• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಮೀನಾರಾಯಣ ಭಟ್ಟರಿಗೆ ಪ್ರತಿಷ್ಠಿತವರ್ಧಮಾನ ಪ್ರಶಸ್ತಿಯ ಗರಿ

By Staff
|

Prof. N.S. Laxminarayan Bhatಮೂಡಬಿದರೆ : ಕನ್ನಡದ ಭಾವಗೀತೆ ಜಗತ್ತನ್ನು ಶ್ರೀಮಂತಗೊಳಿಸಿದ ಕವಿಗಳಲ್ಲೊಬ್ಬರಾದ ‘ಸೀಮಂತಿನಿ’ಯ ಕವಿ ಡಾ.ಎನ್‌.ಎಸ್‌.ಲಕ್ಮೀನಾರಾಯಣ ಭಟ್ಟ ಹಾಗೂ ಪುತಿನ ಅವರಿಂದ ಹೊಗಳಿಸಿಕೊಂಡ ಕವಿ ಎಸ್‌.ಮಂಜುನಾಥ್‌ ಅವರಿಗೆ 1999-2000 ಇಸವಿಯ ಪ್ರತಿಷ್ಠಿತ ವರ್ಧಮಾನ ಪ್ರಶಸ್ತಿ ದೊರೆತಿದೆ. ಮೂಡಬಿದರೆಯ ವರ್ಧಮಾನ ಪ್ರಶಸ್ತಿ ಪೀಠ ಈ ಪ್ರಶಸ್ತಿಗಳನ್ನು ನೀಡುತ್ತಿದೆ.

ಅರುಣಗೀತೆ(1995) ಕವನ ಸಂಕಲನಕ್ಕಾಗಿ ಲಕ್ಷ್ಮೀನಾರಾಯಣ ಭಟ್ಟರಿಗೆ ವರ್ಧಮಾನ ಪ್ರಶಸ್ತಿ ದೊರೆತಿದ್ದರೆ, ನಂದಬಟ್ಟಲು (1995) ಕವನಸಂಕಲನಕ್ಕಾಗಿ ಎಸ್‌.ಮಂಜುನಾಥ್‌ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗಿದೆ.

ಅಕ್ಯೋಬರ್‌ 18 ರಂದು ಮೂಡಬಿದರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪೀಠದ ಗೌರವ ನಿರ್ದೇಶಕ ಡಾ.ನಾ.ಮೊಗಸಾಲೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೌರವ ಸಂಭಾವನೆ, ತಾಮ್ರಪತ್ರ ಹಾಗೂ ಸ್ಮರಣಿಕೆಯನ್ನು ಹೊಂದಿರುವ ವರ್ಧಮಾನ ಪ್ರಶಸ್ತಿಗಳನ್ನು 1979 ರಿಂದಲೂ ನೀಡಲಾಗುತ್ತಿದೆ.

ಪ್ರಶಸ್ತಿ ವಿಜೇತರ ಕಿರು ಪರಿಚಯ

ಎನ್‌.ಎಸ್‌. ಲಕ್ಷ್ಮೀ ನಾರಾಯಣ ಭಟ್ಟ : ಜನನ, ವಿದ್ಯಾಭ್ಯಾಸ ಮೈಸೂರಿನಲ್ಲಿ . ಬೆಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ, ನಿವೃತ್ತರು. 12 ಕವನ ಸಂಕಲನ, 6 ಭಾವಗೀತೆ ಸಂಕಲನ, 6 ವಿಮರ್ಶಾ ಕೃತಿ, 5 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ , ಭಾರ್ಗವ ಪ್ರಶಸ್ತಿ , ಆರ್ಯಭಟ ಪ್ರಶಸ್ತಿ , ಡಾ.ಶಿವರಾಮ ಕಾರಂತ ಪ್ರಶಸ್ತಿ ಇತ್ಯಾದಿ ಗೌರವ ಹೊಂದಿದ್ದಾರೆ. ಅಮೆರಿಕದ ವಿವಿಧ ಭಾಗಗಳಲ್ಲಿ ಸಾಹಿತ್ಯ ಉಪನ್ಯಾಸ ನೀಡಿದ್ದಾರೆ. ಅನುವಾದದಲ್ಲೂ ಪಳಗಿದವರು.

ಎಸ್‌.ಮಂಜುನಾಥ್‌ : ಹಕ್ಕಿಪಲ್ಟಿ ಕವನಸಂಕಲನದ ಮೂಲಕ ಕಾವ್ಯಾಸಕ್ತರ ಗಮನ ಸೆಳೆದ ಎಸ್‌.ಮಂಜುನಾಥ್‌ ದೂರವಾಣಿ ಇಲಾಖೆಯ ಉದ್ಯೋಗಿ. ಇಂಗ್ಲೀಷ್‌ ಸ್ನಾತಕೋತ್ತರ ಪದವೀಧರ. ದಾವ್‌ ದ ಜಂಗ್‌ ಕವನಗಳ ಮೂಲಕ ಅನುವಾದದಲ್ಲೂ ಎತ್ತಿದ ಕೈ ಎನಿಸಿಕೊಂಡವರು. ಮಂಜುನಾಥ್‌ರ ಮೌನದ ಮಣಿ ಸಂಕಲನಕ್ಕೆ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪ್ರಶಸ್ತಿ ದೊರೆತಿದೆ.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more