• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರು ದಾರಿ ತೋರಿದರೆ ರಾಜಕೀಯಕ್ಕೆ : ಸಾಂಗ್ಲಿಯಾನ

By Staff
|

ರೋಚಕತೆಗೆ, ಸಿನಿಮಾ ಸ್ಫೂರ್ತಿಗೆ ಕಾರಣರಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಎಚ್‌.ಟಿ.ಸಾಂಗ್ಲಿಯಾನ ಜೂನ್‌ 30ರಂದು ನಿವೃತ್ತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವಿಶೇಷ ಸಂದರ್ಶನ.

*ಪಿ. ತ್ಯಾಗರಾಜ್‌

ಬೆಂಗಳೂರು : ದೇವರು ದಾರಿ ತೋರಿದರೆ ರಾಜಕೀಯ ಪ್ರವೇಶಿಸುವೆ ಎಂದು ಹಿರಿಯ ಐಪಿಎಸ್‌ ಅಧಿಕಾರಿ ಎಚ್‌.ಟಿ. ಸಾಂಗ್ಲಿಯಾನ ತಿಳಿಸಿದ್ದಾರೆ.

ಜೂನ್‌ 30ರಂದು ಸೇವೆಯಿಂದ ನಿವೃತ್ತರಾಗುತ್ತಿರುವ ಬಂದೀಖಾನೆ ಡಿಜಿಪಿ ಸಾಂಗ್ಲಿಯಾನ, ಇನ್ನೂ ಪಕ್ಷ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ . ದೇವರು ದಾರಿ ತೋರಿದ ಹಾಗೆ ನಡೆಯುವೆ ಎಂದು ವಿಜಯ ಕರ್ನಾಟಕಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಪೊಲೀಸ್‌ ಇಲಾಖೆಯಲ್ಲಿ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸಾಂಗ್ಲಿಯಾನ ವೃತ್ತಿ ಬದುಕನ್ನು ಕರ್ನಾಟಕದಲ್ಲಿ ಕಳೆದದ್ದು ಹೆಚ್ಚು . ಅತ್ಯಂತ ವರ್ಣ ರಂಜಿತ, ಸಾಹಸ ವ್ಯಕ್ತಿತ್ವದ ಮೂಲಕ ರಾಜ್ಯದ ಮನೆ ಮಾತಾಗಿರುವ ಸಾಂಗ್ಲಿಯಾನ ಸಂದರ್ಶನದ ಸಂಕ್ಷಿಪ್ತ ಪಾಠ ಹೀಗಿದೆ :

‘‘ 1968 ರಲ್ಲಿ ಐಪಿಎಸ್‌ ಪಾಸಾದಾಗ ಕರ್ನಾಟಕದಲ್ಲಿ ಹುದ್ದೆ ನೀಡಲಾಯಿತು. ಹುಟ್ಟೂರು ಮಿಜೋರಾಂ ಬಿಟ್ಟು ದೂರದ ಕರ್ನಾಟಕದಲ್ಲಿ ಕೆಲಸ ಮಾಡಲು ಮೊದಲಿಗೆ ಸ್ವಲ್ಪ ಬೇಜಾರಾಯಿತು. ಆದರೆ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ನಾನು ಎಣಿಸಿದ್ದು ತಪ್ಪು ಎಂದು ಗೊತ್ತಾಯಿತು. ಇಲ್ಲಿನ ಜನ, ಪರಿಸರ ಹುಟ್ಟೂರಿಗಿಂತಲೂ ಹೆಚ್ಚು ಪ್ರಿಯವಾಯಿತು. ನನ್ನ ವೃತ್ತಿ ಬದುಕಿನ ಕೆಲವು ವರ್ಷಗಳನ್ನು ಬಿಟ್ಟರೆ ಹೆಚ್ಚು ಅವಧಿಯನ್ನು ಕನ್ನಡ ನಾಡಿನಲ್ಲೇ ಕಳೆದಿದ್ದೇನೆ. ಕನ್ನಡಿಗರು ಔದಾರ್ಯಕ್ಕೆ ಹೆಸರಾದವರು. ಕರ್ನಾಟಕ ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಸೇವೆಯಿಂದ ನಿವೃತ್ತಿಯಾದ ನಂತರವೂ ಇಲ್ಲೇ ಉಳಿಯುತ್ತೇನೆ. ಕೊನೆಯ ತನಕ ಇಲ್ಲೇ ಬದುಕುತ್ತೇನೆ.

ನಾನು ಮಿಜೋರಾಂಗೆ ವಾಪಸ್ಸು ಹೋಗಿಬಿಡುತ್ತೇನೆ. ಅಲ್ಲಿ ಕಾಂಗ್ರೆಸ್‌ ಸೇರುತ್ತೇನೆ. ಪಕ್ಷದ ವರಿಷ್ಠರ ಜತೆ ಈಗಾಗಲೇ ಮಾತನಾಡಿದ್ದೇನೆ. ಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದೆಲ್ಲವೂ ಕೇವಲ ವದಂತಿ. ನಾನು ಕರ್ನಾಟಕದಲ್ಲೇ ಇರುತ್ತೇನೆ. ದೇವರು ದಾರಿ ತೋರಿದರೆ ಇಲ್ಲೆ ಸಾರ್ವಜನಿಕ ಜೀವನ ಆರಂಭಿಸುವೆ. ನನ್ನದೇನಿಲ್ಲ . ಎಲ್ಲ ಆ ದೇವರದೇ.

ನಾನು ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ವೀರಪ್ಪ ಮೊಯ್ಲಿ ಹೆಚ್ಚು ಪ್ರೋತ್ಸಾಹ ನೀಡಿದರು. ಹೆಗಡೆ ಅವಧಿಯಲ್ಲಿ ಆರ್ಥಿಕ ಅಪರಾಧಗಳ ಡಿಐಜಿಯಾಗಿದ್ದ ನಾನು ದಾಖಲೆ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳನ್ನು ಬೇಧಿಸಿದೆ. ನಂತರ ಕೇಂದ್ರಕ್ಕೆ ಎರವಲು ಸೇವೆ ಮೇಲೆ ಹೋಗಿದ್ದು, 1993ರಲ್ಲಿ ವಾಪಸು ಬಂದಾಗ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದರು. ನಾನು ಇಲ್ಲಿಗೆ ಬಂದುದಕ್ಕೆ ಬಹಳ ಸಂತಸಪಟ್ಟರು. ನನ್ನ ಬೆನ್ನು ತಟ್ಟಿ ಕೆಲಸದಲ್ಲಿ ಹುರಿದುಂಬಿಸಿದರು. ನಾನಾಗ ಬೆಂಗಳೂರಿನ ವಿಶೇಷ ಪೊಲೀಸ್‌ ಕಮೀಷನರ್‌ ಕೂಡ ಆಗಿದ್ದೆ. ಮೊಯ್ಲಿ ಅವರು ನನಗೆ ನೀಡಿದ ಪ್ರೋತ್ಸಾಹ ಅದೇ ಅವಧಿಯಲ್ಲಿ ಬೆಂಗಳೂರು ಪೊಲೀಸ್‌ ಕಮೀಷನರ್‌ ಆಗಿದ್ದವರಿಗೆ (ಕೋದಂಡರಾಮಯ್ಯ) ನನ್ನ ಮೇಲೆ ಹೊಟ್ಟೆಕಿಚ್ಚು ಹುಟ್ಟಲು ಕಾರಣವಾಯಿತು.

ನಾನು ಸೇವೆ ಸಲ್ಲಿಸಿದ ಅವಧಿಯಲ್ಲಿ ರಾಜಕೀಯ ಪ್ರಭಾವಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಲಿಲ್ಲ . ಬಂದೀಖಾನೆ ಡಿಐಜಿಯಾಗಿದ್ದಾಗ ಸಂಬಂಧಪಟ್ಟ ಸಚಿವರು (ಡಿ.ಕೆ.ಶಿವಕುಮಾರ್‌) ಇಂತಹವರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಸೂಚಿಸಿದರು. ಆದರೆ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ .

ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯುವುದು ಅಸಾಧ್ಯದ ಮಾತು. ಎ.ಕೆ.47 ಜತೆ ಠಾಕುಠೀಕಾಗಿ ಆಗಮಿಸಿದ ಗಡಿ ಭದ್ರತಾ ಪಡೆ, ಅರೆ ಸೇನಾಪಡೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸು ಹೋಗಿದ್ದಾರೆ.

ಅನೇಕ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜತೆ ಸಂಬಂಧ ಹೊಂದಿರುವ ಆತನನ್ನು ಹಿಡಿಯುವ ಪ್ರಯತ್ನ ವ್ಯರ್ಥ ಕಸರತ್ತು . ಸುಮ್ಮನೆ ಹಣ ದಂಡ. ಹಾಗೊಮ್ಮೆ ಅವನು ಸಿಗುವುದಿದ್ದರೆ ರೋಗ ಬಂದು ಮಲಗಿದಾಗಲೋ ಅಥವಾ ಸತ್ತಾಗಲೋ ಮಾತ್ರ.’’

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more