ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಕವಿ ಕುವೆಂಪು ನೆನಪಲ್ಲಿ ವಿಶ್ವ ಮಾನವ ವರ್ಷ

By Staff
|
Google Oneindia Kannada News

Kuvempuಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಾಬ್ದಿ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರಕಾರ ನಿಶ್ಚಯಿಸಿದ್ದು - 2004 ನೇ ವರ್ಷವನ್ನು ವಿಶ್ವಮಾನವ ವರ್ಷ ಎಂದು ಘೋಷಿಸಲಿದೆ.

ರಸಕವಿ ಕುವೆಂಪು ಅವರ ಜನ್ಮಶತಾಬ್ದಿ ಅಂಗವಾಗಿ ಬರುವ ಡಿಸೆಂಬರ್‌ 29ರಿಂದ ಶತಾಬ್ದಿ ವರ್ಷಾಚರಣೆ ಪ್ರಾರಂಭವಾಗಲಿದ್ದು , ಈ ವರ್ಷಾಚರಣೆ 2004ನೇ ಇಸವಿಯ ವರ್ಷಪೂರ್ತಿ ನಡೆಯಲಿದೆ.

  • ಕುವೆಂಪು ಅವರ ಸ್ಮರಣಾರ್ಥ ಅಂಚೆ ಚೀಟಿ ಹೊರ ತರುವುದು,
  • ಬೆಂಗಳೂರು ನಗರ ಅಥವಾ ರಾಜ್ಯದ ಯಾವ ಕಡೆಯಲ್ಲಾದರೂ ಕುವೆಂಪು ಶತಮಾನೋತ್ಸವ ಭವನ ನಿರ್ಮಿಸುವುದು,
  • ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಹಿತ್ಯಕ್ಕೆ ಕುವೆಂಪು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು,
  • ಕುವೆಂಪು ಅವರ ಸಮಗ್ರ ಸಾಹಿತ್ಯ ಕೃತಿಯನ್ನು ಓದುಗರಿಗೆ ಸಬ್ಸಿಡಿ ರೂಪದಲ್ಲಿ ಒದಗಿಸುವುದು,
  • ಕುವೆಂಪು ಸಾಹಿತ್ಯವನ್ನು ಇತರ ಭಾಷೆಗೆ ಅನುವಾದಿಸುವುದು,
  • ಕುವೆಂಪು ಕುರಿತ ಸಾಕ್ಷ್ಯ ಚಿತ್ರ ನಿರ್ಮಾಣ-
- ಇವಿಷ್ಟು ಕಾರ್ಯಕ್ರಮಗಳನ್ನು ಕುವೆಂಪು ಅವರ ಜನ್ಮಶತಾಬ್ದಿ ವರ್ಷಾಚರಣೆ ಪ್ರಯುಕ್ತ ಸರಕಾರ ಹಮ್ಮಿಕೊಂಡಿದೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X