• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆ ಮನೆಗೂ ಕನ್ನಡ ಸಾಹಿತ್ಯದ ಕಿಟ್‌: ಸರ್ಕಾರದ ಯೋಜನೆ

By Staff
|

ದಾವಣಗೆರೆ : ದಾಸ ಸಾಹಿತ್ಯವನ್ನೂ ಒಳಗೊಂಡ ಕನ್ನಡದ ಸಮಗ್ರ ಸಾಹಿತ್ಯದ ಕಿಟ್‌ ಅನ್ನು ಮುದ್ರಿಸಿ, ಕಡಿಮೆ ದರದಲ್ಲಿ ಮನೆಮನೆಗೂ ತಲುಪಿಸುವ ವಿನೂತನ ಯೋಜನೆಯನ್ನು ಸರಕಾರ ರೂಪಿಸಿದೆ. 1 ಕೋಟಿ ರುಪಾಯಿ ವೆಚ್ಚದಲ್ಲಿ ಪುಸ್ತಕ ಮುದ್ರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಹೇಳಿದ್ದಾರೆ.

ಮಂಗಳವಾರ ದಾವಣಗೆರೆಯ ಜಿಲ್ಲಾ ವನಿತಾ ಸಾಹಿತ್ಯ ಕಲಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಕೇಂದ್ರದ ಇಂದಿರಾಗಾಂಧೀ ಕಲಾಕೇಂದ್ರವು 90 ಲಕ್ಷ ರುಪಾಯಿ ವೆಚ್ಚದಲ್ಲಿ ದಾಸ ಸಾಹಿತ್ಯವನ್ನು ಮುದ್ರಿಸಿಕೊಡಲಿದೆ. ರಾಜ್ಯ ಸರಕಾರವು 10 ಲಕ್ಷ ರು ವೆಚ್ಚದಲ್ಲಿ ಕನ್ನಡ ಸಮಗ್ರ ಸಾಹಿತ್ಯದ ಕಿಟ್‌ ಹೊರತರಲಿದೆ ಎಂದೂ ವಿವರಿಸಿದರು.

ಕನ್ನಡಿಗರೆಲ್ಲರ ಮನೆಯಲ್ಲೂ ಪುಟ್ಟದೊಂದು ಗ್ರಂಥಾಲಯ ಹೊಂದಲು ಈ ಯೋಜನೆ ಸಹಕಾರಿಯಾಗಲಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಈ ಕಿಟ್‌ ಮಾರಾಟ ಮಾಡಲಾಗುವುದು ಎಂದರು. ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಹವ್ಯಾಸ ಮೂಡಿಸಲು ಮತ್ತು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಕನ್ನಡ ಸಾಹಿತ್ಯದ ಪರಿಚಯ ಮಾಡಿಸುವುದು ಈ ಯೋಜನೆಯ ಉದ್ದೇಶ ಎಂದೂ ಸಚಿವೆ ತಿಳಿಸಿದರು.

ವಚನ ಸಾಹಿತ್ಯ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ವಚನ ಸಾಹಿತ್ಯದ ಪುನರ್‌ ಮುದ್ರಣ ಕಾರ್ಯ ಭರದಿಂದ ಸಾಗಿದೆ. ಡಿಸೆಂಬರ್‌ ವೇಳೆಗೆ ಸಮಗ್ರ ವಚನ ಸಾಹಿತ್ಯ ಸಂಪುಟ ಬಿಡುಗಡೆ ಮಾಡುವ ಉದ್ದೇಶ ಇಲಾಖೆಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ, ಪತ್ರಕರ್ತ ಷಡಕ್ಷರಪ್ಪ ಮೊದಲಾದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ದಾವಣಗೆರೆ ಇದು ನಮ್ಮ ಜಿಲ್ಲೆ ಕೃತಿ ರಚಿಸಿರುವ ಲೇಖಕಿ ಟಿ. ಗಿರಿಜಾ ಅವರಿಗೆ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

(ಇನ್‌ಫೋ ವಾರ್ತೆ)

ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more