• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ‘ಈ-ಸ್ನೇಹ’ದ ಕಥೆ

By Staff
|
  • ಮಮತಾ ಮೆಹಂದಳೆ, ಬೆಂಗಳೂರು.

rm_mamatha@hotmail.com

An E- Friends storyಇದು ನನ್ನ ಸಹೋದ್ಯೋಗಿ ಭೂಷಣ್‌ ಎಂಬುವರ ಕಥೆ!

ಇಂದಿನ ಬಹುತೇಕ ಯುವಜನರಂತೆ ನಮ್ಮ ಕಥಾನಾಯಕ ಭೂಷಣ್‌ ಅವರಿಗೂ ‘ಚ್ಯಾಟ್‌’ ಮಾಡುವ ಗೀಳು. ಸ್ವಲ್ಪ ‘ಆಡ್‌ ಇನ್‌ ದ ಗ್ರೂಪ್‌’ ಎಂಬ ನನ್ನಂಥವರು ಈ-ಚ್ಯಾಟ್‌ ಬಗ್ಗೆ ಮೂಗು ಮುರಿಯುತ್ತಿದ್ದೆವು. ಆದರೆ ಈ ಟೀಕೆಗೆಲ್ಲ ಭೂಷಣ್‌ ಅವರು ತಲೆ ಕೆಡಿಸಿಕೊಳ್ಳುವ ಆಸಾಮಿಯಲ್ಲ ಬಿಡಿ!

‘ನಮಗೆ ಇರೋ ಫ್ರೆಂಡ್ಸ್‌ ಗೆ ಮೇಯ್ಲ್‌ ಮಾಡೋಕೆ ಪುರುಸೊತ್ತಿಲ್ಲ ; ಇವರು ಚ್ಯಾಟ್‌ ಮಾಡಿ ಹೊಸ ಫ್ರೆಂಡ್ಸ್‌ ನ ಹುಡುಕೋದಂತೆ’ ಎಂದು ನಾವು ಗೆಳೆಯರ ಗುಂಪು ನಗಾಡಿದ್ದು ಅದೆಷ್ಟೋ ಬಾರಿ. ಆದರೆ ನಮ್ಮ ಭೂಷಣ್‌ ಮಾತ್ರ ‘ಯಾರೆ ಕೂಗಾಡಲಿ. ಊರೇ ಹೋರಾಡಲಿ ಚ್ಯಾಟೇ ನಿನಗೆ ಸಾಟಿಯಿಲ್ಲ ’ ಎಂದು ತಮ್ಮ ಪಾಡಿಗೆ ತಾವು ಹರಟೆ ಕೊಚ್ಚುವುದರಲ್ಲಿ ಮಗ್ನರು.

ಭೂಷಣ್‌ ಅವರ ಹರಟಾಯಣ ಹೀಗೆ ಮುಂದುವರಿದಿರುವಾಗ, ಕೊನೆಗೂ ಒಬ್ಬ ‘ಚ್ಯಾಟ್‌ ಸುಂದರಿ’ ಸಿಕ್ಕೇಬಿಟ್ಟಳು. ಆದರೆ, ವಿಧಿ ವಿಪರೀತ ನೋಡಿ ; ಬ್ರಹ್ಮಚಾರಿ ಭೂಷಣ್‌ಗೆ ಸಿಕ್ಕದ್ದು ಕುಮಾರಿಯಲ್ಲ , ಶ್ರೀಮತಿ! ‘ಫ್ರೆಂಡ್‌ ಮಾಡ್ಕೊಳ್ಳೋದು ಮಾಡ್ಕೊಂಡ್ರಿ ಯಾರಾದರು ‘ಮಿಸ್‌’ನ್ನಾದ್ರೂ ಮಾಡ್ಕೋಬಾರದೇನ್ರಿ’ ಎಂದು ಎಲ್ಲರೂ ಛೇಡಿಸಿದೆವು.

ಹೀಗೇ ಮುಂದುವರೆದಿತ್ತು ಈ-ಸ್ನೇಹ, ಈ-ಚಾಟು!

An E- Friendsship storyಬರ್ತ್‌ ಡೆ , ನ್ಯೂ ಇಯರ್‌ ಎಂದು ಸಾಫ್ಟ್‌ ಕಾಪಿಯಲ್ಲಿದ್ದ ಸ್ನೇಹ ಹಾರ್ಡ್‌ ಕಾಪಿಗೆ ಇಳಿದಾಗಲೂ ನಮ್ಮ ತಮಾಷೆ ಕೊನೆಯಾಗಲಿಲ್ಲ . ‘ಹೋಗಿ ಹೋಗಿ ಆಂಟಿಗೆ ಕಾರ್ಡ್‌ ಕಳಿಸ್ತೀರಲ್ರಿ’ ಅಂತ ಎಲ್ಲರೂ ಕಾಲೆಳೆಯುತ್ತಿದ್ದೆವು. ಆದರೆ, ನಮ್ಮ ತಮಾಷೆ ಜಾಸ್ತಿಯಾದಷ್ಟೂ ದಿನಗಳೆದಂತೆ ಭೂಷಣ್‌ರ ಚಾಟ್‌-ಸ್ನೇಹ ಗಟ್ಟಿಯಾಗುತ್ತಿತ್ತು.

‘ಚ್ಯಾಟ್‌ ಸುಂದರಿ’ ಮಸ್ಸೂರಿಯವಳು. ಎರಡು ಮಕ್ಕಳ ತಾಯಿ. ಶ್ರೀಮಂತ ಕುಟುಂಬದವಳು. ಈ ಹೆಣ್ಣುಮಗಳು ಹಾಗೂ ನಮ್ಮ ಭೂಷಣ್‌ ಸ್ನೇಹ ಇಂತಿಪ್ಪ ಪರಿಯಲ್ಲಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ , ಒಂದು ದಿನ ಭೂಷಣ್‌ ಪ್ರವಾಸಕ್ಕೆ ಹೊರಟರು. ಉತ್ತರ ಭಾರತದ ಕೆಲವು ಸ್ಥಳಗಳನ್ನು ವೀಕ್ಷಿಸಿ ಕೊನೆಗೆ ಹೊರಟಿದ್ದು ಮಸ್ಸೂರಿ ಕಡೆಗೆ. ಭೂಷಣ್‌ ಹೊರಡುವಾಗಲೇ, ‘ಹುಷಾರು! ಸೇಫ್‌ ಆಗಿ ವಾಪಸ್ಸು ಬನ್ನಿ ’ ಎಂದು ಎಲ್ಲರೂ ಎಚ್ಚರಿಕೆ ಕೊಟ್ಟೇ ಅವರನ್ನ ಕಳಿಸಿದ್ದೆವು.

ಮಸ್ಸೂರಿ ತಲುಪಿದ ಭೂಷಣ್‌ಗೆ ಅಲ್ಲಿ ಸಿಕ್ಕಿದ್ದು ಆತ್ಮೀಯ ಸ್ವಾಗತ. ಆದರದ ಸತ್ಕಾರ. ಅಂತೂ ಈ-ಸ್ನೇಹ ಮುಖಾಮುಖಿಯಾಗಿತ್ತು.

ಹೀಗೆ ಕೆಲವು ದಿನ ಕಳೆದಿತ್ತು. ಒಂದು ದಿನ ಭೂಷಣ್‌ , ‘ ಎರಡು ಮೂರು ದಿನ ನಾನು ರಜಾ. ನನ್ನ ಫ್ರೆಂಡ್‌ ಮಗ ಬರ್ತಿದಾನೆ. ಅವನಿಗೆ ಕಾಲೇಜ್‌ ಅಡ್ಮಿಷನ್‌ ಆಗಬೇಕು’ ಎಂದಾಗ ನಾವೆಲ್ಲ ಹುಬ್ಬೇರಿಸಿದ್ದೆವು. ಈ-ಚ್ಯಾಟ್‌ ಇಂಥ ಸ್ನೇಹ ಹುಟ್ಟುಹಾಕಿದ್ದು ನಮಗೆಲ್ಲ ನಿಜಕ್ಕೂ ಭಾರಿ ಆಶ್ಚರ್ಯ ತಂದಿತ್ತು. ಕೊನೆಗೂ ಹುಡುಗನ ಅಡ್ಮಿಷನ್‌ ಮುಗಿಸಿಯೆಬಿಟ್ಟರು ಭೂಷಣ್‌. ನಾವೆಲ್ಲ ‘ನೀವೆ ಅವನ ಗಾರ್ಡಿಯನ್ನಾ?’ ಎಂಬ ಹೊಸ ಧಾಟಿ ಶುರು ಮಾಡಿದ್ವಿ.

ಆ ಹುಡುಗನ ಯೋಗಕ್ಷೇಮ ವಿಚಾರಣೆ ಭೂಷಣ್‌ದೇ ಜವಾಬ್ದಾರಿ. ಎಷ್ಟರಮಟ್ಟಿಗೆಂದರೆ ತಂದೆತಾಯಿ ಮಗನಿಗೆ ಪಾರ್ಸೆಲ್‌ ಕಳಿಸಿದರೂ ಇವರ ಮೂಲಕವೆ. ಭೂಷಣ್‌ರ ಬರ್ತ್‌ಡೇಗೆ ಮಸ್ಸೂರಿಯಿಂದ ಬಂದ ಗಿಫ್ಟ್‌ ನೋಡಿ ನಾವೆಲ್ಲ, ‘ನಿಮ್ಮ ಸ್ಟಾರೇ ಬದಲಾಯ್ತಲ್ರೀ’ ಎಂದು ರೇಗಿಸಿದ್ವಿ. ಆ ರೇಗಿಸುವಿಕೆಯಲ್ಲಿ ತುಸು ಅಸೂಯೆಯೂ ಇತ್ತಾ ?

ಈ-ಸ್ನೇಹ ಇನ್ನೂ ನಡೆದೇ ಇದೆ.

‘ಹೇಗಿದಾರ್ರೀ ನಿಮ್ಮ ಆಂಟಿ?’, ‘ಹೇಗಿದಾನ್ರೀ ನಿಮ್ಮ ಮಗ?’ ಎಂದು ನಾವು ಕಾಲೆಳೆಯೋದೂ ಹಾಗೇ ಇದೆ. ಭೂಷಣ್‌ ಎಲ್ಲದಕ್ಕೂ ಸುಮ್ಮನೆ ನಕ್ಕು ಪ್ರತಿಕ್ರಿಯಿಸುತ್ತಾರೆ.

ಬಹಳ ವಿಚಿತ್ರ ಅನ್ನಿಸೊಲ್ವೆ ಈ-ಸ್ನೇಹ! ಆಗಾಗ ಅನ್ನಿಸುವುದುಂಟು, ಈ ಭೂಷಣ್‌ ಹಾಗೂ ಮಸ್ಸೂರಿ ಸುಂದರಿ ನಡುವಿನ ‘ಈ-ಸ್ನೇಹ ’ದಲ್ಲಿ ಪರೋಕ್ಷವಾಗಿ ನಾವೂ ಭಾಗಿಯೇನೋ ಎಂದು!

ಆ ಸ್ನೇಹ, ಅಲ್ಲಲ್ಲ ... ಈ ಸ್ನೇಹ ಗಟ್ಟಿಯಾಗಿರಲಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more