಾರ: 108 ಶಿವನ ಅಭೂತಪೂರ್ವ ವರ್ಣ ಚಿತ್ರಗಳುಗಂವಾರ, ಜೇವರ್ಗಿ, ಫೆ.1: ಶಿವ ಸತ್ರದ ಅಂಗಳದಲ್ಲಿ ಚಿತ್ರಕಲಾ ಪ್ರದರ್ಶಿನವು ಭಾವುಕರನ್ನು ಆಕರ್ಷಿಸಿ ಭಕ್ತಿಯನ್ನು ಉದ್ದೀಪನಗೊಳಿಸುತ್ತಿದೆ.ಈ ಪ್ರದರ್ಶನದಲ್ಲಿ ಆಂಧ್ರ ಪ್ರದೇಶದ ಗೋವುಲ ಕೆನಡಿ , ಪದ್ಮ ಗೋವುಲ ದಂಪತಿಗಳು ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸಲು ಪುರಾಣ ಆಗಮಶಾಸ್ತ್ರದ ಆಧರಿಸಿ ರಚಿಸಿದ 108 ಶಿವನ ವರ್ಣ ಚಿತ್ರಗಳು ಪ್ರದರ್ಶನಗೊಂಡಿವೆ.

ಕ್ಯಾನ್ವಾಸ್‌ಗಳ ಮೇಲೆ ಆಯಲ್ ಮತ್ತು ಅಕ್ರಲಿಕ್ ಬಣ್ಣಗಳಲ್ಲಿ ಬರೆದ ಈ ಚಿತ್ರಗಳು ನೂರಾರು ವರ್ಷಗಳ ಕಾಲ ಬಣ್ಣಗೆಡುವುದಿಲ್ಲ ಎಂದು ಕಲಾವಿದ ದಂಪತಿಗಳು ಹೇಳುತ್ತಾರೆ. ಈ ರೀತಿ ಶಿವನ ವಿವಿಧ ಭಂಗಿ-ಭಾವಗಳಲ್ಲಿ ಚಿತ್ರ ಸರಣಿಗಳು ಇದೇ ಮೊದಲಬಾರಿ ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಗೋವುಲ ದಂಪತಿಗಳ ಸ್ವಂತ ಶೈಲಿ , ಕಲ್ಪನೆ,ಸೃಷ್ಟಿಯನ್ನು ಒಳಗೊಂಡ ಈ ಚಿತ್ರಸರಣಿಗಳು ಭಾರತದಲ್ಲಿ ಇದೇ ಮೊದಲ ಬಾರಿ ರಚನೆ ಗೊಂಡಿದೆ ಎನ್ನಲಾಗಿದೆ.

ಈ ಚಿತ್ರ ಸರಣಿಗಳಲ್ಲಿ ಲಿಂಗೋದ್ಭವ,12ಜ್ಯೋತಿರ್ಲಿಂಗ .ಗಜಸಂಹಾರ , ದಕ್ಷಯಜ್ಞ, ಶಿವನ ವಿಶ್ವರೂಪ,ತಾಂಡವ ನಾಟ್ಯ ಮುದ್ರೆಗಳು ಗಂಗವತರಣ ಮೊದಲಾದ ಚಿತ್ರ ರಚನೆಗಳಿವೆ.ಕೆಲವು ಕಲಾಕೃತಿಗಳನ್ನು ಬ್ರಶ್ ಬಳಸದೆ ಉಗುರು ಹಾಗು ಚೂರಿಗಳ ಮೊನೆಗಳಲ್ಲಿ ಬರೆದಿರುವುದು ವಿಶೇಷ. ಸೃಷ್ಟಿ-ಸ್ಥಿತಿ ಲಯಗಳ ಕಾರಣಕರ್ತ ಶಿವ ಎಂಬುದನ್ನು ಪ್ರಚುರಪಡಿಸಲು 20ಕ್ಕೂ ಹೆಚ್ಚು ನವ್ಯ ಕಲೆಯ ರಚನೆಗಳಿವೆ.

ವರ್ಣಮಯ ಶಿವಸತ್ರಕ್ಕೆ ಸಂಗೀತದ ಸಾಥ್ : ಚಿತ್ರಕಲೆಗೆ ಮಾರುಹೋಗದ ವ್ಯಕ್ತಿಗಳು ವಿರಳ, ಸ್ಥಳದಲ್ಲಿಯೇ ಚಿತ್ರ ರಚಿಸುವುದು ನೊಡುವುದರ ಸೊಬಗು ಗಂವ್ಹಾರದ ತಾಂಡವ ವೇದಿಕೆಯಲ್ಲಿ ಗೀತಕುಂಚ ಕಾರ್ಯಕ್ರಮದ ಮೂಲಕ ನೆರದಿದ್ದ ಸಾವಿರಾರು ಪ್ರೇಕ್ಷಕರನ್ನು ಅಚ್ಚರಿಯ ಅಲೆಯಲ್ಲಿ ತೇಲಿಸುವಲ್ಲಿ ಯಶಸ್ವಿಯಾಯಿತು. ಚಿತ್ರದ ಜತೆ ವಾದ್ಯವೃಂದ ಇನ್ನಷ್ಟು ಸೊಬಗನ್ನು ಹೆಚ್ಚಿಸಿತು. ಹಾಡುಗಾರ ಗಣೇಶ ದೇಸಾಯಿಯವರ ಹಾಗೂ ಜೀ ಟಿ.ವಿ ಸರಿಗಮಪ ಖ್ಯಾತಿಯ ಸೌಮ್ಯಶ್ರೀ ಹಾಡಿದ ಗೀತೆಗೆ ತಕ್ಕುದಾದ ಚಿತ್ರಕ್ಕೆ ಬಿ.ಕೆ. ಎಸ್ ವರ್ಮರವರ ಕುಂಚ ಆಡಿ ಪ್ರೇಕ್ಷಕರನ್ನು ತನ್ಮಯಗೊಳಿಸಿತು.

ಚಿತ್ರ: ಅರ್ಪಿತ ಸಿ.ರಾವ್ ಬರಿಗೆ
ಬರಹ: ಲಕ್ಷ್ಮೀನಾರಾಯಣ ಹೆಗಡೆ ಕಲಗಾರು

ಪೂರಕ ಓದಿಗೆ:
ಗಂವ್ಹಾರದಲ್ಲಿ ಈಶ್ವರ ಅಲ್ಲಾ ತೇರೆನಾಮ್ ಭಜನೆ
ಕಲಬುರ್ಗಿಯ ಗಂವ್ಹಾರದಲ್ಲಿ 'ಶಿವಸತ್ರ'ಕ್ಕೆ ಚಾಲನೆ
ಗಂವಾರದ ಶಿವಸತ್ರ ಸರ್ವಧರ್ಮ ಸಮನ್ವಯದ ಚಿತ್ರ ಸಂಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X