• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ವಿಜ್ಞಾನ ಹಿಂದುಳಿದಿರುವುದಕ್ಕೆ ಕಾರಣ ಇಂಗ್ಲೀಷಾ?

By Staff
|

ನಮ್ಮ ವಿದ್ಯಾರ್ಥಿಗಳು ವಿಜ್ಞಾನ ಅಂದರೆ ಮಾರುದೂರ ಹೋಗುವುದೇತಕ್ಕೆ? ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳು- ವಿಜ್ಞಾನದ ಕೋರ್ಸುಗಳೆಂದರೆ ಹೌಹಾರುವುದೇತಕ್ಕೆ ?

- ಎಲ್ಲದಕೂ ಕಾರಣ ಇಂಗ್ಲೀಷು ಎನ್ನುತ್ತಾರೆ ಕರ್ನಾಟಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಟಿ.ಎಂ.ವಿಜಯಶಂಕರ.

ವಿಜ್ಞಾನ ಅನ್ನುವುದು ಅಲರ್ಜಿಯಂತಾಗಿರುವುದಕ್ಕೆ ಹಾಗೂ ವಿಜ್ಞಾನದ ಕೋರ್ಸುಗಳಿಂದ ವಿದ್ಯಾರ್ಥಿಗಳು ವಿಮುಖರಾಗುತ್ತಿರುವುದಕ್ಕೆ ಇಂಗ್ಲಿಷ್‌ ಎಂಬ ಗಂಟಲಲ್ಲಿಳಿಯದ ಕಡುಬೇ ಕಾರಣ ಎಂಬುದು ವಿಜಯಶಂಕರ್‌ ಅವರ ನಂಬುಗೆ. ಹಾಗಿದ್ದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಮುಟ್ಟಿಸುವುದಾದರೂ ಹೇಗೆ ? ಅದು ಬಹು ಸುಲಭ ; ಉನ್ನತ ತರಗತಿಗಳು ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ವಿಜ್ಞಾನವನ್ನು ಪ್ರಾಂತೀಯ ಭಾಷೆಯಲ್ಲೂ ಬೋಧಿಸಿದರೆ ವಿದ್ಯಾರ್ಥಿಗಳು ವಿಜ್ಞಾನವನ್ನು ಇಷ್ಟಪಟ್ಟಾರು !

ಇಂಗ್ಲಿಷನ್ನು ದೂರವಿಡಿ ಅಥವಾ ಕೈಬಿಡಿ ಎಂದು ವಿಜಯಶಂಕರ್‌ ಹೇಳುವುದಿಲ್ಲ . ಇಂಗ್ಲಿಷ್‌ನೊಂದಿಗೆ ಸ್ಥಳೀಯ ಭಾಷೆಯನ್ನು - ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡವನ್ನು ವಿಜ್ಞಾನದ ಪಾಠ ಹೇಳಲು ಬಳಸಿಕೊಳ್ಳಿ ಎನ್ನುವುದು ಅವರ ಸಲಹೆ.

ದೇಶದಲ್ಲಿನ ಜಿಲ್ಲೆಗಳು ಹಾಗೂ ತಾಲ್ಲೂಕು ಮಟ್ಟಗಳ ಬಹುತೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ವಿಜ್ಞಾನಕ್ಕೆ ನಮಸ್ಕಾರ ಹೇಳುತ್ತಾರೆ. ಆನಂತರ ಅವರ ಆಯ್ಕೆ ಕಲಾ ವಿಭಾಗವಾಗಿರುತ್ತದೆ. ಇದಕ್ಕೆ ಕಾರಣ ಇಂಗ್ಲಿಷು ಎಂದು ಮತ್ತೆ ಬೆಟ್ಟು ತೋರಿಸುತ್ತಾರೆ ವಿಜಯಶಂಕರ್‌. ಅಂದಹಾಗೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಜ್ಞಾನ ಅಧಿವೇಶನದಲ್ಲಿ - ಜನವರಿ 7 ರ ಮಂಗಳವಾರ ವಿಜಯಶಂಕರ್‌ ಮಾತನಾಡುತ್ತಿದ್ದರು.

ವಿಜಯಶಂಕರ್‌ ಭಾಷಣದ ಮುಖ್ಯಾಂಶಗಳನ್ನು ಪಟ್ಟಿ ಮಾಡುವುದಾದರೆ-

  • ದೇಶದಲ್ಲಿ ವಿಜ್ಞಾನದ ಪ್ರಗತಿ ಕುಂಠಿತಗೊಂಡಿರುವುದಕ್ಕೆ ಇಂಗ್ಲಿಷ್‌ ಪ್ರಮುಖ ಕಾರಣವಾಗಿದೆ.
  • ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಬಿಟ್ಟು ಕಲಾ ವಿಭಾಗವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲು ಇಂಗ್ಲಿಷ್‌ ಬೋಧನೆಯೇ ಕಾರಣವಾಗಿದೆ.
  • ಬಹುತೇಕ ಎಲ್ಲ ಇಂಜಿನಿಯರಿಂಗ್‌ ಹಾಗೂ ಮೆಡಿಕಲ್‌ ಕಾಲೇಜುಗಳಲ್ಲಿ ಇಂಗ್ಲಿಷೆ ತುಂಬಿಕೊಂಡಿದೆ. ಕನ್ನಡದಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲಿಷ್‌ ಅರಗಿಸಿಕೊಳ್ಳುವುದು ಕಷ್ಟ . ಆ ಕಾರಣದಿಂದಲೇ ವಿಜ್ಞಾನದ ಸಹವಾಸ ಬೇಡಪ್ಪಾ ಬೇಡ ಎಂದು ಬೇರೆಡೆ ಹೊರಳುತ್ತಾರೆ.
  • ದೇಶದಲ್ಲಿ ವಿಜ್ಞಾನದ ಪ್ರಗತಿ ಹೊಂದಬೇಕಾದರೆ- ಆಯಾಯ ಸ್ಥಳೀಯ ಭಾಷೆಗಳಲ್ಲಿ ವಿಜ್ಞಾನವನ್ನು ಕಲಿಸುವ ಕಾಯ್ದೆ ರೂಪಿಸುವುದು ಅಗತ್ಯ.
  • ಜಪಾನ್‌, ಚೀನಾ, ದಕ್ಷಿಣ ಕೊರಿಯಾ ರಾಷ್ಟ್ರಗಳು ತ್ವರಿತ ಗತಿಯಲ್ಲಿ ವೈಜ್ಞಾನಿಕ ಪ್ರಗತಿ ಸಾಧಿಸುತ್ತಿರುವುದಕ್ಕೆ ಅವುಗಳ ಭಾಷಾ ನೀತಿಯೇ ಕಾರಣ. ಈ ರಾಷ್ಟ್ರಗಳು ವಿಜ್ಞಾನದ ಕಲಿಕೆಗೆ ತಮ್ಮ ಮಾತೃಭಾಷೆಯನ್ನು ಬಳಸುತ್ತವೇ ಹೊರತು- ಇಂಗ್ಲಿಷನ್ನಲ್ಲ .

ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌.ನಾರಾಯಣಮೂರ್ತಿ ಅವರು ಕೂಡ ವಿಜ್ಞಾನ ಅಧಿವೇಶನದಲ್ಲಿ (ಜ.6) ಇಂಥಾದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮುನ್ನ ನಮ್ಮ ಅಭಿವೃದ್ಧಿ ಇಂಗ್ಲಿಷ್‌ನಿಂದಲೇ ಸಾಧ್ಯ ಎಂದು ಸಾರಿದ್ದ ನಾರಾಯಣಮೂರ್ತಿ, ಇದೇ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನವನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಈಗ ವಿಜಯಶಂಕರ್‌ ಸರದಿ.

‘ಕನ್ನಡದ ಕಣ್ವ’ ಎಂದು ಹೆಸರಾದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರು ಹೇಳಿದ್ದುದೂ ಇದನ್ನೇ. ಬಿಎಂಶ್ರೀ ಅವರ ಮಾತನ್ನು ಇನ್ನೊಮ್ಮೆ ನೆನೆಯೋಣ :

‘ಕನ್ನಡ ನಾಡಿಗೆ ಕನ್ನಡವೇ ಗತಿ ; ಅನ್ಯಥಾ ಶರಣಂ ನಾಸ್ತಿ .’

(ಇನ್ಫೋ ವಾರ್ತೆ/ಪಿಟಿಐ)

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more