ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ.ವಿ. ಸುಬ್ಬಣ್ಣ ಸೇರಿದಂತೆ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಹೆಗ್ಗೋಡಿನ ಮಾಂತ್ರಿಕ, ನೀನಾಸಂ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಸೇರಿದಂತೆ ಐವರಿಗೆ 2003ನೇ ಇಸವಿಯ ಕರ್ನಾಟಕ ಸಾಹಿತ್ಯಅಕಾಡೆಮಿಯ ಗೌರವ ಪ್ರಶಸ್ತಿ ದೊರೆತಿದೆ.

ಡಾ। ವಸಂತ ಎ.ದಿವಾಣಜಿ, ಜಂಬಣ್ಣ ಅಮರಚಿಂತ, ಮಲ್ಲಿಕಾ ಕಡಿದಾಳ್‌ ಮತ್ತು ಡಾ। ಸರಜೂ ಕಾಟ್ಕರ್‌ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾದ ಇತರರು. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ। ಗುರುಲಿಂಗ ಕಾಪಸೆ ಪ್ರಶಸ್ತಿ ವಿಜೇತರ ಹೆಸರುಗಳನ್ನು ಬುಧವಾರ (ನ.19) ಸುದ್ದಿಗೋಷ್ಠಿಯಲ್ಲಿ ಪ್ರಕಟಸಿದರು. ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳನ್ನು ವಿವಿಧ ಪ್ರಕಾರದ 17 ಕೃತಿಗಳಿಗೆ ನೀಡಲಾಗಿದೆ ಎಂದು ಕಾಪಸೆ ತಿಳಿಸಿದರು.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಹಾಗೂ ಕೃತಿ:
ಲಲಿತಾ ಸಿದ್ಧಬಸವಯ್ಯ (ಇಹದ ಸ್ವರ-ಕಾವ್ಯ)
ಬಾಳಾಸಾಹೇಬ ಲೋಕಾಪುರ (ಹುತ್ತ-ಕಾದಂಬರಿ)
ಬಸವರಾಜ ಸಾದರ (ತಪ್ದಂಡ- ಸಣ್ಣಕಥೆ)
ರಾ.ಕ.ನಾಯಕ (ಘೋಳೀಮಡ್ಡಿ ಕತ್ತರಿ- ನಾಟಕ)
ಕೃಷ್ಣಮೂರ್ತಿ ಕಿತ್ತೂರ (ಜೀವನ ಸಂಧ್ಯಾ- ಲಲಿತ ಪ್ರಬಂಧ)
ಎನ್‌.ಕೆ. ವಸಂತರಾಜ (ಅಮೆರಿಕಾದೊಳಗೊಂದು ಇಣುಕು- ಪ್ರವಾಸ ಸಾಹಿತ್ಯ)
ಸಿ.ಜಿ.ಕೃಷ್ಣಸ್ವಾಮಿ (ಕತ್ತಾಲೆ ಬೆಳದಿಂಗಳೊಳಗ- ಜೀವನ ಚರಿತ್ರೆ)
ಮಲ್ಲೇಪುರಂ ಜಿ.ವೆಂಕಟೇಶ್‌ (ಕನ್ನಡಿಯ ನೋಟ- ಸಾಹಿತ್ಯ ವಿಮರ್ಶೆ)
ಆರ್‌.ವಿ.ಭಂಡಾರಿ (ಯಶವಂತನ ಯಶೋಗೀತ- ಮಕ್ಕಳ ಸಾಹಿತ್ಯ)
ಡಾ। ಸಿ.ಆರ್‌.ಚಂದ್ರಶೇಖರ್‌ (ನಮ್ಮ ನಿಮ್ಮ ಅಸಹಜ ನಡವಳಿಕೆ ಗಳಿಗೆ ಪರಿಹಾರವೇನು?- ವಿಜ್ಞಾನ ಸಾಹಿತ್ಯ)
ಮ. ಮಹೇಶನ್‌ (ಜಾಗತೀಕರಣ- ಮಾನವಿಕ)
ದೇವರ ಕೊಂಡಾ ರೆಡ್ಡಿ (ಲಿಪಿಯ ಹುಟ್ಟು ಮತ್ತು ಬೆಳವಣಿಗೆ- ಸಂಶೋಧನೆ)
ಡಿ.ಎ.ಶಂಕರ್‌ (ಕೂಲಿ- ಸೃಜನಶೀಲ ಅನುವಾದ)
ಚಂದ್ರಕಾತ ಪೋಕಳೆ (ಶ್ರೀವಿಟ್ಠಲ ಒಂದು ಮಹಾಸಮನ್ವಯ- ಅನುವಾದ ಸೃಜನೇತರ)
ಡಾ। ನಟರಾಜ್‌ಹುಳಿಯಾರ್‌ (ಗಾಳಿಬೆಳಕು- ಸಂಕೀರ್ಣ)
ಡಾ। ವಿನಯಾ (ಬಾಯಾರಿಕೆ- ಲೇಖಕರ ಮೊದಲ ಕೃತಿ)
ಪದ್ಮಾ ರಾಮಚಂದ್ರ ಶರ್ಮ (ರಿಟರ್ನ್‌ ಟು ಅರ್ಥ- ಅನುವಾದ).

ಡಿಸೆಂಬರ್‌ ಕೊನೆಯ ವಾರದಲ್ಲಿ ಕಬ್ಬಿನ ನಗರಿ ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗೌರವ ಪ್ರಶಸ್ತಿ ವಿಜೇತರಿಗೆ 10 ಸಾವಿರ ರುಪಾಯಿ ನಗದು ಹಾಗೂ ನಟರಾಜ ವಿಗ್ರಹವನ್ನು ನೀಡಲಾಗುವುದು. ಪುಸ್ತಕ ಬಹುಮಾನ ವಿಜೇತರು 5 ಸಾವಿರ ರುಪಾಯಿ ನಗದು ಬಹುಮಾ ಪಡೆಯುವರು.

(ಇನ್ಫೋ ವಾರ್ತೆ)


ಪೂರಕ ಓದಿಗೆ
‘ಸುಬ್ಬಣ್ಣನವರನ್ನು ಭೇಟಿ ಮಾಡಿಬಂದೆ’
ಅಪ್ಪ- ಲಲಿತಾ ಸಿದ್ಧಬಸವಯ್ಯನವರ ಕವಿತೆ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X