• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸನ: ಎಂಎಂಕೆಯಿಂದ ಮನೆಮನೇಲಿ ಸಾಹಿತ್ಯ ಸಸಿ

By Staff
|

*ದಟ್ಸ್‌ಕನ್ನಡ ಬ್ಯೂರೊ

ಎಂಎಂಕೆ ಅಂದರೆ ಮನೆ ಮನೆ ಕವಿಗೋಷ್ಠಿ. ಇದು ಹಾಸನ ಜಿಲ್ಲೆಯಲ್ಲಿ ಶುರುವಾಗಿರುವ ಸಾರಸ್ವತ ಪ್ರಯೋಗ. ಪ್ರತಿ ತಿಂಗಳ ಮೊದಲ ಭಾನುವಾರ ಟೀವಿ ಧಾರಾವಾಹಿ ನೋಡುವ ಕಾರ್ಯಕ್ರಮ ಕೈ ಬಿಟ್ಟು ಸಹೃದಯರು ಮನೆಯಲ್ಲೊಂದು ಕವಿಗೋಷ್ಠಿ ನಡೆಸುತ್ತಾರೆ. ಒಂದೊಂದು ವಾರ ಒಬ್ಬೊಬ್ಬರ ಮನೆಯಲ್ಲಿ ಕವಿಗೋಷ್ಠಿ. ಹೊಸ ಪುಸ್ತಕ, ಹೊಸ ಕವನ, ಹಳೇ ಸಾಹಿತ್ಯಗಳ ಕುರಿತು ಮಾತುಕತೆ, ಚರ್ಚೆ, ಜಟಾಪಟಿ ವಾದ.

ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ ಹಾಸನದಲ್ಲಿ ಕಳೆದ ದಶಕದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ತುಂಬಾ ಕಡಿಮೆಯಾಗಿದ್ದವು. ‘ಮನೆ ಮನೆ ಕವಿ ಗೋಷ್ಠಿ’ ಪರಿಕಲ್ಪನೆ ಆರಂಭವಾಗಿದ್ದು ಹಲವು ವರ್ಷಗಳ ಹಿಂದೆ. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಆಸಕ್ತ ಸಹೃದಯರಿಲ್ಲದೇ ನಿಂತು ಹೋಯಿತು. ಈಗ ಮತ್ತೆ ಶುರುವಾಗಿದೆ- ಮನೆ ಮನೆ ಕವಿಗೋಷ್ಠಿ ಅಂದರೆ- ಎಂಎಂಕೆ ಎಂದೇ ಜನಪ್ರಿಯ.

ಕವನ ವಾಚನ, ಕಾವ್ಯದ ಕುರಿತು ಚರ್ಚೆ, ಸಾಹಿತ್ಯ ಮತ್ತು ಕಲಾಕ್ಷೇತ್ರದ ಹಲವು ಆಗುಹೋಗುಗಳ ಬಗ್ಗೆ ಮಾತುಕತೆ ಎಂಎಂಕೆಯ ಹೂರಣ. ಆಗೊಮ್ಮೆ ಈಗೊಮ್ಮೆ ಎಂಎಂಕೆ ವೇದಿಕೆಯಲ್ಲಿ ಪುಸ್ತಕ ಬಿಡುಗಡೆಯಾಗುವುದುಂಟು. ಉದಯೋನ್ಮುಖ ಕವಿಗಳು, ಸಾಹಿತಿಗಳಿಗೆ ಬೆನ್ನು ತಟ್ಟುವ ವೇದಿಕೆಯಾಗಿ ಸ್ಫೂರ್ತಿ ಕೇಂದ್ರವಾಗಿ ಪರಿಣಮಿಸಿರುವ ಎಂಎಂಕೆಯ ನೇತಾರ ಎಚ್‌. ಆರ್‌. ಚಂದ್ರಶೇಖರ್‌.

ಎಂಎಂಕೆ ಈಗಾಗಲೇ 75ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಸೆಂಚುರಿಯತ್ತ ದಾಪುಗಾಲಿಟ್ಟಿದೆ. ಈ ಗುಂಪಿನಲ್ಲಿ ಹಣದ ವ್ಯವಹಾರಗಳಿಲ್ಲ. ಸದಸ್ಯತ್ವ ಶುಲ್ಕವಿಲ್ಲ. ಯಾರ ಮನೆಯಲ್ಲಿ ಕವಿಗೋಷ್ಠಿ ನಡೆಯುತ್ತದೋ ಅವರು, ಗೋಷ್ಠಿಗೆ ಬಂದಿರುವವರಿಗೆ ಚಹಾ- ತಿಂಡಿ ನೀಡಿದರಾಯ್ತು. ತಿಂಡಿ ನೀಡುವುದು ಕಡ್ಡಾಯವೇನಲ್ಲ. ಬರಿಯ ಚಹಾದೊಂದಿಗೇ ಕಾರ್ಯಕ್ರಮ ಮುಗಿದರೂ ತೊಂದರೆಯಿಲ್ಲ. ಹತ್ತು ಮಂದಿ ಸೇರುವುದಕ್ಕಾಗಿ ಈ ಗುಂಪಿಗೊಂದಿಷ್ಟು ಜಾಗ ಸಿಕ್ಕಿದರಾಯಿತು. ಆದರೆ ಈ ವರೆಗೆ ಆತಿಥ್ಯ ವಹಿಸಿದ ಎಲ್ಲ ಮನೆಯವರೂ ಚಹಾ ತಿಂಡಿ ನೀಡುತ್ತಲೇ ಬಂದಿದ್ದಾರೆ . ಅದು ಆತಿಥ್ಯ ವಹಿಸಿದವರ ದೊಡ್ಡ ಗುಣ ಅನ್ನೋದು ಚಂದ್ರಶೇಖರ್‌ ಅಭಿಪ್ರಾಯ.

ಈ ವರೆಗೆ ಎಂಎಂಕೆಯಲ್ಲಿ ಅನೇಕ ಮಂದಿ ಗಣ್ಯ ಸಾಹಿತಿಗಳು- ಕಲಾವಿದರು ಭಾಗವಹಿಸಿದ್ದಾರೆ. ಎಸ್‌. ಎಲ್‌. ಭೈರಪ್ಪ, ದೊಡ್ಡರಂಗೇಗೌಡ, ಕಾಳೇಗೌಡ ನಾಗವಾರ, ಸಿ. ಜಿ. ಪುರುಷೋತ್ತಮನ್‌, ಮನಶ್ಯಾಸ್ತ್ರಜ್ಞ ಸಿ. ಆರ್‌. ಚಂದ್ರಶೇಖರ್‌, ಸುಬ್ರಾಯ ಚೊಕ್ಕಾಡಿ, ಅಷ್ಟಾವಧಾನಿ ವಸಂತ ಭಾರಧ್ವಾಜ್‌, ಶತಾವಧಾನಿ ಆರ್‌. ಗಣೇಶ್‌ ಎಂಎಂಕೆಯಲ್ಲಿ ಭಾಗವಹಿಸಿ ಉದಯೋನ್ಮುಖರ ಬೆನ್ನು ತಟ್ಟಿದ್ದಾರೆ.

ಎಂಎಂಕೆಯ ಮುಂದಿನ ಯೋಜನೆ ಮಕ್ಕಳಿಗಾಗಿ ಇಂತಹ ಮನೆಮನೆ ಕಾರ್ಯಕ್ರಮ ನಡೆಸುವುದು. ಈ ಕಾರ್ಯಕ್ರಮ ಸದ್ಯದಲ್ಲೇ ಶುರುವಾಗಲಿದೆ ಎನ್ನುವ ಚಂದ್ರಶೇಖರ್‌ ಹಾಗೂ ಎಂಎಂಕೆ ಸದಸ್ಯರಿಗೆ ಆಲ್‌ ದ ಬೆಸ್ಟ್‌.

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more