• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಡಿಯಲ್ಲಿ ಉಡುಗಿ ಹೋಗುತ್ತಿದೆ ಕನ್ನಡ : ಡಾ. ಗೋಪಾಲರಾವ್‌

By Staff
|

ಶಿವಗಂಗೆ : ಆಲೂರು ವೆಂಕಟರಾಯರಿಂದ ಆರಂಭಿಸಿ, ನಿಜಲಿಂಗಪ್ಪನವರವರೆಗೆ ಅನೇಕ ಕನ್ನಡ ಕಟ್ಟಾಳುಗಳ ಹೋರಾಟದ ಫಲವೇ ಈಗಿನ ಕರ್ನಾಟಕ. ಆದರೂ, ಕರ್ನಾಟಕ ಇನ್ನೂ ಒಂದಾಗಿಲ್ಲ. ಬೆಳಗಾವಿ ನಮಗೆ ಸೇರಬೇಕೆಂದು ಮಹಾರಾಷ್ಟ್ರ ರಾಜಕಾರಣಿಗಳು ಹುಯಿಲೆಬ್ಬಿಸುತ್ತಿದ್ದಾರೆ.

ಮಹಾಜನ್‌ ಆಯೋಗ ವರದಿಯನ್ನು ಮಹಾರಾಷ್ಟ್ರ ಸರಕಾರ ಒಪ್ಪುತಿಲ್ಲ. ಇಂತಹ ವಿರೋಧಗಳನ್ನೇ ಮಂಡಿಸುವುದಾದರೆ, ಆಯೋಗದ ರಚನೆಯ ಅವಶ್ಯಕತೆಯಾದರೂ ಏನು? ಎಂದು ಇತಿಹಾಸ ತಜ್ಞ ಡಾ. ಎಚ್‌.ಎಸ್‌. ಗೋಪಾಲ್‌ರಾವ್‌ ಪ್ರಶ್ನಿಸಿದ್ದಾರೆ.

ನನ್ನ ಬನವಾಸಿ : ಶನಿವಾರ ಶಿವಗಂಗೆಯಲ್ಲಿ ನಡೆದ ನೆಲಮಂಗಲ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡಿದ ಗೋಪಾಲ ರಾವ್‌ ಅವರು, ತಾವು ಓದಿ ಬೆಳೆದ ಶಿವಗಂಗೆಯ ಐತಿಹ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾರವನ್ನು ಬಿಚ್ಚಿಟ್ಟರು. ಬಾಲ್ಯದ ನೆನಹು ಸ್ಮೃತಿಫಟಲದಲ್ಲಿ ಒತ್ತಿರುವ ನಿರಂತರ ಅಚ್ಚು. ಪಂಪನಿಗೆ ಬನವಾಸಿ ಹೇಗೋ, ನನಗೆ ಶಿವಗಂಗೆ ಹಾಗೆ. ಆದರೆ, ಪಂಪನಂತೆ ನಾನು ಮುಂದಿನ ಜನ್ಮದಲ್ಲಿ ಮರಿದುಂಬಿಯಾಗಿ ಇಲ್ಲಿ ಹುಟ್ಟಲು ಒಲ್ಲೆ. ಈ ಜನ್ಮದಲ್ಲೇ ಅದರ ಸಾರ ಹೀರುವ ಬಯಕೆ ನನ್ನದು ಎಂದರು.

ಶಿಕ್ಷಣದ ವ್ಯಾಪಾರೀಕರಣದ ಹಾದಿಯಲ್ಲಿ ಆಂಗ್ಲ ಶಾಲೆಗಳಿಗೆ ಅನುಮತಿ ಕೊಡುತ್ತಾ ಬಂದಿರುವ ಸರ್ಕಾರದ ನಿಲವಿನ ಬಗ್ಗೆ ಗೋಪಾಲ್‌ರಾವ್‌ ವಿಷಾದ ವ್ಯಕ್ತಪಡಿಸಿದರು. ಮನೆಮಟ್ಟಿಗಾದರೂ ಕನ್ನಡ ಮಾತಾಡುತ್ತಿರುವ ಗಡಿ ಭಾಗದ ಜನ, ಅಗತ್ಯಕ್ಕೆ ಕಟ್ಟು ಬಿದ್ದು ಅದನ್ನೂ ಮರೆಯುವ ಭಯವಿದೆ. ಹಾಗಾಗದಂತೆ ನಾವು ನೋಡಿಕೊಳ್ಳುಬೇಕೆಂದು ಕರೆಕೊಟ್ಟರು.

ಸಾಹಿತ್ಯ ಸೌಧ : ಸಮ್ಮೇಳನದ ಉದ್ಘಾಟನಾ ಭಾಷಣಾ ಮಾಡಿದ ನೆಲಮಂಗಲ ಶಾಸಕ ಆಂಜನಮೂರ್ತಿ ಅವರು ತಾಲೂಕಿಗೆ ಒಂದು ಸಾಹಿತ್ಯ ಸೌಧ ಕಟ್ಟಲು ಬೇಕಾದ ಸವಲತ್ತು ನೀಡುವುದಾಗಿ ಭರವಸೆ ನೀಡಿದರು.

ಮುಂಜಾನೆ ಹತ್ತು ಗಂಟೆಗೆ ಕಂಬಾಳು ಸಂಸ್ಥಾನ ಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ಮಾಡಿದರು. ರೇಣುಕಾ ಜಯಂತಿ ಹಾಗೂ ಸಮ್ಮೇಳನದ ಆಚರಣೆ, ಕರಿ ಆನೆ ಮಠದಿಂದ ಗಂಗಾಧರೇಶ್ವರ ದೇಗುಲದವರೆಗೆ ಮೆರವಣಿಗೆಯಾಂದಿಗೆ ಪ್ರಾರಂಭವಾಯಿತು.

ಡಾ. ಎಂ. ಚಿದಾನಂದ ಮೂರ್ತಿ, ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವಿ. ಶ್ರೀನಿವಾಸ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್‌. ಬಸವಾರಾಧ್ಯ ಮುಖ್ಯ ಅತಿಥಿಗಳಾಗಿದ್ದರು. ಹಂಪಿ ಕನ್ನಡ ವಿ.ವಿ. ಕುಲಸಚಿವ ಮಲ್ಲೇಪುರಂ ಜಿ. ವೆಂಕಟೇಶ್‌, ಸಾಹಿತಿ ಪ್ರೊ. ಸುಧಾಕರ ಮೊದಲಾದವರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು. ಭಾವೈಕ್ಯತಾ ಧರ್ಮಗೋಷ್ಠಿ, ಸಾಹಿತ್ಯ ಹಾಗೂ ಕವಿಗೋಷ್ಠಿಗಳು ನಡೆದವು.

(ನಮ್ಮ ಸಾಹಿತ್ಯ ವರದಿಗಾರರಿಂದ)

ವಾರ್ತಾಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more