• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಮೂ ಮತ್ತೆ ಚಳವಳಿಗೆ ?

By Staff
|

* ದಟ್ಸ್‌ಕನ್ನಡ ಬ್ಯೂರೊ

M.Chidanandamurthyಕನ್ನಡ ಚಳವಳಿಯಿಂದ ವಿರಮಿಸಿರುವ ಪಂಪ ಪ್ರಶಸ್ತಿ ಪುರಸ್ಕೃತ ಲೇಖಕ, ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮತ್ತೆ ಚಳವಳಿಯತ್ತ ಮುಖ ಮಾಡಿದರೆ ?

ಚಿದಾನಂದಮೂರ್ತಿ (ಚಿಮೂ) ಗಳನ್ನು ನೋಡಿದರೆ ದೊರಕುವ ಉತ್ತರ- ಇಲ್ಲ . ಅವರ ಕ್ರಿಯೆಯನ್ನು ನೋಡಿದರೆ- ಹೌದು !

ಒಂದೆಡೆ ಬೆಳಗಾವಿ ಕರ್ನಾಟಕಕ್ಕೇ ಸೇರಿದ್ದು ಎಂದು ಪಾಟೀಲ ಪುಟ್ಟಪ್ಪ ದೊಡ್ಡ ಗಂಟಲಿನಲ್ಲಿ ಹೇಳುತ್ತಿದ್ದರೆ, ಇನ್ನೊಂದೆಡೆ ಹಂಪಿಯಲ್ಲಿ ಕನ್ನಡ ಸಂಸ್ಕೃತಿಯ ಕೊಲೆಯಾಗುತ್ತಿದೆ ಎಂದು ಚಿಮೂ ಸಣ್ಣನೆ ದನಿಯಲ್ಲಿ ಹೇಳುತ್ತಿದ್ದಾರೆ.

ದೇವಸ್ಥಾನಗಳ ನಗರ ಎಂಬ ಪಾವಿತ್ರ್ಯ ಹೊಂದಿರುವ ಹಂಪಿ ಕ್ಷೇತ್ರವು ಇತ್ತೀಚೆಗೆ ಹಿಪ್ಪಿಗಳಿಂದಾಗಿ ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತಿದೆ. ಮಾದಕ ದ್ರವ್ಯಗಳ ಸೇವನೆ, ಸಿಗರೇಟು, ಮದ್ಯ ಬಾಟಲಿಗಳ ವಿನಿಮಯ, ಎಲ್ಲೆಂದರಲ್ಲಿ ಅಡ್ಡಾಡುವ, ಬಿದ್ದು ಕೊಳ್ಳುವ ಹುಡುಗ ಹುಡುಗಿಯರಿಂದಾಗಿ ದೇವಸ್ಥಾನಗಳ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎನ್ನುವುದು ಚಿಮೂ ಅವರ ನೋವು.

ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಹಂಪಿಯ ಮೇಲಿನ ವಿದೇಶೀಯರ ಸಾಂಸ್ಕೃತಿಕ ಧಾಳಿಯನ್ನು ವಿರೋಧಿಸಿ ಮಾರ್ಚ್‌ 23ರಂದು ರಾಜ್ಯದ ಸಂಶೋಧಕರು ಹಾಗೂ ಚರಿತ್ರಕಾರರು ಪ್ರತಿಭಟನೆ ನಡೆಸಲಿದ್ದಾರೆ. ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂದೆ ನಡೆಯುವ ಈ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಲು ಚಿದಾನಂದ ಮೂರ್ತಿ ಒಪ್ಪಿಕೊಂಡಿದ್ದಾರೆ.

ವಿಜಯನಗರ ಚಕ್ರವರ್ತಿಗಳ ವಂಶಸ್ಥರಾದ ಹೊಸಪೇಟೆಯ ರಾಜಾ ಅಚ್ಯುತದಾಸರು ಈ ಧರಣಿಯನ್ನು ಉದ್ಘಾಟಿಸುವರು.

ಹಂಪಿ ವಿಶ್ವ ಸಂಸ್ಕೃತಿಯ ತೊಟ್ಟಿಲು!

ವಾಸ್ತು ಶಿಲ್ಪಕ್ಕೆ ಹೆಸರಾದ ಹಂಪಿ ಕರ್ನಾಟಕ ಮಾತ್ರವಲ್ಲ , ವಿಶ್ವದ ಅಪೂರ್ವ ಸಾಂಸ್ಕೃತಿಕ ಸಂಕೇತ. ಆದರೆ ಇತ್ತೀಚೆಗೆ ಹಂಪಿಯು ಮಾದಕ ವಸ್ತುಗಳ ಮಾರಾಟ ಕೇಂದ್ರವಾಗುವ ಹಾದಿಯಲ್ಲಿದೆ. ಇಲ್ಲಿನ ಕಲ್ಲು ಮಂಟಪಗಳ ಸಂದಿಗೊಂದಿಗಳಲ್ಲಿ ಗಾಂಜಾ, ಚರಸ್‌, ಹೆರಾಯಿನ್‌ಗಳ ಕಳ್ಳ ಮಾರಾಟ ನಡೆಯುತ್ತಿದೆ ಎಂದು ಚಿಮೂ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಹಂಪಿಯಲ್ಲಿ ಬೆಳೆಯುತ್ತಿರುವ ಹಿಪ್ಪಿ ಸಂಸ್ಕೃತಿಯ ವಿರುದ್ಧ ಸರಕಾರವು ತಕ್ಷಣವೇ ಕ್ರಮ ತೆಗೆದುಕೊಳ್ಳದೇ ಇದ್ದರೆ ಹಂಪಿ ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ . ಪ್ರಸ್ತುತ ವಿದೇಶೀ ಪ್ರವಾಸಿಗರಿಗೆ ಇಂಗ್ಲಿಷ್‌ನಲ್ಲಿ ಕರಪತ್ರವೊಂದನ್ನು ಹಂಚಲಾಗುತ್ತಿದೆ. ಅದರಲ್ಲಿ , ಹಂಪಿಯಲ್ಲಿ ಏನೇನು ಮಾಡಬಹುದು ಮತ್ತು ಏನೇನು ಮಾಡಬಾರದು ಎಂಬ ಬಗ್ಗೆ ವಿವರಿಸಲಾಗಿದೆ. ಸರಕಾರವು ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಚಿದಾನಂದ ಮೂರ್ತಿ ಹೇಳಿದರು.

ಹಂಪಿ ನಗರದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಡಲು ಈಗಾಗಲೇ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ. ಆದರೆ ಅಭಿವೃದ್ಧಿ ಕಾರ್ಯಗಳೇ ಆರಂಭಗೊಂಡಿಲ್ಲ. ಈಗಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೇವಲ ಅಧಿಕಾರಿಗಳನ್ನು ಮಾತ್ರವಲ್ಲದೆ, ಚರಿತ್ರಾಕಾರರು ಮತ್ತು ಸಂಶೋಧಕರನ್ನೂ ಸೇರಿಸಿಕೊಳ್ಳಬೇಕು ಎಂದು ಚಿಮೂ ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಸಾತ್ವಿಕ ಆಕ್ರೋಶ

ಹಂಪಿಯಲ್ಲಿ ನಡೆಯುತ್ತಿರು ಕನ್ನಡ ಸಂಸ್ಕೃತಿಯ ಮೇಲಿನ ಅನಾಚಾರವನ್ನು ವಿರೋಧಿಸಿ ನಾಡಿನ ಬುದ್ಧಿಜೀವಿಗಳು, ಕಲಾವಿದರು, ಚರಿತ್ರಕಾರರು ಹಾಗೂ ಸಂಶೋಧಕರು ಮಾರ್ಚ್‌ 23 ರಂದು ಹಂಪಿಯಲ್ಲಿ ಪ್ರತಿಭಟನೆ ನಡೆಸುವರು. ಇದೇ ಸಂದರ್ಭದಲ್ಲಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕುರಿತು ಕನ್ನಡದ ಕರಪತ್ರಗಳನ್ನು ಹಂಚಲಾಗುವುದು ಎಂದು ಚಿಮೂ ತಿಳಿಸಿದರು.

ತಿರುಪತಿ ತಿರುಮಲ ಬೆಟ್ಟದ ಪರಿಸರದಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯನ್ನು ಆಂಧ್ರಪ್ರದೇಶ ಸರ್ಕಾರ ನಿಷೇಧಿಸಿದೆ. ಅದೇರೀತಿ, ಹಂಪಿಯಲ್ಲೂ ಮದ್ಯಪಾನ ಹಾಗೂ ಮಾದಕವಸ್ತುಗಳ ಸೇವನೆಯನ್ನು ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಚಿಮೂ ಆಗ್ರಹಿಸಿದರು.

ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌, ತ.ರಂ.ಕೃಷ್ಣೇಗೌಡ, ಡಾ.ಎಚ್‌.ಎಂ.ಮರುಳಸಿದ್ಧಯ್ಯ, ಡಾ.ಎಸ್‌.ನಾಗರಾಜು, ಡಾ.ಸೂರ್ಯನಾಥ ಕಾಮತ್‌, ರಾ.ನಂ.ಚಂದ್ರಶೇಖರ್‌ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಎಲ್ಲ ಚಿದಾನಂದಮಯ...

ನನ್ನ ಪ್ರೀತಿಯ ಹಿಂದೂ ಧರ್ಮ...

ಅಭಿಮಾನಿಗಳ ನಡುವೆ ಆನಂದ ಬಾಷ್ಪ ಸುರಿಸಿದ ಕನ್ನಡದ ಕಟ್ಟಾಳು

ಚಿದಾನಂದ ಮೂರ್ತಿ ಅವರಿಗೆ ವೀರಶೈವ ಮಹಾಸಭಾ ಬಹಿಷ್ಕಾರ

ಚಿ.ಮೂ, ಜಿಎಸ್ಸೆಸ್‌ಗೆ ಬಹಿಷ್ಕಾರ ಹಾಕಿಲ್ಲ : ವೀರಶೈವ ಮಹಾಸಭಾ

ಎಲ್ಲಾ ದುರಂತಗಳಿಗೆ ರಾಜ್‌ ಅವರೇ ಹೊಣೆ- ಎಂ. ಚಿದಾನಂದ ಮೂರ್ತಿ

ಕನ್ನಡ ತಂತ್ರಜ್ಞಾನದ ಭಾಷೆಯಾಗಬೇಕು : ಚಿದಾನಂದಮೂರ್ತಿ

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more