ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸೆಮಾಮನ ಒಣ ಕೆಮು ್ಮ!

By Staff
|
Google Oneindia Kannada News
  • ರಾಘವೇಂದ್ರ ಬೆಟ್ಟಕೊಪ್ಪ
    ಕಾನಗೋಡ, ಶಿರಸಿ.

    [email protected]
‘ವೀರಪ್ಪನ್‌ ಮೀಸೆ’ ಎಷ್ಟೊಂದು ಉದ್ದಕೆ ಉಂಟಲ್ಲ ? ಕಪ್ಪಗೆ ಮತ್ತು ದಪ್ಪಗೆ. ವೀರಪ್ಪನ್‌ನಂತೆಯೇ ಮೀಸೆ ಹೊಂದಿದ ಗಣಪ ಮಾಮನ ಮೀಸೆ ಪುರಾಣದ ಬಗ್ಗೆ ಹಿಂದೆಲ್ಲ ತಮಾಷೆ ಮಾಡುತ್ತ ಅವನಿಗೆ ಕೀಟಲೆ ಮಾಡುತ್ತಿದ್ದೆವು. ಆದರೆ ನಿನ್ನೆ ಬೆಳಿಗ್ಗೆ ಚಹಾ ಕುಡಿಯುತ್ತ ಪತ್ರಿಕೆ ಓದುವಾಗ ‘ಮೀಸೆ ಉಳ್ಳವರಿಗೆ ಸಾರ್ಸ್‌ ಭಯವಿಲ್ಲ !’ ಎಂಬ ವರದಿ ಅವನಿಗೆ ಇನ್ನಷ್ಟು ಹುರುಪು ತರಿಸಿದೆ. ಇರುವ ಎರಡೇ ಬೆಳ್ಳಿ ಕೂದಲನ್ನು ಹೆಕ್ಕೆಕ್ಕಿ ಕತ್ತರಿಸಿದ ‘ಮೀಸೆಮಾಮ’ ನಮ್ಮನ್ನೆಲ್ಲ ಕರೆದು, ಮೀಸೆ ಬಗ್ಗೆ ಹೀಯಾಳಿಸಬೇಡಿ ಅಂದರೂ ಕೇಳ್ತಿರಲಿಲ್ಲ,ಈಗ ನೋಡಿ! ಎಂದು ದಬಾಯಿಸಿದ.

ಅಲ್ಲಾ ಮಾಮ, ಮೀಸೆಯಿಂದ ಭಾರೀ ತೂಕದ ಕಲ್ಲು ಎತ್ತಿದವರಿದ್ದಾರೆ. ಆಗಲೂ ನೀನು ಮೀಸೆಯ ಬಗ್ಗೆ ಹೊಗಳಿದ್ದೆ. ಈಗಲೂ ಹೊಗಳುತ್ತಿದ್ದೀಯಾ. ಆದರೆ, ಮೂಗಿನ ಹೊಳ್ಳೆ ರೋಮ ಹಾಗೂ ಮೀಸೆಯನ್ನ ಕತ್ತರಿಸದೆ ಹಾಗೇ ಬಿಟ್ಟರೆ ಕಾಡುಮಂದಿ ಆಗೋದಿಲ್ಲವಾ? ಎಂದು ಮಂಗನಿಂದ ಮಾನವನ ಕಥೆ ನೆನಪಿಸಿ ಹೇಳಿದೆ.

Moustache man Veerappan‘ಏಯ್‌ ಸುಮ್ನಿರೋ... ನಮ್‌ ಕಥೆ ಹೇಳು ಮಾರಾಯ!’ ಎಂದು ಗಣಪಮಾಮನ ಏಕೈಕ ಪತ್ನಿ ಸಾವಿತ್ರತ್ತೆ ಬಂದವಳೇ ತಗಾದೆ ಎತ್ತಿದಳು. ಅಲ್ಲಾ ನೀವು ಸಾರ್ಸ್‌ನಿಂದ ಬಚಾವಾಗಬಹುದಾದರೂ... ಎಂದು ಹೆಣ್ಮಕ್ಕಳ ಸಮಸ್ಯೆ ಹೇಳಿ ದುಃಖದಿಂದಲೇ ಒಳಕ್ಕೆ ಹೋದಳು.

ಆದರೂ, ಗಣಪಮಾಮ ಬಿಡದೇ ಹೊರ ಜಗುಲಿಗೆ ಅತ್ತೆಯನ್ನ ಕರೆದು ಕೊಂಡು ಬಂದು ಈಗಲಾದರೂ ಒಪ್ಪಿಕೊಳ್ತೀಯಾ ‘ಗಂಡಸರೇ ಬಲಿಷ್ಠ’ ಎಂದು ಕೋರೆ ನೋಟದಿಂದ ಪ್ರಶ್ನಿಸಿದ. ಅತ್ತೆ ಬಿಡಲಿಲ್ಲ. ಸಾಫ್ಟ್‌ವೇರ್‌ ಇಂಜಿನೀಯರ್ಸು ಮೀಸೆ ಇರಿಸಿಕೊಳ್ಳಲ್ಲ , ಅವರೆಲ್ಲಾ ಹೆಂಗಸ್ರಾ? ಎಂದಳು. ಅವರು ಹೌದೆಂದಾದರೆ ನಮಗಿಂತ ನೀವೇ ಬಲಿಷ್ಠರು ಅಂದಳು.

‘ಹಾಗೆ ಹೇಳಕೆ ಆಗಲ್ಲ’ ಎಂದರು ಮಾಮ. ‘ಹಾಗೆ ಹೇಳಕೆ ಆಗಲ್ಲ ಎಂದರೆ, ನೀವು ಹಾಗೆಲ್ಲ ಹೇಳಿದರೆ ಒಪ್ಪಿಕೊಳ್ಳಕ್ಕೂ ಆಗಲ್ಲ’ ಎಂದು ದಬಾಯಿಸುವಂತೆ ಮಾತನಾಡಿದಳು ಅತ್ತೆ. ಅತ್ತೆ ಯಾವತ್ತೂ ಹಾಗೇನೇ. ಮಹಿಳೆಯರ ಬಗ್ಗೆ ಅಸಡ್ಡೆ ತೋರಿದವರಿಗೆ ಝಾಡಿಸಿ ಮಾತನಾಡುತ್ತಾಳೆ. ಹಾಗಾಗೇ ಗಪಪತಿ ಮಾಮನೂ ಮೊದಲಿಗಿಂತ ನರ್ಮ ಆಗಿದ್ದ.

ಮಧ್ಯಾಹ್ನ ಊಟಕ್ಕೆ ಕುಳಿತಾಗ ಸಂಬಾರಕ್ಕೆ ಹೆಚ್ಚು ಸಾಂಬಾರ ಪೌಡರ್‌ ಹಾಕಿದ್ದ ಅತ್ತೆ ನಗುತ್ತ ಬಡಿಸಿದಳು. ಆ ‘ಪೌಡರ್‌’ ಘಾಟಿಗೆ ಕೆಮ್ಮಲು ಆರಂಭಿಸಿದ ಮಾಮನಿಗೆ ಇನ್ನೂ ಅದು ನಿಂತಿಲ್ಲ. ಆಸ್ಪತ್ರೆಗೆ ಹೊರಡಲು ಸಿದ್ಧತೆ ಮಾಡುತ್ತಿದ್ದಾರೆ. ಮೀಸೆ ಮೇಲೂ ಮಾಪ್ಲರ್‌ ಕಟ್ಟಿಕೊಂಡು ಆಸ್ಪತ್ರೆಗೆ ಹೊರಟಿದ್ದು , ಗಣಪಮಾಮನ ನೋಡಿ ನಾವೆಲ್ಲ ಮೀಸೆ ಇದ್ದೂ ಪ್ರಯೋಜನ ಇಲ್ವಲ್ಲ ? ಎಂದು ಒಳಗೊಳಗೇ ನಕ್ಕೆವು. ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಮಾಮನ ಬಳಿ ಹೇಳಿಕೊಂಡು ಬೈಸಿಕೊಂಡೆವು!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X