ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಂತ್ರಿಕ ಲೇಖಕ ಮಾರ್ಕ್ವೆಜ್‌ನ ಸನ್ನಿಧಿಯಲ್ಲಿ

By Staff
|
Google Oneindia Kannada News
  • ಎಸ್‌.ದಿವಾಕರ್‌, ಚೆನ್ನೈ
ಕನ್ನಡದ ಓದುಗರು ಇಂದ್ರನ್‌ ಅಮೃತನಾಯಗಂ ಅವರನ್ನು ಬಹುಶಃ ಮರೆತಿರಲಾರರು. ಹತ್ತಾರು ತಿಂಗಳು ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ಬೆಳದಿಂಗಳ ಭಾಷಾಂತರ’ ಎಂಬ ಶೀರ್ಷಿಕೆಯಲ್ಲಿ ಅಂಕಣ ಬರೆದದ್ದುಂಟು. ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಎರಡೂ ಭಾಷೆಗಳಲ್ಲಿ ಪ್ರಸಿದ್ಧ ಕವಿಯಾಗಿರುವ, ಸದ್ಯ ಮೆಕ್ಸಿಕೋದ ಮಾಂಟೆರೆ ನಗರದಲ್ಲಿರುವ ಇಂದ್ರನ್‌ ಇದೀಗ ಸುದ್ದಿಯಲ್ಲಿರುವುದು ಒಂದು ವಿಶೇಷ ಕಾರಣಕ್ಕೆ. ಕೇವಲ 15 ದಿನಗಳ ಹಿಂದೆ ಅವರು ಜಗದ್ವಿಖ್ಯಾತ ಲೇಖಕನನ್ನು ಭೇಟಿಯಾಗಿದ್ದರು. 20ನೇ ಶತಮಾನದ ಉತ್ತರಾರ್ಧದಲ್ಲಿ ಜಗದ್ವಿಖ್ಯಾತ ಲೇಖಕ ಎಂದರೆ ಬೇರೆ ಯಾರಿದ್ದಾರು ? ಅವರೇ ‘ಲವ್‌ ಇನ್‌ ದಿ ಟೈಮ್‌ ಆಫ್‌ ಕಾಲರಾ’ ಕೃತಿಯ ಕತೃ ಗೇಬ್ರಿಯಲ್‌ ಮಾರ್ಕ್ವೆಜ್‌.

Gabriel Marquezಕಳೆದ ವರ್ಷ ನಾನು ಅಯೋವಾ ವಿಶ್ವ ವಿದ್ಯಾಲಯಕ್ಕೆ ಹೋಗಿದ್ದಾಗ ಹಲವು ದೇಶಗಳಿಂದ ಅಲ್ಲಿಗೆ ಬಂದಿದ್ದ ಲೇಖಕರು ಮಾರ್ಕ್ವೆಜ್‌ ಹೆಸರೆತ್ತಿದರೆ ಸಾಕು, ಸಂಭ್ರಮಿಸುತ್ತಿದ್ದರು. ಒಬ್ಬನಂತೂ ಆತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆಂದು ಅತ್ತೇಬಿಟ್ಟ . ಅದೇ ಸಮಯದಲ್ಲಿ ಮಾರ್ಕ್ವೆಜ್‌ ನೆನಪುಗಳ ಮೊದಲ ಸಂಪುಟ ಕೊಲಂಬಿಯಾದಲ್ಲಿ ಬಿಡುಗಡೆಯಾದದ್ದೂ, ಎಂಟೇ ದಿನಗಳಲ್ಲಿ ಅದರ ಲಕ್ಷಾಂತರ ಪ್ರತಿಗಳು ಮಾರಾಟವಾದದ್ದೂ ಅಮೆರಿಕನ್‌ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು .

ಅದಕ್ಕಿಂತ ಮಿಗಿಲಾಗಿ ಕಂಡದ್ದೆಂದರೆ ಪುಸ್ತಕದ ಪ್ರತಿಗಳನ್ನು ತುಂಬಿಕೊಂಡ ಎರಡು ಟ್ರಕ್ಕುಗಳು ಅವುಗಳನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಾಗಿಸುತ್ತಿದ್ದವಂತೆ. ಮಾರ್ಗ ಮಧ್ಯದಲ್ಲಿ ಬಂದೂಕು ಹಿಡಿದವರ ಗುಂಪೊಂದು ಆ ಟ್ರಕ್ಕುಗಳನ್ನು ಮುತ್ತಿಕೊಂಡು ಎಲ್ಲ ಪುಸ್ತಕಗಳನ್ನೂ ಕೊಳ್ಳೆ ಹೊಡೆಯಿತಂತೆ. ಅವರೆಲ್ಲ ಅವನ ಓದುಗರು. ಪುಸ್ತಕ ಕೊಳ್ಳಲಾರದ ಬಡವರು. ನಮ್ಮ ಕಾಲದಲ್ಲಿ ಒಬ್ಬ ಲೇಖಕನಿಗೆ ಸಲ್ಲಿಸುವ ಗೌರವವೆಂದರೆ ಇದಲ್ಲವೆ ?

ಕಳೆದ ಏಳೆಂಟು ವರ್ಷಗಳಲ್ಲಿ ಮಾರ್ಕ್ವೆಜ್‌ ಹೊರಗೆ ಕಾಣಿಸಿಕೊಂಡದ್ದೇ ಅಪರೂಪ. ಅವರ ಈಚಿನ ಚಿತ್ರ ಕೂಡ ಎಲ್ಲಿಯೂ ಕಾಣಿಸಿದಂತಿಲ್ಲ , ಅಲ್ಲವೆ ? ಇಂಥ ಎಲ್ಲರಂತಲ್ಲದ ಲೇಖಕ ಮಾರ್ಕ್ವೆಜ್‌ ಅವರನ್ನು ಇಂದ್ರನ್‌ ಮಾತಾಡಿಸಿ ಬಂದಿದ್ದಾರೆ. ಅಮೃತ ಘಳಿಗೆ ಎಂದರೆ ಅದಲ್ಲವೆ !?

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X