ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲುದನಿಯ ಚಿಂತಕ ಕೆ.ವಿ.ಸುಬ್ಬಣ್ಣ ಅವರಿಗೆ ಕಾಳಿದಾಸ ಸಮ್ಮಾನ್‌

By Staff
|
Google Oneindia Kannada News

ಬೆಂಗಳೂರು : ಮಲೆನಾಡಿನ ನಿಸರ್ಗ ಚೈತನ್ಯದ ನಡುವೆ ಹೆಗ್ಗೋಡಿನ ಪರಿಸರದಲ್ಲಿ ಸದ್ದಿಲ್ಲದೆ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿರುವ ನಾಡಿನ ಹಿರಿಯ ರಂಗಕರ್ಮಿ, ಮೆಲು ದನಿಯ ಪ್ರಸಿದ್ಧ ಚಿಂತಕ ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಅವರು ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್‌ (2001-02 ನೇ ಇಸವಿಯ) ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸುಬ್ಬಣ್ಣ ಅವರು ಸಲ್ಲಿಸಿರುವ ಮಹತ್ವದ ಸೇವೆಯನ್ನು ಸ್ಮರಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಗ್ಗಾಡಿನಲ್ಲಿ ಸಾಂಸ್ಕೃತಿಕ ಪರಿಸರವನ್ನು ಅನಾವರಣಗೊಳಿಸಿರುವ ಸುಬ್ಬಣ್ಣನವರ ಸಾಧನೆ ಸೇವೆಯನ್ನು ಮಹಾರಾಷ್ಟ್ರ ಸರ್ಕಾರ ಮುಕ್ತಕಂಠದಿಂದ ಶ್ಲಾಘಿಸಿದೆ.

ಪ್ರಸಿದ್ಧ ಕಲಾವಿದರಾದ ಸುಮತಿ ಮುತತ್ಕರ್‌, ಯಾಮಿನಿ ಕೃಷ್ಣಮೂರ್ತಿ ಹಾಗೂ ಜೋಗನ್‌ ಚೌಧರಿ ಅವರೂ ಸುಬ್ಬಣ್ಣನವರೊಂದಿಗೆ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1.5 ಲಕ್ಷ ರುಪಾಯಿ ನಗದು ಹಾಗೂ ಪ್ರಮಾಣ ಪತ್ರವನ್ನು ಹೊಂದಿರುವ ಪ್ರಶಸ್ತಿಯನ್ನು ನವಂಬರ್‌ನಲ್ಲಿ ವಿತರಿಸಲಾಗುವುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X