• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್‌ಕನ್ನಡ ರಘುನಾಥ್‌ಗೆ ಕಥಾರಂಗಂ ಪುರಸ್ಕಾರ

By Staff
|

*ದಟ್ಸ್‌ ಕನ್ನಡ ಬ್ಯೂರೊ

Another feather in the crown- Raghunatha Cha.Ha. felicitated with Katharangam Awardಬೆಂಗಳೂರೆಂಬ ಈ ದೊಡ್ಡ ನಗರದಲ್ಲಿ ತಮಿಳರೂ ಕನ್ನಡಿಗರೂ ಜಗಳಾಡುವುದನ್ನು ಕೇಳಿದ್ದೇವೆ. ಗುಜರಾತಿಗಳ ಗಲಾಟೆಗಳಿಗೆ ಕನ್ನಡಿಗರು ರೇಗಿಕೊಳ್ಳುವುದನ್ನೂ ಕಂಡಿದ್ದೇವೆ. ತೆಲುಗರ ಪಾರುಪತ್ಯವನ್ನು ವಿರೋಧಿಸಿ ಆಂದೋಳನಗಳು ನಡೆದುದನ್ನು ಬೆಂಬಲಿಸಿದ್ದೇವೆ. ಆದರೆ ಪರ ಭಾಷೆಯಾಂದು ಕನ್ನಡಕ್ಕೆ ಪುರಸ್ಕಾರ ಕೊಟ್ಟದ್ದನ್ನು ಕಂಡಿದ್ದೀರಾ...?

ನಗರದಲ್ಲಿ ಅಂಥದ್ದೊಂದು ಸುಂದರ- ಸರಳ ಸಮಾರಂಭ ಜೂನ್‌ 1, ಭಾನುವಾರ ನಡೆಯಿತು. ಮಲಯಾಳಂ ಭಾಷಾ ಸಾಹಿತ್ಯ ಸಂಸ್ಥೆಯಾಂದು ಕನ್ನಡ ಸಾಹಿತ್ಯವನ್ನು ಸಾಂಕೇತಿಕವಾಗಿ ಗೌರವಿಸಿತು. ಈ ಸಂಸ್ಥೆಯ ಹೆಸರು ಕಥಾರಂಗಂ.

2002ನೇ ಇಸವಿಯಲ್ಲಿ ಪ್ರಕಟವಾದ ಕನ್ನಡದ ಒಂದು ಉತ್ತಮ ಕಥೆ ಹಾಗೂ ಕವನವನ್ನು ಆಯ್ದು ಪ್ರಶಸ್ತಿ ನೀಡಲಾಯಿತು. ಪೌರಾಡಳಿತ ಸಚಿವ ಕುಮಾರ ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣ ಮೂರ್ತಿ ಮಲಯಾಳಂ ಸಾಹಿತ್ಯ ಸಂಸ್ಥೆ ಕಥಾರಂಗಂನ ಈ ಉದಾರತೆಯನ್ನು ಪ್ರಶಂಸಿಸಿ ಮಾತನಾದ್ದು ಹೀಗೆ:

  • ಮಲಯಾಳಂನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂವೇದನೆಗಳು ಹೊಸ ವಿಚಾರಗಳ ಕೊಡು ಕೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತಿವೆ. ಬೆಂಗಳೂರಿನಲ್ಲಿರುವ ಮಲಯಾಳೀ ಸಮುದಾಯ ತಮ್ಮದೇ ಆದ ಸಂಘವೊಂದನ್ನು ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಕೇಂದ್ರಿತವಾಗಿರುವುದರ ಬದಲು ಸೋದರೀ ಭಾಷೆಯನ್ನು ಗೌರವಿಸುತ್ತಿರುವುದು ಶ್ಲಾಘನೀಯ.
  • ಕೆಲವು ಭಾಷೆಗಳ ಸ್ವಭಾವವೇ ಹಾಗಿರುತ್ತದೆ. ಉದಾಹರಣೆಗೆ ತಮಿಳನ್ನೇ ತೆಗೆದುಕೊಳ್ಳಿ. ಅದು ಏನಿದ್ದರೂ ತನ್ನದೇ ಆದ ಸಂಭ್ರಮದಲ್ಲಿ, ಭಾಷಾ ಚರಿತ್ರೆಯನ್ನು ತಾನೇ ಹೊಗಳಿಕೊಳ್ಳುವುದರಲ್ಲಿ ಹೆಮ್ಮೆ ಪಟ್ಟುಕೊಳ್ಳುತ್ತದೆಯೇ ಹೊರತು ಕೊಡು ಕೊಳ್ಳುವಿಕೆಯತ್ತ ಅದು ಗಮನ ಹರಿಸುವುದಿಲ್ಲ.
  • ಭಾಷಾ ಸಾಮರಸ್ಯ ಇಂದಿನ ಅಗತ್ಯವಾಗಿರುವಾಗ ಹಾಗೂ, ರಾಜಕೀಯ ವಲಯವು ಭಾಷಾ ಹಾಗೂ ಧರ್ಮ ವೈವಿಧ್ಯವನ್ನು ಏಕರೂಪಗೊಳಿಸಲು ಯತ್ನಿಸುತ್ತಿರುವಾಗ ಕಥಾರಂಗಂ ಮಾಡುತ್ತಿರುವ ಕಾರ್ಯ ಅತ್ಯಂತ ಪ್ರಸ್ತುತ.
ಕಥಾರಂಗಂನ ಪೋಷಕ ಟಿ. ಮುರಳಿ ಮಾತನಾಡಿ ಭಾಷಾ ಶುದ್ಧತೆ ಹಾಗೂ ಸಾಂಪ್ರದಾಯಿಕ ಮನೋಭಾವವನ್ನು ಬಿಟ್ಟು ಹೊಸ ವಿಚಾರಗಳನ್ನು ಒಪ್ಪಿಕೊಳ್ಳಬೇಕು ಎಂದು ಕರೆ ನೀಡಿದರು.

ದಟ್ಸ್‌ಕನ್ನಡದ ಚ.ಹ.ರಘುನಾಥ್‌ ಕಥೆಗೆ ಪ್ರಶಸ್ತಿ

ದಟ್ಸ್‌ಕನ್ನಡ ಬಳಗದ ಕಥೆಗಾರ ಚ.ಹ. ರಘುನಾಥ ಅವರ ‘ಕಾಡ ನಡುವಿನ ಮಳೆ’ ಬಂಪರ್‌ ಕಥೆ. ವಿಜಯ ಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಿಟ್ಟಿಸಿಕೊಂಡಿದ್ದ ಈ ಕಥೆ ಕಥಾರಂಗಂನ ಪ್ರಶಸ್ತಿಗೂ ಭಾಜನವಾಯಿತು. ಕವಿತಾ ವಿಭಾಗದಲ್ಲಿ ಡಾ. ಎಲ್‌. ಹನುಮಂತಯ್ಯ ಅವರ ‘ಅನಂತ ಸಂತ’ ಕವನ ಹಾಗೂ ಮೇಘನಾಥನ್‌ ಅವರ ಮಲಯಾಳಂ ಪ್ರವಾಸೀ ಕಥನಕ್ಕೂ ಕಥಾರಂಗಂ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಮಲಯಾಳೀ ವಿಮರ್ಶಕ ಬಾಲಚಂದ್ರನ್‌ ವಡಕ್ಕೆಡತ್‌, ಕಥಾರಂಗಂನ ಪೇಟ್ರನ್‌ ಟಿ ಮುರಳಿ, ರಾಬಿನ್‌ ಡಿಕ್ರೂಸ್‌, ಹಾಗೂ ಕಥಾರಂಗಂ ಸಲಹಾ ಸಮಿತಿ ಅಧ್ಯಕ್ಷ ವಿ. ಕೃಷ್ಣನ್‌ ಉಪಸ್ಥಿತರಿದ್ದರು.

ಕಥಾರಂಗಂ ಬಗ್ಗೆ -

ನೌಕರಿ ವರ್ಗಾವಣೆಯನ್ನು ಒಪ್ಪಿಕೊಂಡು ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಬಂದ ಮಲಯಾಳೀ ಕಥೆಗಾರ್ತಿ ಕೆ. ಕವಿತಾ ಹಾಗೂ ಅವರ ಪತಿ ರವೀಂದ್ರನ್‌ ಕಥಾರಂಗಂನ ಸ್ಥಾಪಕರು. ಕನ್ನಡ ಕಲಿಯದೆಯೇ ಕರ್ನಾಟಕದ ಈ ಮಹಾನಗರವನ್ನು ಅರಿತುಕೊಳ್ಳುವುದು ಕಷ್ಟವೆಂದು ಅರಿತ ರವೀಂದ್ರನ್‌ ದಂಪತಿಗಳು, ತಮ್ಮ ಮಗಳು ರಮ್ಯಾಳ ಜೊತೆಗೇ ಒಂದನೇ ಕ್ಲಾಸಿಗೆ ಹೋಗಿ ಕನ್ನಡ ಕಲಿತರು !

ಈ ದಂಪತಿಗಳು ಕಣ್ಣೂರಿನಲ್ಲಿದ್ದಾಗಲೇ ಉದಯೋನ್ಮುಖ ಬರಹಗಾರರನ್ನು ಪುರಸ್ಕರಿಸುವ ಉದ್ದೇಶದಿಂದ ‘ಕಥಾರಂಗಂ’ನ್ನು ಆರಂಭಿಸಿದ್ದರು. ಬೆಂಗಳೂರಿನಲ್ಲಿ ಸಂಸ್ಥೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ.

ಪೂರಕ ಓದಿಗೆ

ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more