ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನ ಒಡವೆ ಎಂಬುದು ಜ್ಞಾನ ರತ್ನ !

By Staff
|
Google Oneindia Kannada News
  • ರಾಜಶೇಖರ್‌ ಹಿರೇಮಠ್‌, ಬೆಂಗಳೂರು.
    [email protected]
‘ಏನಿರ್ದಡೇನು ನಿಜಬೋಧೆಯಾಂದಿಲ್ಲದಿರೆ ಕಾನನದ ಬೆಳದಿಂಗಳಂತೆ ನಿಷ್ಫಲವು’
- ಸರ್ಪಭೂಷನ ಶಿವಯೋಗಿಗಳು

ಏನಿದ್ದರೇನು ? ಅಪಾರ ಆಸ್ತಿ ಇರಬಹುದು - ಅಂತಸ್ತು ಇರಬಹುದು - ಹೆಸರಿರಬಹುದು - ಆದರೆ ಆ ಮನುಷ್ಯನಿಗೆ ನಿಜಬೋಧೆ ಇಲ್ಲದಿದ್ದರೆ-ಭಗವತ್‌ ಚಿಂತನೆ ಮಾಡದಿದ್ದರೆ - ಗುರು ಅನುಗ್ರಹ ಇಲ್ಲದಿದ್ದರೆ , ಆ ಮನುಷ್ಯನ ಬಾಳು ಹಾಳು. ನಾವು ಜ್ಞಾನದಿಂದಲ್ಲದೆ ಬೇರೆ ಬಾಹ್ಯ ವಸ್ತುಗಳಿಂದ ನಮ್ಮ ಬದಕನ್ನ ಸಿಂಗರಿಸಿದರೆ ಆ ಒಂದು ಸಿಂಗಾರ ಹೆಣಕ್ಕೆ ಮಾಡಿದ ಸಿಂಗಾರವೆನ್ನುತ್ತಾರೆ ನಮ್ಮ ಶರಣರು.

ಮನುಷ್ಯನಿಗೆ ಗಾಳಿ -ನೀರು-ಆಹಾರ ಹೇಗೆ ಬೇಕೋ ಹಾಗೆ ಒಂದಿಷ್ಟು ಆಧ್ಯಾತ್ಮ ಚಿಂತನೆಯೂ ಬೇಕು. ಸತ್ಸಂಗ ಬೇಕು . ಶರಣರ ಅನುಭಾವದ ನುಡಿಗಳು ಕಿವಿಗೆ ಬೀಳಬೇಕು . ಹೆಣ್ಣು-ಮಣ್ಣು-ಹೊನ್ನಿನ ಹಿಂದೆ ಓಡುವ ಮನುಷ್ಯ ಸ್ವಲ್ಪ ಹೊತ್ತಾದರೂ ಜ್ಞಾನವೃಕ್ಷದ ಕೆಳಗೆ ನಿಂತು ಅನುಭಾವದ ಮಾತೆಂಬ ನೆರಳಿನಿಂದ ದಣಿವನ್ನ ಆರಿಸಿಕೊಳ್ಳಬೇಕು...

Rajashekhar Hiremath, Bangaloreಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ
ಜ್ಯೋತಿಯಬಲದಿಂದ ತಮಂಧದ ಕೇಡ ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯ
ಪರುಷದ ಬಲದಿಂದ ಅವಲೋಹದ ಕೇಡ, ನೋಡಯ್ಯ
ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ
ಎನ್ನ ಮನದ ಕೇಡ ನೋಡಯ್ಯ

ನಮ್ಮ ಮನದ ಕೇಡ ನೋಡಲು ಶರಣರ ಹಿತನುಡಿಗಳು ಬಾಳಿಗೆ ಬೇಕು. ಆ ತತ್ವಗಳನ್ನು ಬಾಳಿನಲ್ಲಿ ಅಳವಡಿಸಿದ್ದೇ ಆದರೆ ನಮ್ಮ ಬಾಳು ಶ್ರೀಮಂತವಾಗುತ್ತದೆ.

ಭೂಮಿ ನಿನ್ನದಲ್ಲ , ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ,
ಇದು ಜಗಕೆ ಇಕ್ಕಿದಾ ಮಾಯೆ
ನಿನ್ನ ಒಡವೆ ಎಂಬುದು ಜ್ಞಾನ ರತ್ನ
ಅಂತಪ್ಪ ರತ್ನವ ಕೆಡಗೊಡದೆ
ನೀ ಅಲಂಕರಿಸಿದ್ದೇಯಾದೊಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ
ನಿನ್ನಿಂದಧಿಕ ಸಿರಿವಂತರಿಲ್ಲ, ಕೇಳಾ ಎಲೆ ಮನವೆ

ಅಂಥ ಒಬ್ಬ ಸಿರಿವಂತನಾಗುವ ಸುಸಂಧಿ ಈಗ ಬೆಂಗಳೂರಿನ ಜನತೆಗೆ ಒದಗಿ ಬಂದಿದೆ. ಕನ್ನಡ ನಾಡಿನ ಹೆಸರಾಂತ ಅನುಭಾವಿ -ಜ್ಞಾನಯಾಗಿ , ಈ ಯುಗದ ಋಷಿ - ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಈಗ ಬೆಂಗಳೂರಿನಲ್ಲಿ ಒಂದು ತಿಂಗಳಕಾಲ ಪ್ರವಚನ ಮಾಡಲಿದ್ದಾರೆ .

ಸ್ಥಳ : ಸೆಂಟ್ರಲ್‌ ಕಾಲೇಜ್‌ ಕ್ರಿಕೆಟ್‌ ಮೈದಾನ - ಹಳೆ ಸೆಂಟ್ರಲ್‌ ಜೇಲ್‌ ಹಿಂದೆ - ಗಾಂಧಿನಗರ
ಸಮಯ : ಸಾಯಂಕಾಲ 6.00 - 7.00 ( ಡಿಸೆಂಬರ್‌ 1 ರಿಂದ ಡಿಸೆಂಬರ್‌ 30 , 2003)

ಶ್ರೀಗಳು ಕನ್ನಡ ನಾಡಿನ ಜನತೆಗೆ ಚಿರಪರಿಚಿತ. ನಾಡಿನುದ್ದಗಲಕ್ಕೂ ಅವರ ಪ್ರವಚನಗಳು ನಡೆದಿವೆ. ಅವರ ‘ಭಗವತ್‌ ಚಿಂತನೆ’ , ‘ಸತ್ಯಾನ್ವೆಷನೆ’ ಪುಸ್ತಕಗಳು ಜನಪ್ರಿಯ . ಅವರ ‘ಬದುಕುವುದ ಹೇಗೆ’ ಎಂಬ ಧ್ವನಿ ಸುರಳಿ - ಉತ್ತರ ಕರ್ನಾಟಕದ ಮನೆ ಮಾತು .

ಏನೀ ಪ್ರಪಂಚ ?

ಈ ಬಾಳಿನರ್ಥ ಏನು? ಏತಕ್ಕೆ ಈ ಓಟ ? ಏಲ್ಲಿಗೆ ಈ ಪಯಣ ? .

ಮಾನವನಾಗಿ ಹುಟ್ಟಿದ ನಾವು ನಿಜವಾಗಿಯೂ ಮಾನವರಂತೆ ಬದುಕುತ್ತಿದ್ದೇವೆಯೇ ? ಬದುಕುವುದು ಒಂದು ಕಲೆ - ಆ ಕಲೆಯನ್ನು ಹೇಗೆ ಕಲಿಯುವುದು ? ಅದು ಅಷ್ಟು ಸುಲಭವೆ ? ದೇವರು ಎಂದರೆ ಯಾರು ? ದೇವರಿದ್ದಾನೆಯೇ ? ಇದ್ದರೆ ಎಲ್ಲಿರುವನಾತ ? ಮುಕ್ತಿ ಅಂದರೇನು ? . ಇಂಥ ಹಲವಾರು ಪ್ರಶ್ನೆಗಳು ಮಾನವನನ್ನು ಶತ ಶತಮಾನಗಳಿಂದ ಕಾಡುತ್ತಲಿವೆ . ಈ ಎಲ್ಲ ಪ್ರಶ್ನೆಗಳಿಗೆ ಒಂದೆ ಉತ್ತರ - ‘ಶಾಸ್ತ್ರಮೇವ ಶರನಮ್‌’.

ಬನ್ನಿ ಬದುಕುವ ಕಲೆಯನ್ನು ಕಲಿಯೋಣ. ಇಲ್ಲಿ ನಾವಿರುವಲ್ಲಿ ಸ್ವರ್ಗವನು ಕಟ್ಟೋಣ. ನಮ್ಮನ್ನು ನಾವು ಅರಿಯೋಣ. ಬದುಕನ್ನು ಶ್ರೀಮಂತಗೊಳಿಸೋಣ.

ತಂತಿಗಳಲ್ಲಿ ಸುನಾದವಿದೆ
ಸೋರೆದಂಡೆಗಳಿಗೆ ಬಿಗಿದಾಗ ಮಾತ್ರ
ಚರ್ಮದಲ್ಲಿ ಸುನಾದವಿದೆ
ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ
ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿ ಇದೆ
ನಾರಿನಿಂದ ಬಿಗಿದಾಗ ಮಾತ್ರ
ಏನಲ್ಲಿಯೂ ನಿನ್ನರಿವ ಶಕ್ತಿ ಇದೆ
ನಿನ್ನಡಿಗಳಿಗೆ ನನ್ನ ಬಿಗಿದಾಗ ಮಾತ್ರ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X