• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜಿಎಸ್ಸೆಸ್‌ಗೆ ಜ್ಞಾನಪೀಠ ಕೊಡಿ’

By Staff
|

*ಚೇತನ್‌ ನಾಡಿಗೇರ್‌

Dr.H.Narasimhaiah‘ಜಿಎಸ್ಸೆಸ್‌ಗೆ ಜ್ಞಾನಪೀಠ ಪ್ರಶಸ್ತಿ ಕೊಡಬೇಕು. ಅವರು ಜ್ಞಾನಪೀಠ ಪ್ರಶಸ್ತಿ ಪಡೆಯುವುದನ್ನು ನಾನು ಸಾಯುವುದಕ್ಕೆ ಮುಂಚೆ ನೋಡಬೇಕು’- ಶಿಕ್ಷಣತಜ್ಞ ಎಚ್‌. ನರಸಿಂಹಯ್ಯ ಹೀಗೆ ಹೇಳುವಾಗ ಭಾವಭರಿತರಾಗಿದ್ದರು. ಅಷ್ಟೇ ಅಲ್ಲ, ಜಿಎಸ್ಸೆಸ್‌ ವಿರಚಿತ ‘ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣಿನ ಗುಡಿಯಾಳಗೆ’ ಕವನವನ್ನು ಎದೆ ತುಂಬಿ ಮೆಚ್ಚಿಕೊಂಡರು.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಕೃಷ್ಣ ರಾಜ ಪರಿಷನ್ಮಂದಿರದಲ್ಲಿ ಫೆ.7ರ ಶುಕ್ರವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ ಕೆ. ವಿ. ನಾರಾಯಣ್‌ ಅವರಿಗೆ ಜಿಎಸ್ಸೆಸ್‌ ವಿಶ್ವಸ್ಥ ಮಂಡಳಿ ಜಿಎಸ್ಸೆಸ್‌ ಪ್ರಶಸ್ತಿ ನೀಡಿ ಗೌರವಿಸಿದ ಸಮಾರಂಭವದು. ಪ್ರಶಸ್ತಿ ಪ್ರದಾನ ಮಾಡಿದ್ದು ಬೆಂಗಳೂರು ವಿಶ್ವ ವಿದ್ಯಾಲಯದ ಮಾಜಿ ಕುಲಪತಿ, ಜಿಎಸ್ಸೆಸ್‌ ಅಭಿಮಾನಿ ಎಚ್ಚೆನ್‌. ತಮ್ಮ ಹಾಗೂ ನಾರಾಯಣ್‌ ಒಡನಾಟದ ಹಸುರು ನೆನಪುಗಳನ್ನು ಮೆಲುಕು ಹಾಕಿದ ಎಚ್ಚೆನ್‌ ಮಾತುಗಳಲ್ಲಿ ಜಿ.ಎಸ್‌.ಶಿವರುದ್ರಪ್ಪನವರಿಗೆ ಜ್ಞಾನಪೀಠ ಸಿಗಲೇಬೇಕೆಂಬ ಒತ್ತಾಸೆಯಿತ್ತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ‘ಹೊರಗಡೆ ಬಹಳ ವೈಚಾರಿಕವಾಗಿ ಕಾಣಿಸುವ ಕೆ. ವಿ. ನಾರಾಯಣ್‌, ಅಂತಃಕರಣ ತುಂಬಿರುವ ಮನುಷ್ಯ. ನಮ್ಮದು ಸುಮಾರು 3 ದಶಕಗಳ ಗೆಳೆತನ. ಇಷ್ಟು ವರ್ಷದ ಸ್ನೇಹ ಸಂಬಂಧದಲ್ಲಿ ನಾವು ತುಂಬಾ ಅನ್ಯೋನ್ಯವಾಗಿದ್ದೇವೆ ಎಂದರೆ ಅದು ತಪ್ಪಾಗಬಹುದು. ನಮ್ಮಿಬ್ಬರಲ್ಲಿ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಯ ಇತ್ತು. ಅವರು ಯಾವತ್ತೂ ಪ್ರಾಮಾಣಿಕತೆಯನ್ನು ಬಿಟ್ಟುಕೊಟ್ಟವರಲ್ಲ. ಸಮಾಜಕ್ಕೆ ಒಳ್ಳೆಯದನ್ನು ಹೇಳದಿದ್ದರೆ ಅವನು ಮನುಷ್ಯನಲ್ಲ. ಅದು ಕಟುವಾಗಿದ್ದರೂ ಸರಿ. ಒಳ್ಳೆಯ ಮನುಷ್ಯನಾಗದವನು ಒಳ್ಳೆಯ ಚಿಂತಕ, ವಿಮರ್ಶಕ, ಸಾಹಿತಿ ಆಗುವುದಕ್ಕೆ ಸಾಧ್ಯವಿಲ್ಲ’ ಎಂದರು.

ನಾರಾಯಣ್‌ ಅವರಲ್ಲಿ ಪ್ರಖರ ರಾಜಕೀಯ ಪ್ರಜ್ಞೆ ಇದೆ. ಅವರ ವಿಮರ್ಶೆಗಳಲ್ಲಿ ಸಾಮಾಜಿಕ-ರಾಜಕೀಯ ಭಾಷೆಯಿದೆ. ನನ್ನಲ್ಲಿ ಮೊದಲಿಂದಲೂ ಬೆಳೆದು ಬಂದ ರಾಜಕೀಯ ಆಸಕ್ತಿಯನ್ನು ಪೋಷಿಸಿ ಆತ್ಮ ವಿಶ್ವಾಸ ತುಂಬಿದವರು ಅವರು ಎಂದು ಬರಗೂರು ಹೊಗಳಿದರು.

ಅಮೆರೀಕರಣ, ಜಾಗತೀಕರಣ ನಮ್ಮ ರಾಜಕೀಯ, ಸಂಸ್ಕೃತಿ ಮತ್ತು ಶಿಕ್ಷಣದ ಮೇಲೆ ಬಹಳ ಕೆಟ್ಟದಾದ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವ ಹುಸಿಯಾಗುತ್ತಿದೆ. ಇದರಿಂದ ಹೊರಬರಲು ಸೈದ್ಧಾಂತಿಕ ನೆಲೆ ರೂಪಿಸಬೇಕಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ರಾಜಕಾರಣ, ಪ್ರಜಾಪ್ರಭುತ್ವ, ಶಾಸನ ಸಭೆ ಮತ್ತು ಸರಕಾರವನ್ನು ನಿಯಂತ್ರಿಸುತ್ತಿವೆ ಎಂದು ವಿಷಾದಿಸಿದರು.

G.S.Shivarudrappaಸಾಹಿತ್ಯ ಕ್ಷೇತ್ರದಲ್ಲಿ ಹೊಸದೇನೂ ಬೆಳವಣಿಗೆಯಾಗುತ್ತಿಲ್ಲವೆಂಬ ಕೊರಗು ಬಹಳ ಜನಕ್ಕಿದೆ. ಸಿನಿಕತನವೇ ಸತ್ಯ, ಹತಾಶೆಯೇ ಆತ್ಮ ಎನ್ನುವವರಿಗೆ ಕನ್ನಡ ಸಾಹಿತ್ಯ ರುಚಿಸುತ್ತಿಲ್ಲ . ಕನ್ನಡ ಸಾಹಿತ್ಯ ಯಾವತ್ತೂ ಕ್ರಿಯಾಶೀಲವಾಗಿದೆ. ಸಮಾಜದಲ್ಲಿದ್ದ ಸತ್ಯ ಮತ್ತು ಮೌಲ್ಯ ವ್ಯಕ್ತಿ ನೆಲೆಯಿಂದ ಸಮುದಾಯದ ನೆಲೆಗೆ ಸ್ಥಳಾಂತರಗೊಂಡಿದೆ. ಇದಕ್ಕೆ ನಾರಾಯಣ್‌ರಂತಹವರ ಚಿಂತನೆಗಳೇ ಕಾರಣ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ. ವಿ. ನಾರಾಯಣ್‌, ವಿಚಾರಗಳು ನಮ್ಮವಲ್ಲ, ನಾವು ಮಾಧ್ಯಮ ಮಾತ್ರ. ನಮ್ಮ ಮೂಲಕ ವಿಚಾರಗಳು ಬರುತ್ತವೆ ಎಂದು ಚುಟುಕಾಗಿ ಹೇಳಿದರು.

ಅಭಿನಂದನಾ ಭಾಷಣ ಮಾಡಿದ ಪ್ರೊ ಚಂದ್ರಶೇಖರ ನಂಗಲಿ, ಕೆ. ವಿ. ನಾರಾಯಣ್‌ರನ್ನು ಹರಿದ್ವರ್ಣ ಕಾಡು ಎಂದು ವರ್ಣಿಸಿದರು. ಖ್ಯಾತ ಕವಿ ಡಾ. ಹೆಚ್‌. ಎಸ್‌. ವೆಂಕಟೇಶಮೂರ್ತಿ ಮತ್ತು ಜಿಎಸ್ಸೆಸ್‌ ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಕೆ. ವಿ. ನಾಗರಾಜಪ್ಪ ಸಮಾರಂಭದಲ್ಲಿ ಹಾಜರಿದ್ದರು.

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more