• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಹಿಂದಿ ಅನುವಾದಿತ ಕುವೆಂಪು ಕೃತಿಯನ್ನು ಪ್ರಧಾನಿ ಬಿಡುಗಡೆ ಮಾಡಬೇಕು’

By Staff
|

Kuvempuಬೆಂಗಳೂರು : ಸದಾ ಅಧಿಕಾರ - ರಾಜಕೀಯದ ಬಗ್ಗೆಯೇ ಚಿಂತಿಸುವ ರಾಜಕಾರಣಿಗಳಿಗೂ ಒಮ್ಮೊಮ್ಮೆ ಒಳ್ಳೇ ಆಲೋಚನೆ ಬರತ್ತೆ. ರಾಜಕಾರಣಿಗಳೂ ಸಾಹಿತ್ಯ, ಕಲೆ, ಸಂಸ್ಕೃತಿಯ ಬಗ್ಗೆ ಆಲೋಚನೆ ಮಾಡ್ತಾರೆ. ಇದಕ್ಕೆ ರಾಜ್ಯದ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡರ ಚಿಂತನೆಯೇ ಆಧಾರ.

ಏನಪ್ಪ ಅಂಥ ಮಹತ್ವದ ಆಲೋಚನೆ ಅಂತೀರಾ? ಮೊನ್ನೆ ಕುವೆಂಪು ಕಲಾ ನಿಕೇತನ ಬೆಂಗಳೂರಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಭಾಗವಹಿಸಿದ್ದರು. ತಾವು ಪಾಲ್ಗೊಂಡಿರುವುದು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಎಂಬುದನ್ನು ಅರಿತೇ ಸಚಿವರು ಮಾತಾಡಿದರು. (ಕೇಂದ್ರ ಸಚಿವ ಅನಂತಕುಮಾರ್‌ ಉಡುಪಿಯ ಕನಕ ಮಂಟಪ ಉದ್ಘಾಟನೆ ಸಮಾರಂಭದಲ್ಲಿ ಭಾರತ-ಪಾಕ್‌ ಗಡಿಯ ಉದ್ವಿಗ್ನತೆ - ಯುದ್ಧದ ಅಗತ್ಯದ ಬಗ್ಗೆ ಮಾತಾಡಿದಂತೆ ಮಾತಾಡಲಿಲ್ಲ)

ಕುವೆಂಪು ಅವರ ಸಾಹಿತ್ಯದ ಬಗ್ಗೆ, ಅದರ ಹಿರಿಮೆಯ ಬಗ್ಗೆ ಮಾತಾಡಿದ ಅವರು ಕುವೆಂಪು ಅವರ ವಿಚಾರಧಾರೆ ಇಡೀ ಭಾರತಕ್ಕೆ ತಿಳಿಯಬೇಕಾದರೆ ಏನು ಮಾಡಬೇಕು ಎಂಬುದನ್ನೂ ತಿಳಿಸಿದರು. ಅವರು ಮಾಡಿದ ಅದ್ಭುತ ಸಲಹೆ ಏನು ಗೊತ್ತೆ?

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ‘ಶ್ರೀರಾಮಾಯಣ ದರ್ಶನಂ’ ಕೃತಿಯನ್ನು ಮೊದಲು ಬಹುಮಂದಿ ಮಾತನಾಡುವ ಹಿಂದಿಗೆ ಅನುವಾದಿಸಬೇಕು. ಆನಂತರ ಆ ಹಿಂದಿ ಅನುವಾದಿತ ಕೃತಿಯನ್ನು ಸ್ವತಃ ಕವಿಗಳೂ ಆಗಿರುವ ರಾಷ್ಟ್ರದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಬಿಡುಗಡೆ ಮಾಡಿಸಬೇಕು. (ಚಂದ್ರೇಗೌಡ ಕಾಂಗ್ರೆಸ್‌ ನಾಯಕರಾದರೂ ಅವರಿಗೆ ಇಲ್ಲಿ, ಪಕ್ಷ ಅಡ್ಡಿಯಾಗಲಿಲ್ಲ... ಹೀಗಾಗೇ ಅವರು ಆ ಕೃತಿಯನ್ನು ಸೋನಿಯಾ ಅಥವಾ ಎಸ್‌.ಎಂ. ಕೃಷ್ಣ ಬಿಡುಗಡೆ ಮಾಡಬೇಕು ಎಂದು ಹೇಳಲಿಲ್ಲ)

ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠದ ಗರಿತೊಡಿಸಿದ ಈ ಮಹಾನ್‌ ಕವಿಯ ಮಹತ್ವದ ಕೃತಿಯನ್ನು ಹಿಂದಿಗೆ ಅನುವಾದಿಸುವ ಅಗತ್ಯವನ್ನೂ ಅದು ಎಲ್ಲರನ್ನೂ ತಲುಪಬೇಕಾದರೆ ಅಂತಹ ಒಂದು ಮೇರು ಕೃತಿಯನ್ನು ಕವಿರಾಜರಾದ ಪ್ರಧಾನಿಯವರೇ ಬಿಡುಗಡೆ ಮಾಡಬೇಕೆಂದು ಅವರು ಪ್ರತಿಪಾದಿಸಿದರು. ಹಿರಿಯ ಸಾಹಿತಿ ದೇ.ಜವರೇಗೌಡ ಅವರ ಕಾಲದಲ್ಲೇ ಈ ಕಾರ್ಯ ಪೂರ್ಣವಾಗಬೇಕು ಎಂದೂ ಆಶಿಸಿದರು.

ಕುಪ್ಪಳ್ಳಿಗೆ ಹೋಗಲೇಬೇಕು: ಕುವೆಂಪು ಅವರ ಜೀವನ ಮತ್ತು ಸಾಧನೆಯ ಬಗ್ಗೆ ತಿಳಿಯಬೇಕಾದರೆ ಒಮ್ಮೆ ಕುಪ್ಪಳ್ಳಿಗೆ ಹೋಗಿ ಬರಲೇಬೇಕು ಎಂದರು. ರಾಜ್ಯ ಸಭಾ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more