ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವೀಂದ್ರ ಕಲಾಕ್ಷೇತ್ರದಲ್ಲಿ ಬಿ.ವಿ.ಕಾರಂತರ ನೆನಕೆ

By Staff
|
Google Oneindia Kannada News

B.V.Karanthರಂಗಕರ್ಮಿ ಬಿ.ವಿ.ಕಾರಂತರ ನೆನೆಯೋಣ ಬನ್ನಿ...
‘ಮಾಯಾ ಮಂಜರಿ’, ‘ಆರ್‌. ನಾಗೇಶ್‌ ನಾಟಕೋತ್ಸವ’, ‘ಹಿರಣ್ಣಯ್ಯ ನಾಟಕೋತ್ಸವ’...ಮೊದಲಾದ ರಂಗೋತ್ಸವಗಳ ಮೂಲಕ ಮೈಲುಗಲ್ಲು ನೆಟ್ಟಿರುವ ‘ಭಾಗವತರು’ ಸಂಸ್ಥೆ ಈಗ ಕಾರಂತರ ಕೆಲಸವನ್ನು ರಂಗಕ್ಕೆ ತರುವ ಸಿದ್ಧತೆಯಲ್ಲಿ ಮುಳುಗಿದೆ. ಜನವರಿ 27ರಿಂದ 29ನೇ ತಾರೀಕಿನವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಬಿ.ವಿ.ಕಾರಂತರ ನಾಟಕೋತ್ಸವ. ಈ ಉತ್ಸವದ ಶೀರ್ಷಿಕೆ- ‘ರಂಗ ದಾರ್ಶನಿಕ ಕಾರಂತ’.

ಜನವರಿ 27ರಂದು ಸಂಜೆ 6 ಗಂಟೆಗೆ ಕಬೀರ್‌ ಸಮ್ಮಾನ್‌ ಪುರಸ್ಕೃತ ಕವಿ ಡಾ. ಚಂದ್ರಶೇಖರ ಕಂಬಾರ ಉತ್ಸವ ಉದ್ಘಾಟಿಸುವರು. ನಾಟಕ ಅಕಾಡೆಮಿ ಅಧ್ಯಕ್ಷ ಆರ್‌.ನಾಗೇಶ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೇಮಾ ಕಾರಂತ, ಟಿ.ಎಸ್‌.ನಾಗಾಭರಣ ಕೂಡ ಸಮಾರಂಭದಲ್ಲಿ ಭಾಗವಹಿಸುವರು. ಕಾರಂತರ ಯಶಸ್ವಿ ನಾಟಕ ‘ಗೋಕುಲ ನಿರ್ಗಮನ’ದ ಹಾಡುಗಳನ್ನು ಕೇಳುವ ಅವಕಾಶವೂ ಅಭಿಮಾನಿಗಳಿಗೆ ದಕ್ಕಲಿದೆ.

ಉದ್ಘಾಟನಾ ಸಮಾರಂಭದ ನಂತರ ‘ಕಾರಂತ ಮತ್ತು ರಂಗ ಪ್ರಯೋಗ’ ವಿಷಯವಾಗಿ ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ, ಯಶಸ್ವಿ ಮಟ್ಟುಗಾರ ಸಿ.ಅಶ್ವಥ್‌, ಸಿ.ಬಸವಲಿಂಗಯ್ಯ, ನಾರಾಯಣ ರಾಯಚೂರು ತಮ್ಮ ತಮ್ಮ ಅನುಭವ- ಅನಿಸಿಕೆ ಹಂಚಿಕೊಳ್ಳುವ ಈ ಸಂಕಿರಣದ ಅಧ್ಯಕ್ಷತೆಯನ್ನು ಡಾ. ಕೆ.ಮರುಳ ಸಿದ್ಧಪ್ಪ ವಹಿಸುವರು.

ಜನವರಿ 28ನೇ ತಾರೀಕು ಕಾರಂತರ ಒಡನಾಡಿಗಳ ಅನುಭವದ ಮಾತು ಕೇಳುವ ಅವಕಾಶ. ಕಾರಂತರ ಜೊತೆ ಅನೇಕ ಗಳಿಗೆಗಳನ್ನು ಕಳೆದಿರುವ ಎಂ.ವಿ.ನಾರಾಯಣ ರಾವ್‌ ಹಾಗೂ ಯು.ಪ್ರಭಾಕರ ರಾವ್‌ ಮಾತಾಡಲಿದ್ದಾರೆ. ಸಂಕಿರಣದ ನಂತರ ‘ಬೆನಕ’ ಕಲಾವಿದರು ಜಡ ಭರತರ ‘ಸತ್ತವರ ನೆರಳು’ ನಾಟಕ ಪ್ರದರ್ಶಿಸಲಿದ್ದಾರೆ. ಹಳೆಯ ಕಲಾವಿದರೇ ಈ ಬಾರಿಯೂ ರಂಗಕ್ಕೆ ಬರುತ್ತಿರುವುದು ವಿಶೇಷ.

ಜನವರಿ 29ರಂದು ಡಿ.ಕೆ.ಚೌಟ ಹಾಗೂ ಶ್ರೀನಿವಾಸ್‌ ಜಿ. ಕಪ್ಪಣ್ಣ ಕಾರಂತರ ಕುರಿತು ಮಾತಾಡುವರು. ನಂತರ ಬೆನಕ ತಂಡದಿಂದ ‘ಹಯವದನ’ ನಾಟಕ ಪ್ರದರ್ಶನವಿದೆ.

ಟಿಕೇಟು ಹಾಗೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ನಂಬರುಗಳಿಗೆ ಫೋನಾಯಿಸಿ- 080- 6771318, 6525033.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X