• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಜೇಮ್ಸ್‌ಬಾಂಡ್‌ ಪತ್ರಿಕೋದ್ಯಮದ ಜಮಾನ-ಮೈಸೂರು ಮಠ

By Staff
|

ಬೆಂಗಳೂರು : ತೆಹಲ್ಕಾ ಪತ್ರಕರ್ತರ ಕಾರ್ಯಶೈಲಿಯನ್ನು ಗಮನಿಸಿದರೆ, ಈ ಹೊತ್ತಿನದು ಜೇಮ್ಸ್‌ಬಾಂಡ್‌ ಮಾದರಿಯ ಪತ್ರಿಕೋದ್ಯಮ ಅನ್ನಲಿಕ್ಕಡ್ಡಿಯಿಲ್ಲ . ಇಂದಿನ ಪ್ರಜಾಪ್ರಭುತ್ವಕ್ಕೆ ಈ ಮಾದರಿಯ ಪತ್ರಿಕೋದ್ಯಮ ಅಗತ್ಯ ಎಂದು ಟಿಎಸ್ಸಾರ್‌ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಎಸ್‌.ಜಿ. ಮೈಸೂರು ಮಠ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸರ್ಕಾರ ಮಂಗಳವಾರ ಪ್ರದಾನ ಮಾಡಿದ ಟೀಎಸ್ಸಾರ್‌ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ರಕ್ಷಣಾ ಅವ್ಯವಹಾರ ಬಯಲು ಆಡಿದ ತೆಹಲ್ಕಾ ಪತ್ರಕರ್ತರನ್ನು ಶ್ಲಾಘಿಸಿದ ಅವರು, ತೆಹಲ್ಕಾದ ಮಿತ್ರರಿಗೆ ಕೇಂದ್ರಸರ್ಕಾರ ಕಿರುಕುಳ ನೀಡಲು ಮುಂದಾಗಿದೆ ಎಂದು ವಿಷಾದಿಸಿದರು.

ತೆಹಲ್ಕಾದ ಪ್ರಯತ್ನದಿಂದ ಸಾರ್ವಜನಿಕ ಜೀವನದಲ್ಲಿ ಪರಿಶುದ್ಧತೆ ಬರಲು ಸಾಧ್ಯವಾದೀತು. ಆದರೆ, ಸಮಾಜ ಅದಕ್ಕೆ ಸಿದ್ಧವಾಗಿದೆಯೇ ಅನ್ನುವುದನ್ನು ಕಾಲವೇ ತೀರ್ಮಾನಿಸಬೇಕು ಎಂದು ಮೈಸೂರುಮಠ ಹೇಳಿದರು.

ಸಾರ್ವಜನಿಕ ವ್ಯವಸ್ಥೆಗೂ ಹೊಡೆತ : ಮೈಸೂರು ಮಠರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ , ತೆಹಲ್ಕಾ ಡಾಟ್‌ ಕಾಮ್‌ ಬಹಿರಂಗ ಪಡಿಸಿದ ರಕ್ಷಣಾ ಅವ್ಯವಹಾರ ಪ್ರಕರಣದಿಂದಾಗಿ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೇ, ಸಾರ್ವಜನಿಕ ವ್ಯವಸ್ಥೆಗೂ ಹೊಡೆತ ಬಿದ್ದಿದೆ ಎಂದು ಹೇಳಿದರು.

ದೇಶದ ಈ ಸ್ಥಿತಿಗೆ ಚುನಾವಣಾ ಪದ್ಧತಿಯೇ ಕಾರಣ. ಯಾಕೆಂದೆರೆ ಅಧಿಕಾರ ಹಿಡಿಯಬೇಕಿದ್ದರೆ ಒಬ್ಬ ವ್ಯಕ್ತಿ ಪಕ್ಷ ಕಟ್ಟಬೇಕು ಅಥವಾ ರಾಜಕೀಯ ಪಕ್ಷವನ್ನು ಅವಲಂಬಿಸಬೇಕು ಎಂದ ಮುಖ್ಯಮಂತ್ರಿಗಳು, ಅಮೆರಿಕಾದಲ್ಲಿರುವಂತೆ ನಮ್ಮಲ್ಲೂ ಪಾರದರ್ಶಕ ಚುನಾವಣಾ ಪದ್ಧತಿ ಜಾರಿಗೆ ಬರಬೇಕು ಎಂದರು.

ಸಮಾರಂಭದಲ್ಲಿ ಮಾತನಾಡಿದ ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್‌ ಅವರು, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅಭಿವೃದ್ಧಿಗೆ ಪಿ. ರಾಮಯ್ಯ ಸಮಿತಿ ವರದಿಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ ಎಂದರು.

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ , ವಾರ್ತಾ ಇಲಾಖೆಯ ನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್‌ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ವತ್ಸಲಾ ವತ್ಸ ಮತ್ತು ನ್ಯಾಯಮೂರ್ತಿ ಎಂ. ರಾಮಕೃಷ್ಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ಇನ್ಪೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more