• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗತೀಕರಣ ಮಾರಿ, ‘ಮೆಟ್ರೋ’ ಮತ್ತು ದಲಿತ ಲೇಖಕರ ಶಕ್ತಿ

By Super
|

ಮೂಡಬಿದಿರೆ : ಬೆಂಗಳೂರಿಗೆ ಹೊಸದಾಗಿ ಆಗಮಿಸಿರುವ ಮೆಟ್ರೋ ಮಳಿಗೆಯ ಸುತ್ತಮುತ್ತ ಮಧ್ಯಮ ವರ್ಗದ ಮಂದಿ ಸುಳಿದಾಡುತ್ತಿರುವುದು ವಿಪರ್ಯಾಸ ಎಂದು ಲೇಖಕ ಡಾ.ನಟರಾಜ್‌ ಹುಳಿಯಾರ್‌ ವಿಷಾದಿಸಿದ್ದಾರೆ.

ಮನೋರಂಜನೆಯ ಕೇಂದ್ರವಾದ ಮೆಟ್ರೋ ಜಾಗತೀಕರಣದ ಆಕರ್ಷಣೆಯ ಪ್ರತೀಕ. ಮೆಟ್ರೋ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದ್ದು ಈ ಪ್ರತಿಭಟನೆ ಇನ್ನಷ್ಟು ವ್ಯಾಪಕವಾಗಬೇಕಿದೆ ಎಂದು ನಟರಾಜ್‌ ಹುಳಿಯಾರ್‌ ಅಭಿಪ್ರಾಯಪಟ್ಟರು. ಅವರು ಶುಕ್ರವಾರ, ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ನಡೆದ ‘ಜಾಗತೀಕರಣದ ಸವಾಲುಗಳು ಮತ್ತು ಆಯಾಮಗಳು’ ಎನ್ನುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಾಗತೀಕರಣದ ವಿಷ ವರ್ತುಲದಲ್ಲಿ ಸಿಲುಕಿ ನರಳುತ್ತಿರುವ ಜನ ತಕ್ಷಣವೇ ಎಚ್ಚತ್ತುಗೊಳ್ಳಬೇಕಿದೆ. ಇಲ್ಲದಿದ್ದರೆ ಜಾಗತೀಕರಣದ ಕಬಂಧ ಬಾಹುಗಳಲ್ಲಿ ಸಿಲುಕುವುದು ಖಚಿತ. ಜಾಗತೀಕರಣ ಮನೆಯಂಗಳದಲ್ಲೇ ಶಾಶ್ವತವಾಗಿ ತಳವೂರಿದರೂ ಆಶ್ಚರ್ಯವಿಲ್ಲ ಎಂದು ನಟರಾಜ್‌ ಎಚ್ಚರಿಸಿದರು.

ಜಾಗತೀಕರಣಕ್ಕೆ ಮದ್ದು : ಕೆಳವರ್ಗದಿಂದ ಬಂದ ಲೇಖಕರು ಜಾಗತೀಕರಣಕ್ಕೆ ಮದ್ದಾಗಬಲ್ಲರು ಎಂದು ನಟರಾಜ್‌ ಹುಳಿಯಾರ್‌ ಅಭಿಪ್ರಾಯಪಟ್ಟರು.

ಬುಡಕಟ್ಟು , ಶೂದ್ರ ಹಾಗೂ ಇನ್ನಿತರ ಕೆಳಪಂಗಡಗಳ ಲೇಖಕ ಲೇಖಕಿಯರು ಪರಿಣಾತ್ಮಕವಾಗಿ ಹಾಗೂ ನೆಲದ ದನಿಗೆ ಬದ್ಧವಾಗಿ ಬರೆದಾಗ ಜಾಗತೀಕರಣದ ವಿರೋಧಿ ಅಲೆ ಬಲವಾಗುವ ಸಾಧ್ಯತೆಯಿದೆ. ಈ ವಿರೋಧಿ ಅಲೆಯಲ್ಲಿ ಹಿಂದುಳಿದ ವರ್ಗಗಳ ಎಲ್ಲ ಲೇಖಕರೂ ಸಕ್ರಿಯವಾಗಿ ತೊಡಗಬೇಕಿದೆ ಎಂದು ನಟರಾಜ್‌ ಹುಳಿಯಾರ್‌ ಹೇಳಿದರು.(ಇನ್ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
71st All India Kannada Literary conference 2003, Moodabidri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more