ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದಮೂಲ : ಕಾಮಿನಿಯೆಂದರೆ ಹೆಣ್ಣು ; ಕಾಮಿಯೆಂದರೆ ಹೆಣ್ಣುಬೆಕ್ಕು!

By Staff
|
Google Oneindia Kannada News

ಪದಕೋಶಗಳು ಗಡಿಯಾರ ಇದ್ದ ಹಾಗೆ. ಯಾವುದೂ ಇಲ್ಲದಿರುವುದಕ್ಕಿಂತ ಕೆಟ್ಟದ್ದಾದರೂ ಒಂದಿದ್ದರೆ ಮೇಲು. ಅತ್ಯಂತ ಒಳ್ಳೆಯದಾಗಿದ್ದರೂ ಅದು ಸತ್ಯ ಹೇಳುತ್ತದೆ ಅಂತ ನಂಬುವಂತಿಲ್ಲ ಅಂತ ಸ್ಯಾಮ್ಯುಯೆಲ್‌ ಜಾನ್ಸನ್‌ ಹೇಳಿದ್ದು ಎಲ್ಲಾ ಭಾಷೆಯ ಪದಕೋಶಗಳಿಗೂ ಒಪ್ಪುತ್ತದೆ. ಯಾವುದೋ ಸಂದರ್ಭಕ್ಕೆ ಹೊಂದುವ ಪದಕ್ಕೆ ಕೇವಲ ಸಾಂದರ್ಭಿಕವಾದ ಅರ್ಥವಷ್ಟೇ ಇದ್ದಿರುವ ಸಾಧ್ಯಕೆ ಉಂಟು. ಆದರೆ ಅದು ಪದಕೋಶದೊಳಗೆ ಬಂದಾಗ ತುಂಬ ವಿಶಾಲವಾದ ಅರ್ಥವನ್ನು ಪಡೆದುಕೊಂಡು ಬಿಡುತ್ತದೆ.

ಉದಾಹರಣೆಗೆ ಸೆಕ್ಸಿ ಎಂಬ ಪದ. ಇವತ್ತು ಕನ್ನಡದ್ದೇ ಎಂಬಷ್ಟು ಸಲೀಸಾಗಿ ಬಳಕೆಯಾಗುತ್ತಿರುವ ಈ ಪದ ಮೊದಲು ಇಂಗ್ಲಿಷಿನಲ್ಲಿ ಕಾಣಿಸಿಕೊಂಡದ್ದು 1928ರಲ್ಲಿ ಅನ್ನುತ್ತಾರೆ. ಮತ್ತೊಬ್ಬ ಪಂಡಿತನ ಪ್ರಕಾರ 1925ರಲ್ಲಿ ಒಬ್ಬ ವ್ಯಕ್ತಿ ಈ ಪದವನ್ನು ಒಂದು ಪತ್ರದಲ್ಲಿ ಬಳಸಿದ್ದನಂತೆ. ಆದರೆ ಬಹಳ ವರುಷಗಳ ಕಾಲ ಅದನ್ನು ಅನೌಪಚಾರಿಕ ಪದ ಎಂದೇ ಇಂಗ್ಲಿಷ್‌ ಡಿಕ್ಷನರಿಗಳು ಭಾವಿಸಿದ್ದವು. ಆಕ್ಸಫರ್ಡ್‌ ಡಿಕ್ಷನರಿಯ ಪ್ರಕಾರ ಅದು 'ಒಳ್ಳೆಯ ಪದ".

Sexy ! Word roots from the shop of PaVemಸೆಕ್ಸಿ ಅಂದರೆ ತೀರಾ ಅಶ್ಲೀಲವೆನ್ನಿಸುವ ಮಟ್ಟದಲ್ಲಿ ಲೈಂಗಿಕವಾಗಿ ಆಕರ್ಷಕವಾಗಿರುವುದು. ಆರಂಭದಲ್ಲಿ ನೀವು ಸೆಕ್ಸಿಯಾಗಿದ್ದೀರಿ ಅಂತ ಯಾರಿಗಾದರೂ ಹೇಳಿದ್ದರೆ ಕಪಾಳಮೋಕ್ಷ ಆಗುತ್ತಿತ್ತು. ಈಗ ಮಹಿಳೆಯರೂ ಉದಾರವಾದಿಗಳಾಗಿದ್ದಾರೆ. ಸೆಕ್ಸಿಯಾಗಿದ್ದೀರಿ ಅಂದರೆ ಥ್ಯಾಂಕ್ಯು ಅನ್ನುವಷ್ಟು ಸಂಭಾವಿತೆಯರೂ ಆಗಿದ್ದಾರೆ!

ಆದರೆ ಸಂಸ್ಕೃತದಲ್ಲಿ ಇದಕ್ಕೆ ಸಂವಾದಿಯಾದ ಪದ ಬಹಳ ಹಿಂದೆಯೇ ಬಳಕೆಯಲ್ಲಿತ್ತು. ಮಂಗರಾಜರ ನಿಘಂಟಿನಲ್ಲಿ ಹೆಣ್ಣನ್ನು ನಿರ್ದೇಶಿಸಲು ಕೊಡುವ ಶಬ್ದಗಳು ಇವು;

ಭಾಮಿನಿ, ನಿತಂಬಿನಿ, ಪ್ರಮದೆ, ಸುಂದರಿ, ಲಲನೆ, ಕಾಮಿನಿ, ಪುರ್ರಂ, ವಧು, ಯುವತಿ, ಕಾಂತೆ, ಯುವತಿ, ಅಂಗನೆ, ರಮಣಿ, ವಾಮೆ, ಸೀಮಂತಿನಿ, ಸ್ತ್ರೀ, ವನಿತೆ, ನಾರಿ, ಯೋಷಿತ್‌, ಮಹಿಳೆ, ಅಬಲೆ, ರಾಮೆ, ವರವರ್ಣಿನಿ- ಎನಲ್ಕೆ ಹೆಂಗೂಸೆನಿಕ್ಕು.

ಇವುಗಳಲ್ಲಿ ಬಹಳಷ್ಟು ಪದಗಳ ಅರ್ಥ ಸೆಕ್ಸಿಗಿಂತ ವಿಶಾಲವಾಗಿದೆ. ಮಹ್‌ ಅಂದರೆ ಉತ್ತೇಜನಗೊಳಿಸುವುದು. ಆದ್ದರಿಂದ ಅವಳು ಮಹಿಳೆ. ರಮಿಸುತ್ತಾಳೆ ಆದ್ದರಿಂದ ರಮಣಿ. ಲಲ್ಲೆಗರೆಯುತ್ತಾಳೆ, ಆದ್ದರಿಂದ ಲಲನೆ. ಕಾಮೋನ್ಮಾದದಿಂದ ಗಂಡಸರನ್ನು ಕಾಮುಕರನ್ನಾಗಿಸುತ್ತಾಳೆ, ಆದ್ದರಿಂದ ಕಾಮಿನಿ. ಆಕೆಯನ್ನೇ ಕಾಮೋನ್ಮಾದ ಇದ್ದರೆ ಆಕೆ ಪ್ರಮದೆ.

ಹಾಗೇ ಆಕೆ ಆತ್ಮಗೌರವ ಇದ್ದವಳಾದರೆ ಮಾನಿನಿ, ಸಿಟ್ಟಾಗುವವಳೂ ಆಗಿದ್ದರೆ ಭಾಮಿನಿ.

(ಪಾವೆಂ ಪದದಂಗಡಿಯಿಂದ ಕಡ ತಂದದ್ದು .
ಸ್ನೇಹಸೇತು : ಓ ಮನಸೇ !)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X