• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗಾಯಣದಲ್ಲಿ ಸುಗ್ಗಿ : ವರ್ಷಪೂರ್ತಿ ಪ್ರತಿ ವಾರಾಂತ್ಯ ರಂಗ ಪ್ರದರ್ಶನ

By Staff
|

ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನ ಸಂಸ್ಕೃತಿ ಕೇಂದ್ರಗಳಲ್ಲೊಂದಾದ ರಂಗಾಯಣದಲ್ಲಿ ಜನವರಿ 26 ರಿಂದ ಪ್ರತಿ ವಾರದ ಕೊನೆಗೆ ರಂಗ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನ ವರ್ಷದುದ್ದಕ್ಕೂ ನಡೆಯುವುದು ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.

ರಂಗಾಯಣ ಸಮುಚ್ಚಯದಲ್ಲಿನ ಚಟುವಟಿಕೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಈ ರಂಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ರಂಗಾಯಣದ ಆವರಣದಲ್ಲಿರುವ ಭೂಮಿಗೀತದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಂಗ ಪ್ರದರ್ಶನ ನಡೆಯಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸನ್ನ ಹೇಳಿದರು.

ಆಧುನಿಕ ರಂಗಭೂಮಿ ಇತಿಹಾಸದಲ್ಲಿಯೇ ಇದೊಂದು ನೂತನ ಪ್ರಯೋಗವಾಗಿದ್ದು , ಇದರಿಂದಾಗಿ ಮೈಸೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸಿದಂತಾಗುತ್ತದೆ. ಜನವರಿ 26 ರಂದು ಶಿವರಾಮ ಕಾರಂತರ ಸರಸಮ್ಮನ ಸಮಾಧಿ ನಾಟಕದೊಂದಿಗೆ ಈ ಪ್ರದರ್ಶನ ಪ್ರಾರಂಭವಾಗಲಿದೆ ಎಂದರು.

ರಂಗಾಯಣದ ಅಂಗಸಂಸ್ಥೆಯಾದ ಶ್ರೀರಂಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಡಾ. ಮೀರಾ ಮೂರ್ತಿ ಅವರ ನೇತೃತ್ವದಲ್ಲಿ ಸಂಸ ಹಾಗೂ ಶ್ರೀಕಂಠೇಗೌಡರ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯ ನಡೆಯಲಿದೆ. ರಂಗಾಯಣದ ಚಟುವಟಿಕೆಗಳನ್ನು ಬಿಂಬಿಸುವ ಮಾಸ ಪತ್ರಿಕೆ ಹಾಗೂ ಗ್ರಾಮೀಣ ಕುಶಲಿಗರ ವಸ್ತುಗಳನ್ನು ಮಾರಾಟ ಮಾಡುವ ಕುಟೀರ ಎನ್ನುವ ಕೇಂದ್ರ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಪ್ರಸನ್ನ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more