• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸತು ಬಂದಿದೆ : ‘ಒಡಲಾಳ’ ಮಾಸ ಪತ್ರಿಕೆ

By Staff
|

S.K. Harihareshwaraಮೈಸೂರು : ಓದುವ ಅಭಿರುಚಿಯ ಕನ್ನಡಿಗರಿಗೊಂದು ಸಂತೋಷದ ಸುದ್ದಿ . ಕನ್ನಡ ಪತ್ರಿಕಾಲೋಕಕ್ಕೆ ಹೊಸತೊಂದು ಮಾಸಪತ್ರಿಕೆ ಪ್ರವೇಶಿಸುತ್ತಿದ್ದು - ‘ಒಡಲಾಳ’ ಶೀರ್ಷಿಕೆಯ ನೂತನ ಮಾಸ ಪತ್ರಿಕೆ ಏಪ್ರಿಲ್‌ 18ರಂದು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.

ಮೈಸೂರಿನ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕರಾದ ಪ್ರೊ। ಶ್ರೀ ಭಾಷ್ಯಂ ಸ್ವಾಮೀಜಿ ಅವರು‘ಒಡಲಾಳ’ ಪತ್ರಿಕೆಯನ್ನು ಬಿಡುಗಡೆ ಮಾಡುವರು.

ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಪತ್ರಿಕೆ ಬಿಡುಗಡೆ ಸಮಾರಂಭವನ್ನು ಶಾಸಕ ವಿ.ರಾಮದಾಸ್‌ ಉದ್ಘಾಟಿಸುವರು.

ಹಿರಿಯ ಸಾಹಿತಿ ಎಸ್‌.ಕೆ.ಹರಿಹರೇಶ್ವರ ಹಾಗೂ ಕಾದಂಬರಿಕಾರರಾದ ಸಿ.ಎನ್‌.ಮುಕ್ತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕದ ಅತಿ ಹೆಚ್ಚು ಪ್ರಸಾರದ ಜಿಲ್ಲಾ ಪತ್ರಿಕೆ ‘ಆಂದೋಲನ’ ದಿನಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುವರು.

ಕಾರ್ಯಕ್ರಮ ನಡೆಯುವ ಸ್ಥಳ:

ಶ್ರೀ ರಾಜೇಂದ್ರ ಭವನ,

ಜೆ.ಎಸ್‌.ಎಸ್‌. ಆಸ್ಪತ್ರೆ ಆವರಣ, ಮೈಸೂರು

ದಿನಾಂಕ: ಏಪ್ರಿಲ್‌ 18, 2003 ಶುಕ್ರವಾರ ಸಂಜೆ 5:30 ಗಂಟೆಗೆ.

ಅಂದಹಾಗೆ, ‘ಒಡಲಾಳ’ ಮಾಸ ಪತ್ರಿಕೆಯ ಸಂಪಾದಕರು- ಎಂ. ಮಹದೇವಮ್ಮ.

(ವಿಶೇಷ: ‘ಒಡಲಾಳ’ ಮಾಸಪತ್ರಿಕೆಯ ಪ್ರಾರಂಭೋತ್ಸವದ ಮೊದಲ ಸಂಚಿಕೆಯಲ್ಲಿ , ಉತ್ತರಕ್ಯಾಲಿಫೋರ್ನಿಯಾದ ಮಿಲ್ಪಿಟಸ್‌ ನಗರದ ಶ್ರೀಮತಿ ಸಂಧ್ಯಾ ರವೀಂದ್ರನಾಥ್‌ ಅವರು ಬರೆದ ‘ರಾಜೇಶ್ವರಿ’ ಕಥೆಯೂ, ಮತ್ತು ಮಿಸ್ಸೌರಿ ರಾಜ್ಯದ ಸೇಂಟ್‌ ಲೂಯಿಸ್‌ ನಗರದ ಡಾ। ಅಶ್ವತ್ಥ್‌ ಎನ್‌. ರಾವ್‌ ಅವರ ‘ಕಾರ್‌ ವಾರ್ಮಿಂಗ್‌’ ಹಾಸ್ಯಪ್ರಬಂಧವೂ ಪ್ರಕಟವಾಗಿವೆ!)

ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more