ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮತಾಂತರದಿಂದ ಧರ್ಮಗಳ ನಡುವೆ ಮೇಲುಕೀಳು, ಅದು ಬೇಡ’ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ವಿರೋಧ ವ್ಯಕ್ತಪಡಿಸುವುದರೊಂದಿಗೆ ಮತಾಂತರ ವಿರೋಧ ವಾದಕ್ಕೆ ಪುಷ್ಟಿ ದೊರೆತಂತಾಗಿದೆ. ಮತಾಂತರದಿಂದ ಕೋಮು ಸೌಹಾರ್ದತೆ ಸಾಧ್ಯವಿಲ್ಲ ಎನ್ನುವುದು ರವಿಶಂಕರ್‌ ನಿಲುವು. ‘ಜಾಗತಿಕ ಆಧ್ಯಾತ್ಮಿಕ ಪುನರುತ್ಥಾನ ಸಮಾವೇಶ’ದ ಸಮಾರೋಪದ ಸಂದರ್ಭದಲ್ಲಿ ಅವರು ಮಾತನಾಡಿದ್ದು - ಮತಾಂತರ, ಸೌಹಾರ್ದತೆ ಹಾಗೂ ವಿಶ್ವಶಾಂತಿಯ ಕುರಿತು.

By Staff
|
Google Oneindia Kannada News

ಮುಖಪುಟ -->ಸಾಹಿತ್ಯ ಸೊಗಡು -->ಆರ್ಟ್‌ ಆಫ್‌ ಲಿವಿಂಗ್‌ -->ವಿಚಾರಧಾರೆಜನವರಿ 20, 2003ಮತಾಂತರದಿಂದ ಆತಂಕದ ಮೋಡ

ಮತಾಂತರದ ಕಾರಣದಿಂದ ದೇಶದಲ್ಲಿ ಆತಂಕದ ವಾತಾವರಣ ರೂಪುಗೊಂಡಿದೆಯೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ನೇರವಾಗಿ ಉತ್ತರಿಸದ ರವಿಶಂಕರ್‌- ‘ಪರಸ್ಪರ ಕೂತು ಮಾತನಾಡುವುದು ಅಪನಂಬಿಕೆಯ ವಾತಾವರಣ ತೊಡೆಯಲು ಸಹಾಯಕವಾಗಬಹುದು. ಪ್ರತಿಯಾಬ್ಬರೂ ಇತರ ಧರ್ಮಗಳ ಬಗೆಗೆ ಕಿಂಚಿತ್ತಾದರೂ ತಿಳಿದುಕೊಳ್ಳಬೇಕು’ ಎಂದರು.

ಮಾನವೀಯ ಮೌಲ್ಯಗಳನ್ನು ಉನ್ನತಿಗೊಳಿಸಲು ಹಾಗೂ ವಿಶ್ವದಲ್ಲಿ ವ್ಯಾಪಕವಾಗಿರುವ ಆತಂಕದ ಪ್ರಮಾಣವನ್ನು ಕನಿಷ್ಠಗೊಳಿಸುವ ಕುರಿತು ಜಾಗತಿಕ ಪ್ರತಿನಿಧಿಗಳು ಭಾಗವಹಿಸಿದ್ದ ‘ಜಾಗತಿಕ ಆಧ್ಯಾತ್ಮಿಕ ಪುನರುತ್ಥಾನ ಹಾಗೂ ಮಾನವೀಯ ಮೌಲ್ಯಗಳ ಸಮಾವೇಶ’ ಚಿಂತನೆಯ ವೇದಿಕೆಯಾಗಿ ಪರಿಣಮಿಸಿತು. ಮನುಕುಲದ ನಡುವಿನ ಭಾವೈಕ್ಯತೆಯ ಅಗತ್ಯವನ್ನು ಒತ್ತಿಹೇಳಿದ ಸಮಾವೇಶ, ಒಳಿತಿನ ಭರವಸೆಯನ್ನು ಮೂಡಿಸಿದೆ. ಪ್ರತಿಯಾಬ್ಬರೂ ಸ್ನೇಹ ಹಾಗೂ ಪ್ರೀತಿ ತಳಹದಿಯ ಸಮಾಜದ ಆಶಾಕಿರಣಗಳೊಂದಿಗೆ ವಾಪಸ್ಸಾಗಿದ್ದಾರೆ ಎಂದು ಸಮಾವೇಶದ ಯಶಸ್ಸನ್ನು ರವಿಶಂಕರ್‌ ಬಣ್ಣಿಸಿದರು.
‘ಒಳ್ಳೆಯದು ಏನಾದರೂ ಸಂಭವಿಸಬಹುದು’ ಎನ್ನುವ ಹೊಸ ಭರವಸೆಯನ್ನು ಸಮ್ಮೇಳನ ಮೂಡಿಸಿದೆ ಎಂದರು.

ದೇಶ ವಿದೇಶಗಳ ಗಣ್ಯರು ಸೇರಿದಂತೆ ಉಪ ರಾಷ್ಟ್ರಪತಿ ಭೈರಾನ್‌ಸಿಂಗ್‌ ಶೆಖಾವತ್‌, ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ, ಉದ್ಯಮಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ನಾಲ್ಕು ದಿನಗಳ ‘ಜಾಗತಿಕ ಆಧ್ಯಾತ್ಮಿಕ ಪುನರುತ್ಥಾನ ಹಾಗೂ ಮಾನವೀಯ ಮೌಲ್ಯಗಳ ಸಮಾವೇಶ’ದಲ್ಲಿ ಭಾಗವಹಿಸಿದ್ದರು.

ಡಾವೋಸ್‌ಗೆ ರವಿಶಂಕರ್‌

ಡಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ತಾವು ಭಾಗವಹಿಸುವುದಾಗಿ ಹಾಗೂ ಉಪನ್ಯಾಸ ನೀಡುವುದಾಗಿ ರವಿಶಂಕರ್‌ ಪ್ರಕಟಿಸಿದರು.

(ಪಿಟಿಐ)

ಪೂರಕ ಓದಿಗೆ
ಎಸ್‌.ಎಲ್‌.ಭೈರಪ್ಪನವರ ಮೌನಭಂಗ!
ಸಮಾನತೆ ಮತ್ತು ಸ್ವಾತಂತ್ರ್ಯದತ್ತ ಒಂದು ಮಿಲಿಯನ್‌ ದಲಿತರು
ಸಂತ್ರಸ್ತ ನಿಧಿ ಹಾಗೂ ಮತಾಂತರ : ಪೋಪ್‌ಸ್ಪಷ್ಟನೆಗೆ ವಿಹೆಚ್‌ಪಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X