ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕನ್ನಡ ನಾಮಫಲಕಗಳಿಗೆ ಹೈಕೋರ್ಟ್‌ ಬೆಂಬಲ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿರುವ ಅಂಗಡಿ ಮುಂಗಟ್ಟುಗಳು, ಶಾಪಿಂಗ್‌ ಸೆಂಟರ್‌ಗಳ ನಾಮಫಲಕಗಳನ್ನು ಕನ್ನಡದಲ್ಲಿ ಸ್ಪಷ್ಟವಾಗಿ ಬರೆದಿರಬೇಕು ಎಂಬ ವಾದಕ್ಕೆ ಈಗ ರಾಜ್ಯ ಹೈಕೋರ್ಟ್‌ನ ಬೆಂಬಲ ಸಿಕ್ಕಿದೆ.

ಬೆಳಗಾವಿಯ ಲಕ್ಷ್ಮಣ್‌ ಒಮಾನ್ನ ಭಾಮನೆ ಎಂಬಾತ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವ 24-ಎ ಕಾಯ್ದೆಯನ್ನು ಸಮರ್ಥಿಸಿದೆ. ಲಕ್ಷ್ಮಣ್‌ ಮೂಲತಃ ಮರಾಠಿಯವರಾಗಿದ್ದು , ತಮ್ಮ ಉದ್ಯಮ ವ್ಯವಹಾರಗಳು ಮರಾಠಿ ಮಾತಾಡುವವರೊಂದಿಗೆ ಹೆಚ್ಚಾಗಿ ನಡೆಯುವುದರಿಂದ ಮರಾಠಿಯಲ್ಲಿಯೇ ಉದ್ಯಮದ ನಾಮಫಲಕ ಅಳವಡಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಭಾರತೀಯ ಸಂವಿಧಾನದ ಮಾತೃಭಾಷೆಗೆ ಸಂಬಂಧಿಸಿದ ಅನುಚ್ಛೇದ 29ರ ಪ್ರಕಾರ ತನಗೆ ಮರಾಠಿ ಬೋರ್ಡ್‌ ಹಾಕಿಕೊಳ್ಳುವ ಅವಕಾಶದಿಂದ ವಂಚಿತನಾಗಿರುವುದಾಗಿ ಅರ್ಜಿದಾರರು ವಾದಿಸಿದ್ದರು.

ನ್ಯಾಯಮೂರ್ತಿ ಚಂದ್ರಶೇಖರ್‌ ಅವರು ಈ ಅರ್ಜಿ ವಿಚಾರಣೆ ನಡೆಸಿದ ಬಳಿಕ ನಾಮಫಲಕಗಳನ್ನು ಕನ್ನಡದಲ್ಲಿಯೇ ಹಾಕುವುದನ್ನು ಬೆಂಬಲಿಸಿ ಲಕ್ಷ್ಮಣ್‌ ಅವರ ಅರ್ಜಿಯನ್ನು ತಳ್ಳಿ ಹಾಕಿದರು. 24-ಎ ಕಾಯ್ದೆ ಯ ಉಲ್ಲಂಘನೆ ಸಲ್ಲ ಎಂದು ತೀರ್ಪು ನೀಡಿದರು.

(ಇನ್ಫೋ ವಾರ್ತೆ)

What do you think about this?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X