• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭಾ ನವನವೋನ್ಮೇಶಶಾಲಿನೀ...

By Staff
|

*ದಟ್ಸ್‌ಕನ್ನಡ ಬ್ಯೂರೊ

ಪ್ರತಿಭಾ ಪ್ರಹ್ಲಾದ್‌ ಗೊತ್ತಲ್ಲ ? ಅಪರೂಪದ ನೃತ್ಯಗಾತಿ. ಒಂದರ ಮೇಲೊಂದು ಅನೇಕ ಪ್ರಶಸ್ತಿಗಳನ್ನು ಪಡೆದ ಪ್ರತಿಭಾವಂತೆ. ಆದರೆ ತಮಾಷೆ ನೋಡಿ ; ಪ್ರಶಸ್ತಿ ಬಂದಾಗ ಸುದ್ದಿ ಮಾಡುವುದಕ್ಕಿಂಥ ಹೆಚ್ಚು ಸಿಗುವ ಪ್ರಸಿದ್ಧಿಗಿಂತ ಹೆಚ್ಚಾಗಿ ಕಾಂಟ್ರೋವರ್ಸಿಗಳ ಮೂಲಕ ಈಕೆ ಸುದ್ದಿ ಮಾಡುವುದೇ ಹೆಚ್ಚು !

ನೃತ್ಯಗಾತಿ ಪ್ರತಿಭಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಮೂಲಿನಂತೆ ಈಗಲೂ ತಗಾದೆಯಾಂದಿಗೇ ಸುದ್ದಿ ಮಾಡಿದ್ದಾರೆ. ಹೈ ಪ್ರೊಫೈಲ್‌ ನೃತ್ಯಗಾತಿ ಸೋನಾಲ್‌ ಮಾನಸಿಂಗ್‌ ಅವರನ್ನ ದಬಾಯಿಸುವುದರೊಂದಿಗೆ ಈ ಬಾರಿ ಪ್ರತಿಭಾ ಸುದ್ದಿ ಮಾಡಿದ್ದಾರೆ. ಪ್ರಶಸ್ತಿಗಳ ವಿಷಯವಾಗಿಯೇ ಜಗಳ ಹುಟ್ಟಿಕೊಂಡಿರುವುದು ಇನ್ನೊಂದು ವಿಶೇಷ. ವಿಷಯ ಇದು-

Bharatha natyam dancer Prathibha Prahlad2001ನೇ ಇಸವಿಯಲ್ಲಿ ಪ್ರತಿಭಾಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿತ್ತಷ್ಟೇ. ಕಳೆದೆರಡು ವಾರಗಳ ಹಿಂದೆ ಪತ್ರಿಕೆಯಾಂದರಲ್ಲಿ ಪ್ರತಿಭಾಗೆ ಪ್ರಶಸ್ತಿ ನೀಡಿರುವುದರ ಬಗ್ಗೆ ಸೋನಾಲ್‌ ಮಾನಸಿಂಗ್‌ ಕಿರಿಕ್‌ ಮಾತಾಡಿದರು. ಅವರ ಪ್ರಕಾರ ಪ್ರತಿಭಾಗಿಂತ ಹಿರಿಯ ನೃತ್ಯ ಕಲಾವಿದರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಲ್ಲಬೇಕಿತ್ತು .

ಈ ಹಿಂದೆಯೇ ಅಕಾಡೆಮಿಯ ಫೆಲೋಶಿಪ್‌ ಪಡೆದುಕೊಂಡಿರುವ ಸೋನಾಲ್‌ ಮಾನಸಿಂಗ್‌ ಹೇಗೆ ನನ್ನೊಬ್ಬಳ ವಿರುದ್ಧ ಬೆರಳು ಮಾಡಿ ತೋರಿಸುತ್ತಾರೆ ಎಂಬುದು ಪ್ರತಿಭಾ ಪ್ರಶ್ನೆ. ಅಕಾಡೆಮಿಯು ನೀಡುತ್ತಿರುವ ಗೌರವಕ್ಕೆ ಅವಮಾನ ಮಾಡಬಾರದು. ಅಲ್ಲದೆ ವರ್ಷಾನುಗಟ್ಟಲೆಯಿಂದ ನಾನು ಶ್ರಮಪಟ್ಟು ಸಾಧಿಸಿದ ಕಲೆಗೂ ಅವಮಾನ ಮಾಡಬಾರದು ಎಂಬ ಕಾರಣಕ್ಕೆ ನಾನು ಪ್ರಶಸ್ತಿಯನ್ನು ಒಪ್ಪಿಕೊಂಡಿದ್ದೇನೆ. ನಾನು ಪ್ರಶಸ್ತಿಗೆ ಅನರ್ಹಳು ಅಂತ ನನಗನಿಸಿಲ್ಲ ಎಂಬುದು ಪ್ರತಿಭಾ ಸಮಜಾಯಿಷಿ.

50 ವರ್ಷಗಳಿಗೂ ಹಿಂದೆ ನೆಹರೂ ಸರಕಾರ ಅಕಾಡೆಮಿಯನ್ನು ಸ್ಥಾಪಿಸಿತ್ತು. ಸರಕಾರಿ ಹಣದಲ್ಲಿ ನಡೆಯುತ್ತಿರುವ ಈ ಸಂಸ್ಥೆಯನ್ನು ಕಲಾವಿದರೇ ನಡೆಸುತ್ತಿದ್ದಾರೆ.

Bharatha natyam dancer Prathibha Prahladಅಸ್ತಾದ್‌ ದೇಬೂ, ಚಿತ್ರಾ ವಿಶ್ವೇಶ್ವರನ್‌, ದರ್ಶನ ಜಾವೇರಿ, ಸುನೀಲ್‌ ಕೊಠಾರಿ, ಶಾಂತಾ ಸರ್ಬ್‌ಜೀತ್‌ ಸಿಂಗ್‌, ಅಕಾಡೆಮಿಯ ಅಧ್ಯಕ್ಷ ಭೂಪೇನ್‌ ಹಜಾರಿಕಾ ಮತ್ತು ಕಲಾಕ್ಷೇತ್ರ ನಿರ್ದೇಶಕ ರಾಜಾರಾಮ್‌ ಅವರನ್ನೊಳಗೊಂಡ ಆಯ್ಕೆ ಸಮಿತಿ ಪ್ರತಿಭಾ ಅವರನ್ನು ಅಕಾಡೆಮಿ ಪ್ರಶಸ್ತಿಗಾಗಿ ಆಯ್ಕೆ ಮಾಡಿತ್ತು. 2001 ಇಸವಿಯಲ್ಲಿ ಪ್ರಶಸ್ತಿ ತೆಗೆದುಕೊಂಡಾಗ ಸೋನಾಲ್‌ ಮಾನಸಿಂಗ್‌ ಅದನ್ನು ವಿರೋಧಿಸದೇ ಈಗೇಕೆ ವಿರೋಧಿಸಿ ತಗಾದೆ ಮಾಡುತ್ತಿದ್ದಾರೆ ಎಂಬುದು ಪ್ರತಿಭಾರ ಪ್ರಶ್ನೆ.

ನಾನೇನೂ ರಾಜಕೀಯ ಶಿಫಾರಸ್ಸಿನಿಂದ ಈ ಪ್ರಶಸ್ತಿ ಪಡೆಯಲಿಲ್ಲ. ಕಲೆಯಲ್ಲಿ ಹಿರಿಯರು ಯಾರು ಮತ್ತು ಕಿರಿಯರು ಯಾರು ಎಂಬುದನ್ನು ಯಾರು ನಿರ್ಧರಿಸುತ್ತಾರೆ ? ಕಲೆ ಎಂಬುದು ವಸ್ತುನಿಷ್ಠವೇ ಹೊರತು ವ್ಯಕ್ತಿನಿಷ್ಠವಲ್ಲ. ಅದು ವಯಸ್ಸಿನ ಮೇಲೆ ನಿರ್ಧಾರವಾಗುವುದಿಲ್ಲ.. ಎಂದು ಪ್ರತಿಭಾ ಉದ್ದುದ್ದ ವಾದ ಮಂಡಿಸಿ- ಸೋನಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಲಾವಿದರ ಜಗಳ ಎಷ್ಟು ಚೆನ್ನಾಗಿರುತ್ತೆ ನೋಡಿ!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more