• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಸಾಹಿತ್ಯ.ಕಾಂಗೆ ಬೆಂಬಲಿಗರಿಂದ ಒಂದು ವರ್ಷ ಜೀವದಾನ

By Staff
|
 • ದಟ್ಸ್‌ಕನ್ನಡ ವರದಿ

ತೃತೀಯ ವಿಶ್ವದ ಸಾಹಿತ್ಯವನ್ನು ಕೊಡುವ ಮಹತ್ವಾಕಾಂಕ್ಷೆಯ ವೆಬ್‌ಸೈಟಾದ ಕನ್ನಡ ಸಾಹಿತ್ಯ ಡಾಟ್‌ ಕಾಂ ಜೀವನ್ಮರಣದ ಪ್ರಶ್ನೆಯಿಂದ ಹೊರ ಬಂದಿದೆ. ಈ ಡಾಟ್‌ಕಾಂ ಮುಚ್ಚಿಹೋಗುವ ಆತಂಕದ ಗೆರೆ ವ್ಯವಸ್ಥಾಪಕ ಶೇಖರ್‌ಪೂರ್ಣ ಅವರ ಮುಖದಿಂದ ಈಗ ಮಾಯ.

ಈವರೆಗೆ ಕನ್ನಡಸಾಹಿತ್ಯ ಡಾಟ್‌ ಕಾಂ ಅಂದೊಡನೆ ಶೇಖರ್‌ಪೂರ್ಣ ಅವರ ಹೆಸರೇ ಕೇಳಿಬರುತ್ತಿತ್ತು. ಆದರೀಗ ಶೇಖರ್‌ ಅವರ ಈ ಕೂಸನ್ನು ಬೆಳೆಸುವ ಹೊಣೆಯನ್ನು ಬೆಂಬಲಿಗರ ಬಳಗ ಹೊತ್ತುಕೊಂಡಿದೆ. ಕನ್ನಡ ಸಾಹಿತ್ಯ ಡಾಟ್‌ ಕಾಂ ಮೂಲಕ ಕನ್ನಡ ಭಾಷೆ, ಬರಹ, ಸಂಸ್ಕೃತಿಯ ಸೊಗಡನ್ನು ಆಸಕ್ತರಿಗೆ ತಲುಪಿಸುವ ಉಮೇದಿಯ ಜೊತೆಗೆ ಕನ್ನಡ ಸಂಸ್ಕೃತಿಗೆ ಮಾಹಿತಿ ತಂತ್ರಜ್ಞಾನದ ಸಕಲ ಸವಲತ್ತುಗಳನ್ನು ಬೆಸೆಯುವ ಕನಸು ಈ ಬಳಗದ್ದು.

Kannadasaahithya.com logoಯಾಹೂ.ಕಾಂನಲ್ಲಿ ಮಾರ್ಚ್‌ 26, 2002ರಂದು ಹುಟ್ಟಿದ ಕನ್ನಡಸಾಹಿತ್ಯ ‘ಗ್ರೂಪ್‌’ ಈವರೆಗೆ ಸಾಹಿತ್ಯವನ್ನು ಚರ್ಚಿಸುತ್ತ, ವಾದ- ವಿವಾದ ನಡೆಸುತ್ತ, ಸಾತ್ವಿಕ ರೀತಿಯಲ್ಲಿ ಜಗಳ ಆಡುತ್ತ ಇತ್ತು. ಒಟ್ಟಿನಲ್ಲಿ ಸಾಹಿತ್ಯಾಸಕ್ತರ ಪಟ್ಟಾಂಗ ಮಾತ್ರ ಇಲ್ಲಿ ನಡೆಯುತ್ತಿತ್ತು.

ಈಗ ಈ ಗುಂಪು ಕನ್ನಡಸಾಹಿತ್ಯ.ಕಾಂ ಅನ್ನು ಉಳಿಸಿ, ಬೆಳೆಸುವ ಜರೂರತ್ತಿಗೆ ಬಿದ್ದಿದೆ. ಅದರ ಫಲವಾಗಿ, ಕಳೆದ 40 ದಿನಗಳಲ್ಲಿ ಕನ್ನಡಸಾಹಿತ್ಯ.ಕಾಂಗೆ 1 ಲಕ್ಷದ 5 ಸಾವಿರ ರುಪಾಯಿ ಹಣದ ಚೆಕ್ಕುಗಳು ಬಳಗದ ಸದಸ್ಯರಿಂದ ದೇಣಿಗೆ ರೂಪದಲ್ಲಿ ಹರಿದು ಬಂದಿದೆ. ಬಂದಿರುವ ಹಣದಲ್ಲಿ ಅಮೆರಿಕನ್ನಡಿಗರದ್ದೇ ಸಿಂಹಪಾಲಾದರೂ, ಬೆಂಗಳೂರು, ಮುಂಬಯಿ, ದೆಹಲಿ ಮೊದಲಾದ ಕಡೆಯಿರುವ ಕನ್ನಡಿಗರೂ ಹಣ ಕಳಿಸಿದ್ದಾರೆ ಎನ್ನುತ್ತಾರೆ ಶೇಖರ್‌ ಪೂರ್ಣ.

ಇಷ್ಟೆಲ್ಲ ಮಾಹಿತಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಶನಿವಾರ (ಆ.23) ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಬಳಗದ ಇ- ಮೇಲ್‌ಗಳನ್ನು ನಿಯಂತ್ರಿಸುವ, ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಅಂಜನ್‌ ಕುಮಾರ್‌, ಬಳಗದ ಸದಸ್ಯರ ಪ್ರತಿನಿಧಿಗಳಾದ- ಭಗವಾನ್‌ ಮಹಾವೀರ್‌ ಜೈನ್‌ ಹಾರ್ಟ್‌ ಸೆಂಟರ್‌ನಲ್ಲಿ ಪಿಆರ್‌ಓ ಕೆಲಸ ಮಾಡುತ್ತಿರುವ ಪ್ರೀತಿ ನಾಗರಾಜ್‌ ಹಾಗೂ ಈಗ ತಾನೆ ಎಂಜಿನಿಯರಿಂಗ್‌ ಪದವಿ ಮುಗಿಸಿರುವ ರೋಹಿತ್‌ ಮತ್ತು ಶೇಖರ್‌ಪೂರ್ಣ ಮಾಧ್ಯಮ ಗೋಷ್ಠಿಯಲ್ಲಿ ಇದ್ದರು.

ಸರಿಯಾಗಿ ಇವತ್ತಿಗೆ 223 ಸದಸ್ಯರನ್ನು ಯಾಹೂ ಗ್ರಾಪ್‌ನ ಕನ್ನಡಸಾಹಿತ್ಯ ಡಾಟ್‌ ಕಾಂ ಬಳಗ ಹೊಂದಿದೆ. ಬೆಂಗಳೂರು, ಮೈಸೂರು, ದೆಹಲಿ, ಭದ್ರಾವತಿ ಬಳಿಯ ಹಳ್ಳಿ, ಅಮೇರಿಕ, ಸಿಂಗಪೂರ್‌, ದಕ್ಷಿಣ ಆಫ್ರಿಕ ಮೊದಲಾದ ಕಡೆ ನೆಲೆಸಿರುವ ಕನ್ನಡಿಗರು ಸದಸ್ಯರಾಗಿದ್ದಾರೆ. ಈ ಪೈಕಿ ಕೆಲವರು ವೆಬ್‌ಸೈಟಿಗೆ ತಿಂಗಳಿಗಿಷ್ಟು ಅಂತ ಹಣ ಕೊಡುವುದೂ ಉಂಟು.

ಈ ಬಳಗ ಏನೇನು ಮಾಡುತ್ತದೆ?

 • ಲೇಖನ/ಸಾಹಿತ್ಯ ಕೃತಿಗಳನ್ನು ಬರಹದಲ್ಲಿ ಕೀಲಿಸುವ ಕೆಲಸ.
 • ಕೇವಲ ಹಣಕಾಸಿನ ನೆರವು ಕೊಡುವುದಷ್ಟೇ ಅಲ್ಲದೆ ತಾಂತ್ರಿಕ ತಂಡವೊಂದನ್ನು ಕಟ್ಟುವುದು.
 • ಕನ್ನಡ ಭಾಷೆಗೆ ತಂತ್ರಜ್ಞಾನ ಬೆಸೆಯುವ ಹಾದಿಯಲ್ಲಿ ಟೂಲ್ಸ್‌ ಮತ್ತು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಪಡಿಸುವುದು.
 • ಪ್ರತಿ ತಿಂಗಳ ಮೊದಲ ಭಾನುವಾರ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಸಭೆ ಸೇರಿ ಕನ್ನಡ ಸಾಹಿತ್ಯ ಡಾಟ್‌ ಕಾಂ ಬೆಳೆಯುತ್ತಿರುವ ಹಾದಿ, ಬೆಳೆಯಬೇಕಾದ ದಾರಿಗಳನ್ನು ಕುರಿತು ಚರ್ಚಿಸುವುದು.

ಮುಂದೆ ಹೆಜ್ಜೆ ಹೇಗೆ ಇಡುತ್ತೀರಿ ಅಂತ ಶೇಖರ್‌ಪೂರ್ಣ ಅವರ ಮುಂದಿಟ್ಟ ಪ್ರಶ್ನೆಗೆ, ಅವರು ಕೊಟ್ಟ ಉತ್ತರ-

 • ಸಂಪಾದಕೀಯ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ.
 • ಕನ್ನಡಸಾಹಿತ್ಯ ಡಾಟ್‌ ಕಾಂನ ವಿನ್ಯಾಸ ಕೂಡ ಹಾಗೆಯೇ ಇರುತ್ತದೆ.
 • ತಿಂಗಳಿಗೆ 300 ಪುಟಗಳಷ್ಟು ಬರವಣಿಗೆಯನ್ನು ವೆಬ್‌ ಜಾಲಕ್ಕೆ ತರುತ್ತಿದ್ದೆವು. ಕಳೆದ ನಾಲ್ಕು ತಿಂಗಳಿಂದ ಅದು ನಿಂತು ಹೋಗಿತ್ತು. ಈಗ ಮತ್ತೆ ಅದೇ ಕೆಲಸ ಅನೂಚಾನವಾಗಿ ಮುಂದುವರೆಯುತ್ತದೆ.
 • ಲೇಖಕರಿಗೆ ಸಂಭಾವನೆ ಕೊಡುವ ಬಗೆಗೂ ಚಿಂತಿಸುತ್ತಿದ್ದೇವೆ. ಇನ್ನಷ್ಟು ಹಣ ಸಂಗ್ರಹವಾದಲ್ಲಿ ಅದನ್ನು ಆಚರಣೆಗೆ ತರುತ್ತೇವೆ.
 • ಇನ್ನೊಂದು ವರ್ಷವಂತೂ ವೆಬ್‌ಸೈಟಿನ ನಿರ್ವಹಣೆಗೆ ಯೋಚನೆಯಿಲ್ಲ.

ಕನ್ನಡ ಸಾಹಿತ್ಯದ ಚಲನ ವಲನಗಳನ್ನು, ಸ್ಥಿತ್ಯಂತರಗಳನ್ನು ಮತ್ತು ಪಲ್ಲಟಗಳನ್ನು ತಿಳಿಯಬಯಸುವ ಕನ್ನಡ ಸಾಹಿತ್ಯಾಸಕ್ತರು ಈ ಅಂತರ್ಜಾಲ ಪತ್ರಿಕೆಯಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದು. ಭೇಟಿ ಕೊಡಿ- http://www.kannadasaahithya.com

ಪೂರಕ ಓದಿಗೆ-

ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ‘ಸಮಕ್ಷಮ’

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X