• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಉಳಿವು ಮಹಿಳೆಯಿಂದಷ್ಟೇ ಸಾಧ್ಯ-ಇದಿನಬ್ಬ

By Staff
|

Kamala Hampanaಬೆಂಗಳೂರು : ಕನ್ನಡ ಭಾಷೆಯ ಮರೆಯಾಗದೆ ಉಳಿಯುವುದಾದರೆ ಅದು ಮಹಿಳೆಯರಿಂದಷ್ಟೇ ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇದಿನಬ್ಬ ಅಭಿಪ್ರಾಯಪಟ್ಟಿದ್ದಾರೆ.

ಮಮ್ಮಿ , ಡ್ಯಾಡಿ, ಆಂಟಿ, ಅಂಕಲ್‌ ಇತ್ಯಾದಿ ಪದಗಳು ಬ್ರಿಟೀಷರ ಬಳವಳಿಗಳಾಗಿವೆ. ಈ ಪರಿಸ್ಥಿತಿಯನ್ನು ಬದಲಿಸಿ ಕನ್ನಡವನ್ನು ನೆಲೆಗೊಳಿಸುವ ಶಕ್ತಿ ನಮ್ಮ ಹೆಣ್ಣು ಮಕ್ಕಳಿಗಿದೆ ಎಂದು ಇದಿನಬ್ಬ ಹೇಳಿದರು. ಕರ್ನಾಟಕ ಲೇಖಕಿಯರ ಸಂಘ ಏರ್ಪಡಿಸಿದ್ದ ಅನುಪಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (ಮೇ 25, ಭಾನುವಾರ) ಇದಿನಬ್ಬ ಮಾತನಾಡುತ್ತಿದ್ದರು.

ನೂತನ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಬಾರದೆಂದು ಸರ್ಕಾರಕ್ಕೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದೇನೆ. ಆಂಗ್ಲ ಮಾಧ್ಯಮ ಶಾಲೆಗಳು ಶ್ರೀಮಂತರ ಶಾಲೆಗಳಾಗಿವೆ ಎಂದು ಇದಿನಬ್ಬ ಟೀಕಿಸಿದರು. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಎಂದು ಸ್ಪಷ್ಟಪಡಿಸಿದ ಅವರು- ಕನ್ನಡ ನಮ್ಮ ಅನ್ನ , ಉಳಿದವು ವ್ಯಂಜನ ಎಂದು ಬಣ್ಣಿಸಿದರು.

ಕಮಲಾ ಹಂಪಾನಾಗೆ ಅನುಪಮಾ ಪ್ರಶಸ್ತಿ ಪ್ರದಾನ

ಹಿರಿಯ ಲೇಖಕಿ ಕಮಲಾ ಹಂಪಾನಾ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಎಚ್‌.ಎಸ್‌. ಪಾರ್ವತಿ ಅವರು ಅನುಪಮಾ ಪ್ರಶಸ್ತಿ ಪ್ರದಾನ ಮಾಡಿದರು.

ಕಮಲಾ ಹಂಪನಾ ಅವರನ್ನು ಅಭಿನಂದಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್‌- ಕಮಲಾ ಹಂಪಾನಾ ಕನ್ನಡದ ಶ್ರೇಷ್ಠ ಲೇಖಕಿಯರಲ್ಲೊಬ್ಬರು ಎಂದರು. ಶಾಸ್ತ್ರ ಪಾಂಡಿತ್ಯ ಹಾಗೂ ತಲಸ್ಪರ್ಶಿ ಅಧ್ಯಯನದಲ್ಲಿ ಪಳಗಿದ ವಿರಳಾತಿವಿರಳರಲ್ಲಿ ಕಮಲಾ ಒಬ್ಬರು. ಹಳಗನ್ನಡ ಹಾಗೂ ಜೈನ ಸಾಹಿತ್ಯ ಅಧ್ಯಯನದಲ್ಲಿ ಕಮಲಾ ಪ್ರಬುದ್ಧತೆಯನ್ನು ಸಾಧಿಸಿದ್ದಾರೆ ಎಂದು ಮಲ್ಲೇಪುರಂ ಬಣ್ಣಿಸಿದರು.

ಪ್ರಶಸ್ತಿ ಹಾಗೂ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದ ಕಮಲಾ ಹಂಪಾನಾ, ಸಾಂಸ್ಕೃತಿಕ ಲೋಕದಲ್ಲಿನ ಗುಂಪುಗಾರಿಕೆಗೆ ವಿಷಾದಿಸಿದರು. ಗುಂಪುಗಾರಿಕೆ, ವೈಷಮ್ಯಗಳು ಸಾರಸ್ವತ ಲೋಕದಲ್ಲಿ ಎದ್ದು ಕಾಣುತ್ತಿದ್ದು ಪ್ರಚಾರಪ್ರಿಯರು ಅವಕಾಶಗಳನ್ನು ಕಬಳಿಸುತ್ತಿದ್ದಾರೆ ಎಂದರು.

ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ನಮಗೆ ಬೇಕಾದುದು ಪೆನ್ನೇ ಹೊರತು- ತ್ರಿಶೂಲ ಅಥವಾ ಬಂದೂಕು ಅಲ್ಲ ಎಂದು ಕಮಲಾ ಹಂಪಾನಾ ಹೇಳಿದರು.

ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಲೇಖಕಿಯರೆಲ್ಲ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕಮಲಾ ಹಂಪಾನಾ ಕರೆ ನೀಡಿದರು.

ಪ್ರಾಸ್ತಾವಿಕ ಸ್ವಾಗತ ಭಾಷಣ ಮಾಡಿದ ಲೇಖಕಿಯರ ಸಂಘದ ಅಧ್ಯಕ್ಷೆ ಉಷಾ ಪಿ.ರೈ ಅವರು ಸಂಘದ ಚಟುವಟಿಕೆಗಳನ್ನು ವಿವರಿಸಿದರು. ಪುಸ್ತಕ ಪ್ರಕಟಣೆ, ಕಮ್ಮಟಗಳು, ವಿವಿಧ ದತ್ತಿನಿಧಿ ಬಹುಮಾನಗಳು- ಇತ್ಯಾದಿ ಚಟುವಟಿಕೆಗಳಲ್ಲಿ ಲೇಖಕಿಯರ ಸಂಘ ತೊಡಗಿದೆ. ಇಷ್ಟೊಂದು ಸುಸಂಘಟಿತ ಹಾಗೂ ದೊಡ್ಡ ಸಂಘ ಇಡೀ ದೇಶದಲ್ಲೇ ಇನ್ನೊಂದಿಲ್ಲ ಎಂದು ಅವರು ಬಣ್ಣಿಸಿದರು.

ದಟ್ಸ್‌ಕನ್ನಡದ ರಾಜಲಕ್ಷ್ಮಿಗೆ ಪ್ರಶಸ್ತಿ : ಇದೇ ಸಂದರ್ಭದಲ್ಲಿ ಲೇಖಕಿಯರ ಸಂಘದ ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ದಟ್ಸ್‌ಕನ್ನಡ.ಕಾಂನ ಕೋಡಿಬೆಟ್ಟು ರಾಜಲಕ್ಷ್ಮಿ ಅವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಕಾವ್ಯ ಪ್ರಶಸ್ತಿ ನೀಡಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ , ಹಿರಿಯ ಸಾಹಿತಿಗಳಾದ ಹಂಪಾ ನಾಗರಾಜಯ್ಯ, ಚಿ.ಶ್ರೀನಿವಾಸರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more