ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀಜಾ ಹರಿ ಸಿಂಘ್ ದಿಟ್ಟತನಕ್ಕೆ ಕನ್ನಡಿ ಹಿಡಿದರು ವಿನಯಾ

By Staff
|
Google Oneindia Kannada News


ಬೆಂಗಳೂರು, ನ.22 : ನಿಜ ಜೀವನದಲ್ಲಿ ಐಪಿಎಸ್ ಆಗಿರುವ ಕೇರಳ ಮೂಲದ ಜೀಜಾ ಹರಿ ಸಿಂಘ್ ಅವರು ಜೀ ಕನ್ನಡ ವಾಹಿನಿಯ ಅನುಪಮಾ ಧಾರಾವಾಹಿಯಲ್ಲಿ ಐಪಿಎಸ್ ಪಾತ್ರ ನಿರ್ವಹಿಸುತ್ತಿರುವ ಉಡುಪಿ ಮೂಲದ ನಟಿ ವಿನಯಾ ಪ್ರಸಾದ್‌ರೊಡನೆ ನಗರದ ಶೆಲ್ಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ರೀಲ್ ಮತ್ತು ರಿಯಲ್ ಐಪಿಎಸ್ ಕುರಿತ ಚರ್ಚೆಯನ್ನು ಮಾಡಿದರು.

Jija Harisingh with Vinaya Prasadನಟಿ ವಿನಯಾ ಪ್ರಸಾದ್ ಕೇಳಿದಂತಹ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಜೀಜಾ ಹರಿ ಸಿಂಘ್ ಅವರು, ' ಪೋಲಿಸ್ ವೃತ್ತಿಗೆ ಸೇರುತ್ತೇನೆಂದಾಗ ಕುಟುಂಬದಿಂದ ವಿರೋಧವ್ಯಕ್ತವಾಗಿತ್ತು. ಕೇರಳದ ಖ್ಯಾತ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿಯಾದ ನಾನು ದಿಢೀರನೆ ಐಪಿಎಸ್ ಆಗುವುದಾಗಿ ತಿಳಿಸಿದಾಗ ಶಾಂತಾವಾಗಿದ್ದ ಮನೆಯಲ್ಲಿ ಜ್ವಾಲಾಮುಖಿನೇ ಆಗಿ ಹೋಯಿತು. ಆದರೆ ನನಗೆ ಬೇರೆ ಹೆಣ್ಣುಮಕ್ಕಳು ಮಾಡದ ಒಂದು ಸಾಧನೆ ಮಾಡಲು ಇಚ್ಛೆಯಾಯಿತು. ದೇವರು ಅದಕ್ಕಾಗಿ ನನಗೆ ಕಿಟಕಿಯೊಂದನ್ನು ತೆರೆದಿದ್ದಾರೆ ಅಂದುಕೊಂಡು ಧೈರ್ಯವಾಗಿ ಮುನ್ನುಗ್ಗಿದೆ ಎಂದರು.

ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಾಗ ಕುಟುಂಬ ಜೀವನಕ್ಕೆ ತೊಂದರೆಯಾಗದಂತೆ ಹೇಗೆ ನಿರ್ವಹಿಸಿಕೊಂಡು ಹೋಗುವಿರಿ ಎಂಬ ರೀಲ್ ಪೋಲಿಸ್ ಅಧಿಕಾರಿ ಪ್ರಶ್ನೆಗೆ ಜೀಜಾ ಹಸನ್ಮುಖಿಯಾಗಿಯೇ ತಮ್ಮ ಮಾತು ಮುಂದುವರಿಸಿದರು. ವೃತ್ತಿಯು ಜೀವನದ ಒಂದು ಭಾಗವಾಗಿದೆ. ಅದುವೇ ಜೀವನವಲ್ಲ. 'ನಾನು ವೃತ್ತಿಗೆ ಸೇರ್ಪಡೆಯಾಗಿ ಮೂರೂವರೆ ವರ್ಷದ ತರಬೇತಿ ಪೂರ್ಣಗೊಳಿಸಿ, ವೃತ್ತಿಯಲ್ಲಿ ಸ್ಥಿರತೆ ಕಂಡುಕೊಂಡ ನಂತರವೇ ವೈವಾಹಿಕ ಜೀವನಕ್ಕೆ ಭರ್ತಿ ಪಡೆದೆ. ಹಿಂದಿನ ಕಾಲದಲ್ಲಿ ಐದನೇ ತರಗತಿಗಿಂತಲೂ ಹೆಚ್ಚಿನ ವಿದ್ಯಾಬ್ಯಾಸವನ್ನು ಮಾಡಿದ್ದರೆ ಯಾರೂ ಆ ಹೆಣ್ಣು ಮಗುವನ್ನು ಮದುವೆ ಯಾಗಲು ಮುಂದೆ ಬರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಕಿರಣ್ ಬೇಡಿ ಮದುವೆಯಾದ ನಂತರನೇ ವೃತ್ತಿ ಜೀವನಕ್ಕೆ ಕಾಲಿಟ್ಟರು. ನಾನು ಮೊದಲ ಮಗುವಿನ ತಾಯಿ ಆದ 44ದಿನಗಳಲ್ಲೇ ನನ್ನ ವೃತ್ತಿಗೆ ಹಾಜರಾದೆ. ಆಗ ಈಕೆ ತಾಯಿನೋ, ಈಕೆಗೆ ಹೃದಯವಿದೆಯೋ ಎಂದು ಕೇಳಿದ್ದರು ಕೆಲವರು ಎಂದರು.

ಪೋಲಿಸ್ ಅಂದ್ರೆ ಡೊಳ್ಳು ಹೊಟ್ಟೆ, ಉದ್ದ ಮೀಸೆ ಮತ್ತು ಖಾಕಿ ಡ್ರೆಸ್ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಪೋಲಿಸ್ ಇಲಾಖೆಯಲ್ಲಿಯೂ ಖಾಕಿ ಧರಿಸಿದವರು ತಾವೇ ಖಾಕಿ, ತಮಗೆ ಪ್ರತ್ಯೇಕ ವ್ಯಕ್ತಿತ್ವ ಇದೆ ಎಂಬುದನ್ನೇ ಮರೆತಂತೆ ವರ್ತಿಸುತ್ತಾರೆ ಎಂಬ ಬೇಸರ ವ್ಯಕ್ತ ಪಡಿಸಿದ್ದರು. ಮಡ್ಗಾ ಕಿಂಗ್ಸ್ ಕೆಲವು ಪ್ರದೇಶಗಳನ್ನು ಹಂಚಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ ಎಂದು ಅರಿವಾದಾಗ ಸಾಮಾನ್ಯ ಮಹಿಳೆಯಂತೆ ಸೀರೆಯುಟ್ಟು ಯಾರಿಗೂ ಅನುಮಾನ ಬಾರದಂತೆ ಕೆಲಸ ನಿರ್ವಹಿಸಿದೆ.
ಹೆಣ್ಣಾದ ಮಾತ್ರಕ್ಕೆ ನಾನು ಅಂಜಿಕೆ ಪಡಬೇಕೆಂದಿಲ್ಲ. ಸಾಯಲು ಯಾವಾಗಲೂ ಸಿದ್ದರಿರುತ್ತೇವೆ. ಸಾಯುವ ಮುಂಚೆ ಯಾವುದಾದರೂ ಉತ್ತಮ ಸಾಧನೆ ಮಾಡಿಯೇ ಸಾಯುತ್ತೇನೆ. ಅಷ್ಟಕ್ಕೂ ನಾನು ದೇವರ ಕೆಲಸ ಮಾಡುತ್ತೇನೆ. ಅದ್ದರಿಂದ ಯಾರಾದರೂ ನನಗೆ ಗುಂಡು ಹಾಕಲು ಟ್ರಿಗರನ್ನು ಪ್ರೆಸ್ ಮಾಡಿದ್ರೆ ಅದು ಜಾಮ್ ಆಗುತ್ತೆ. ನನಗೆ ದೇವರ ಕೃಪೆ ಒಂದು ಕವಚದಂತೆ ಬರುತ್ತದೆ ಎಂದರು.

ಕೆಲವು ಮಹಿಳೆಯರು ಸುಮ್ ಸುಮ್ನೆ ತಮ್ಮ ಕುಟುಂಬದವರ ಮೇಲೆ ಆರೋಪ ಮಾಡಿ ನ್ಯಾಯ ಒದಗಿಸಬೇಕೆಂದು ಪೋಲಿಸ್ ಕಾಂಪ್ಲೆಟ್ ಮಾಡ್ತಾರೆ. ಇಂತಹದೊಂದು ದೃಶ್ಯ ಅನುಪಮಾ ಧಾರಾವಾಹಿಯಲ್ಲೂ ಕಾಣಸಿಗುತ್ತದೆ. ನಿಜ ಜೀವನದಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತಿರುತ್ತವೆ.

ಈ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಜೀಜಾ ಇಂತಹ ಪರಿಸ್ಥಿತಿ ಉದ್ಭವಿಸಿದಾಗ ಪೋಲಿಸ್ ಅಧಿಕಾರಿಗಳು ಇತರೆ ಕೇಸ್‌ಗಳಂತೆ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಪೋಲಿಸರು ಸ್ವರಕ್ಷಣೆಗಾಗಿ ಚಾರ್ಚ್ ಶೀಟ್ ಮಾಡುತ್ತಾರೆ ಅಷ್ಟೇ. ಬೆಂಕಿಯನ್ನು ಹಾಗೂ ಅಂತರ್ಜಾಲ ಸೌಲಭ್ಯವನ್ನು ನಾವು ಒಳ್ಳೆಯ ಕೆಲಸಕ್ಕೂ ಅಥವಾ ಕೆಟ್ಟ ಕೆಲಸಕ್ಕೂ ಬಳಸಬಹುದು. ಅಂತೆಯೇ ಕೆಲವರು ಕಾನೂನನ್ನು ದುರ್ಬಳಕೆ ಮಾಡಲು ಹವಣಿಸುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದರು.

ಅಪರಾಧಿಗಳನ್ನು ಶಿಕ್ಷಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಗೆ ಜೀಜಾರವರು 'ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರೆ ಕೌಟುಂಬಿಕ ಅಪರಾಧಗಳು ಕಡಿಮೆಯಾಗುತ್ತವೆ. ಕುಟುಂಬದ ಸದಸ್ಯರು ಎಚ್ಚೆತ್ತುಕೊಳ್ಳುತ್ತಾರೆ ಎಂದರು. ಇಂದಿನ ಯುವತಿಯರು ವರದಕ್ಷಿಣೆ ಕೊಡದೆ ಮದುವೆಯಾಗಲು ಮುಂದೆ ಬಂದರೆ ಯಾವ ವರದಕ್ಷಿಣೆ ಸಂಬಂಧಿ ಪ್ರಕರಣಗಳೂ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಮದುವೆ ವಿಚಾರದಲ್ಲಿ ಹೆಣ್ಣು ಮಕ್ಕಳು ವರದಕ್ಷಿಣೆ ನೀಡುವ ಅವಶ್ಯಕತೆನೇ ಬರಬಾರದು ಎಂಬುದಾಗಿ ವಿನಯಾ ಪ್ರಸಾದ್ ಹೇಳಿದರು.

ಸಿನಿಮಾದಲ್ಲಿ ಯಾವ ಪೋಲಿಸ್ ಅಧಿಕಾರಿ ಪಾತ್ರ ತಮಗೆ ಮೆಚ್ಚುಗೆಯಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಜೀಜಾ, ಓಂ ಪುರಿ ಅರ್ಧ ಸತ್ಯದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಪಾತ್ರ ತಮಗೆ ಮೆಚ್ಚುಗೆಯಾಗಿದೆ ಎಂದರು.

ನಿಜ ಜೀವನದಲ್ಲಿ ಸಮರ್ಥವಾಗಿ ಪೋಲಿಸ್ ಅಧಿಕಾರಿ ಕರ್ತವ್ಯ ನಿರ್ವಹಿಸಿರುವವರಲ್ಲಿ ತಮಗೆ ಜೀಜಾ ಹರಿ ಸಿಂಘ್, ಕಿರಣ್ ಬೇಡಿ ಮತ್ತು ಎಚ್.ಟಿ.ಸಾಂಗ್ಲಿಯಾನ ಮೆಚ್ಚುಗೆಯಾಗಿದ್ದಾರೆ ಎಂದು ನಟಿ ವಿನಯಾ ಪ್ರಸಾದ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X