ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ವಿ.ಜಿಯವರ 119ನೇ ಜನ್ಮದಿನೋತ್ಸವದಂದು ವೆಬ್‌ಸೈಟ್‌ ಬಿಡುಗಡೆ

By ವೀರೇಶ ಹೊಗೆಸೊಪ್ಪಿನವರ್‌
|
Google Oneindia Kannada News

ಹೆಚ್‌.ಎಸ್‌.ಲಕ್ಷ್ಮಿನಾರಾಯಣ ಭಟ್‌ ಹಾಗೂ ಚಂದ್ರಮೌಳಿಯವರು ಡಿ.ವಿ.ಜಿಯವರ ಜೀವನದ ಕೆಲವು ತುಣುಕುಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಮಂಕುತಿಮ್ಮನ ಕಗ್ಗ ಕೇಳದ ಕನ್ನಡಿಗರು ಅತಿ ವಿರಳ, ಪತ್ರಿಕೋದ್ಯಮ, ರಾಜನೀತಿ, ವೇದಾಭ್ಯಾಸ, ಸಾಹಿತ್ಯ ಇನ್ನಿತರ ಹಲವು ಕಾರ್ಯ ಕ್ಷೇತ್ರಗಳಲ್ಲಿ ತಮ್ಮ ಜೀವನದ ಬಹುಪಾಲು ಸವೆಸಿ ಗಳಸಿದಂತಹ ಅನುಭವವನ್ನು ನಾಲ್ಕೇ ಸಾಲಿನ ಕಗ್ಗಗಳಲ್ಲಿ ಉಣಬಡಿಸಿದಂತಹ ಡಾ।।ಡಿ.ವಿ.ಜಿ ಯವರ 119ನೇ ವರ್ಷದ ಜನ್ಮ ದಿನ ಇದೇ ಮಾರ್ಚ್‌ 17ರಂದು ಆಚರಿಸಲಾಗುತ್ತಿದೆ.

ಸದಾ ಎಲೆಮರೆಯ ಕಾಯಿಯಂತಿದ್ದ ಮಹಾನ್‌ ಚೇತನ ಡಿ.ವಿ.ಜಿಯವರನ್ನು ವರ್ಷದಲ್ಲಿ ಒಂದು ದಿನವಾದರು ಸಾರ್ವಜನಿಕವಾಗಿ ನೆನಪಿಸಿ ಕೊಳ್ಳುವುದರಲ್ಲಿ ತಪ್ಪೇನಿಲ್ಲವಲ್ಲ. ಡಿವಿಜಿ ಅವರನ್ನು ನೆನಪಿಸಿಕೊಳ್ಳುವ ಸುಸಂದರ್ಭವನ್ನು ಬೆಂಗಳೂರಿನ ಒಂದು ಯುವ ತಂಡವಾದ ಸಮಾಜ ಸೇವಕರ ಸಮಿತಿ ಏರ್ಪಡಿಸಿದೆ.

A website on literary legends on DVGs 119th birthday

ಹಾಕಿ ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜದ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಕೈಜೋಡಿಸಿರುವ ಬೆಂಗಳೂರಿನ 'ಈ-ಕವಿ'ಯ ಉತ್ಸಾಹಿ ಯುವಕರು, ಸಾಹಿತಿಗಳ ಸಂಪೂರ್ಣ ಮಾಹಿತಿಯನ್ನು ಹೊಂದಿರುವ 'ಕನ್ನಡ ಕವಿ' ಅಂತರ್ಜಾಲ ತಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದರ ಚಾಲನೆಯನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಮಾಡಲಿದ್ದಾರೆ.

ಖ್ಯಾತ ಸಾಹಿತ್ಯ ಪರಿಚಾರಕ ಪ್ರೊ।। ಹೆಚ್‌.ಎಸ್‌.ಲಕ್ಷ್ಮಿನಾರಾಯಣ ಭಟ್‌ರು ಡಿ.ವಿ.ಜಿ ಯವರ ಸಮಗ್ರ ಸಾಹಿತ್ಯದ ಬಗ್ಗೆ ಮಾತನಾಡಲಿದ್ದಾರೆ. ಡಿ.ವಿ.ಜಿಯ ತಮ್ಮನ ಮಗ ಚಂದ್ರಮೌಳಿಯವರು ಡಿ.ವಿ.ಜಿಯವರ ಜೀವನದ ಕೆಲವು ತುಣುಕುಗಳನ್ನು ಹಂಚಿಕೊಳ್ಳಲಿದ್ದಾರೆ. ಡಿ.ವಿ.ಜಿ. ಯವರ ಮೊಮ್ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಡಿ.ವಿ.ಜಿಯವರ ಅಪರೂಪದ ಭಾವಚಿತ್ರಗಳು, ಹಸ್ತಪ್ರತಿ ಮತ್ತು ನಗದೀಕರಿಸದ ಚೆಕ್ಕುಗಳು ಮುಂತಾದವುಗಳನ್ನು ಕೃಷ್ಣಮೂರ್ತಿ, ಕಾವ್ಯಾಲಯ ಪ್ರಕಾಶಕರು, ಮೈಸೂರು ಮತ್ತು ಚಂದ್ರಮೌಳಿಯವರ ಸಹಯೋಗದಲ್ಲಿ ಪ್ರದರ್ಶಿಸಲಾಗುತ್ತಿದೆ.

ಕಾವ್ಯಾಲಯ ಪ್ರಕಾಶಕರ ಪ್ರಾಯೋಜಕತ್ವದಿಂದ ಏರ್ಪಡಿಸಲಾಗಿದ್ದ 'ಮಂಕುತಿಮ್ಮನ ಕಗ್ಗ' ದ ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆಯ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ಡಿ.ವಿ.ಜಿ ವಿರಚಿತ 'ಮಂಕುತಿಮ್ಮನ ಕಗ್ಗ' ಮತ್ತು 'ಅಂತಃಪುರ ಗೀತೆ' ಇವುಗಳ ಗಾಯನವನ್ನು ರತ್ನಮಾಲಾ ಪ್ರಕಾಶ, ಶಂಕರಶಾನುಭಾಗ್‌ ಮತ್ತು ರಾಜು ಅನಂತಸ್ವಾಮಿಯವರು ಹಾಡಲಿದ್ದಾರೆ. ಡಿ.ವಿ.ಜಿ ಯವರ ಸಮಗ್ರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಸರಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ಅಮೂಲ್ಯವಾದ ಸ್ವಲ್ಪ ಸಮಯವನ್ನು ಇದೇ ಮಾರ್ಚ್‌ 17ರಂದು ಬೆಂಗಳೂರಿನ ನಯನ ಸಭಾಂಗಣ, ಕನ್ನಡ ಭವನದಲ್ಲಿ ಸಂಜೆ 5.30 ಕ್ಕೆ ನಡೆಯುವ ಸಮಾರಂಭಕ್ಕೆ ಮೀಸಲಿಡಬೇಕಾಗಿ ಕೋರಿಕೆ.

ಕನ್ನಡ ಕವಿ ಬಳಗ
ರಾಜಕುಮಾರ : 9448171069
ಮಧು : 9886486216
ವೀರೇಶ್‌: 9945840319
ಮಹೇಶ್‌: 9945633021

English summary
Late writer Devana Halli Venkataramanayya Gundappas birthday birthday to be celebrated on March 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X