ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯು.ಆರ್‌.ಅನಂತಮೂರ್ತಿ

By Staff
|
Google Oneindia Kannada News

Dr. U.R.Anantha Murthy will Preside 69th All India Kannada Sahitya Sammelanaಬೆಂಗಳೂರು: ಫೆಬ್ರವರಿ 14 ರಿಂದ 17 ರವರೆಗೆ ತುಮಕೂರಿನಲ್ಲಿ ನಡೆಯುವ 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ।ಯು.ಆರ್‌.ಅನಂತಮೂರ್ತಿ ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ ಸೇರಿದ ಕಸಾಪದ ಉನ್ನತ ಮಟ್ಟದ ಸಭೆ, ಅನಂತಮೂರ್ತಿ ಅವರನ್ನು ತುಮಕೂರು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಜನಪದ ವಿದ್ವಾಂಸ ಕೆ.ಕರೀಂಖಾನ್‌ ಹಾಗೂ ವಯೋವೃದ್ಧ ಸಾಹಿತಿ ಗೌರೀಶ ಕಾಯ್ಕಿಣಿ ಅವರ ಹೆಸರು ಚರ್ಚೆಗೆ ಬಂದಿತಾದರೂ, ಸಭೆ ಅಂತಿಮವಾಗಿ ಅನಂತಮೂರ್ತಿ ಅವರ ಆಯ್ಕೆಗೆ ಒಲವು ತೋರಿತು.

ಸಾಹಿತ್ಯ ಮಾತ್ರವಲ್ಲದೆ ಪರಿಸರ ಚಳವಳಿಯಲ್ಲೂ ಇತ್ತೀಚೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಂತಮೂರ್ತಿ ಅವರಿಗೆ ಜ್ಞಾನಪೀಠದ ನಂತರ ಸಲ್ಲುತ್ತಿರುವ ಅತಿ ದೊಡ್ಡ ಗೌರವ ಇದಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ‘ದಿವ್ಯ’ ಕಾದಂಬರಿ ಸಾಹಿತ್ಯಿಕ ವಲಯಗಳಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

(ಇನ್ಫೋ ವಾರ್ತೆ)

ಸಪ್ತ ವರ್ಣದ ಅನಂತ ಪ್ರಭಾವಳಿ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X