ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಹನ್‌ರ ‘ನೆನಪುಗಳು’ ಬಗ್ಗೆ ಬರೆದ ಲೇಖಕಿ ಎನ್‌. ಶಶಿರೇಖಾ ಪರಿಚಯ

By Staff
|
Google Oneindia Kannada News

ತುಮಕೂರಿನ ಶ್ರೀಸಿದ್ಧಗಂಗಾ ಕಾಲೇಜಿನಲ್ಲಿ ಬಿ.ಎ. ಮುಗಿಸಿ, ಬೆಂಗಳೂರು ವಿ.ವಿ.ಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ತುಮಕೂರಿನ ವಿದ್ಯೋದಯ ಮತ್ತು ಬೆಂಗಳೂರಿನ ಬಿ.ಎಂ.ಎಸ್‌. ಕಾಲೇಜಿನಲ್ಲಿ ಓದಿ, ಕಾನೂನು ಪದವಿ ಪಡೆದ ಶಶಿರೇಖಾ ಈ ಹೊತ್ತು ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ.

ಕರಾರು ಕಾನೂನಿನಲ್ಲಿ (ಲಾ ಆಫ್‌ ಅಗ್ರಿಮೆಂಟ್ಸ್‌) ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಕಬ್ಬಿಣದ ಕಡಲೆ ಎನಿಸಿದ ಕಾನೂನಿನ ವಿಚಾರಗಳ ಬಗ್ಗೆ ತಿಳಿಗನ್ನಡದಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಇವರು ಬರೆದಿರುವ ಹಲವು ಲೇಖನಗಳು ನಾಡಿನ ಪ್ರಸಿದ್ಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾನೂನಿನ ಬಗ್ಗೆ ಕನ್ನಡದಲ್ಲಿ ಸಮರ್ಥವಾಗಿ ಬರೆಯಬಲ್ಲ ಶಶಿರೇಖಾರ ಹಲವು ಪುಸ್ತಕಗಳೂ ಪ್ರಕಟವಾಗಿವೆ. ‘ಭಾರತ ಸರ್ಕಾರ ಮತ್ತು ರಾಜ್ಯಗಳ ಸಂವಿಧಾನಾತ್ಮಕ ಸಂಬಂಧ’ ಎಂಬ ಇವರ ಪ್ರಬುದ್ಧ ಲೇಖನ ಹ್ಯೂಸ್ಟನ್‌ ವಿಶ್ವಕನ್ನಡ ಸಮ್ಮೇಳದ ‘ದರ್ಶನ’ ಗ್ರಂಥದಲ್ಲಿ ಪ್ರಕಟವಾಗಿದೆ.

ಪ್ರೊ. ಬಿ. ವೆಂಕಟಕೃಷ್ಣಪ್ಪ ಅವರೊಂದಿಗೆ ಇರುವ ಬರೆದ ‘ಭಾರತ ವ್ಯಾವಹಾರಿಕ ಕಾನೂನುಗಳ ಪರಿಚಯ’ (ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಬಲು ಜನಪ್ರಿಯವಾಗಿದೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X