• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳಿಗೆ ಕಥೆ ಹೇಳಲು ಬರದ ಅಮ್ಮ- ನರಹಳ್ಳಿ ಬಾಲಸುಬ್ರಹ್ಮಣ್ಯಂ ವಿಷಾದ

By Staff
|

ಕುಮಟಾ : ಪ್ರತಿಷ್ಠೆ , ವಿಚಾರ, ಸಿದ್ಧಾಂತ ಮುಂತಾದ ಬಿಕ್ಕಟ್ಟುಗಳ ಬೌದ್ಧಿಕ ದುರಹಂಕಾರ ಜೀವನ ಪ್ರೀತಿಯನ್ನು ಆಳುತ್ತಿದೆ. ಈ ಕಾರಣದಿಂದಾಗಿಯೇ ಇವತ್ತಿನ ಅಮ್ಮನಿಗೆ ಮಗುವಿಗೆ ಕಥೆ ಹೇಳಲು ಬರುವುದಿಲ್ಲ , ಕಥೆ ಹೇಳಿಸುವ ತಾಕತ್ತೂ ಮಗುವಿಗೆ ಇರುವುದಿಲ್ಲ ಎಂದು ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ವಿಷಾದಿಸಿದ್ದಾರೆ.

ಕುಮಟಾದಲ್ಲಿನ ಶಿಕ್ಷಕ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ‘ಅವನ ಜಗತ್ತಿನ ಹಗಲು’ ಕಥಾ ಸಂಕಲವನ್ನು ಬಿಡುಗಡೆ ಮಾಡಿ ನರಹಳ್ಳಿ ಮಾತನಾಡುತ್ತಿದ್ದರು.

ಮನುಷ್ಯ ಕನಸುಗಳನ್ನು ಸದಾ ಕಾಣುತ್ತಿರಬೇಕು ಹಾಗೂ ಅವುಗಳು ಕಮರಿಹೋಗದಂತೆ ಜಾಗೃತನಾಗಿರಬೇಕು. ಕನಸುಗಳು ವಾಸ್ತವದ ನೆಲೆಗಟ್ಟಿನಲ್ಲಿರಬೇಕು ಎಂದು ನರಹಳ್ಳಿ ಹೇಳಿದರು. ಕೊಡ್ಲೆಕೆರೆ ಅವರ ಕಥಾ ಸಂಕಲನ ಉತ್ಕಟ ಜೀವನಪ್ರೀತಿ ಹಾಗೂ ನಾಟಕೀಯ ಅಂಶಗಳಿಂದ ಕೂಡಿದ್ದು ಗಮನಾರ್ಹ ಸಂಕಲನವಾಗಿದೆ ಎಂದು ಪುಸ್ತಕದ ಬಗ್ಗೆ ಮಾತನಾಡಿದ ಪ್ರೊ. ಟಿ.ಜಿ. ಭಟ್‌ ಹಾಸಣಗಿ ಹೇಳಿದರು.

ಪ್ರೊ.ಎನ್‌.ಜಿ. ಪ್ರಕಾಶ್‌, ಕುಮಟಾ ಪತ್ರಕರ್ತರ ಸಂಘದ ಅಧ್ಯಕ್ಷ ಆರ್‌.ಜಿ.ಹೆಗಡೆ, ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more